Fir Filed Against Singer Rahul Jain For Allegedly Raping A Stylist He Says Allegation Baseless.

">

ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ! ಎಫ್‌ಐಆರ್ ದಾಖಲಿಸಿದ ಪೊಲೀಸರು

16-08-22 03:39 pm       Source: Vijayakarnataka   ಸಿನಿಮಾ

ಬಾಲಿವುಡ್‌ ಗಾಯಕ, ಸಂಗೀತ ನಿರ್ದೇಶಕ ರಾಹುಲ್ ಜೈನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 'ನನ್ನ ಮೇಲೆ ರಾಹುಲ್ ಜೈನ್ ಅತ್ಯಾಚಾರ ಎಸಗಿದ್ದಾರೆ..' ಎಂದು ಮಹಿಳೆಯೊಬ್ಬರು...

ಬಾಲಿವುಡ್‌ನ ಜನಪ್ರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಎಫ್‌ಐಆರ್ ದಾಖಲಾಗಿದೆ. 30 ವರ್ಷದ ಮಹಿಳೆಯೊಬ್ಬರು ರಾಹುಲ್ ವಿರುದ್ಧ ದೂರು ನೀಡಿದ್ದು, ತಮ್ಮ ಮೇಲೆ ರಾಹುಲ್ ಜೈನ್ ಅತ್ಯಾಚಾರ ಎಸಗಿದ್ದಾರೆ ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಆರೋಪದ ಬಗ್ಗೆ ರಾಹುಲ್ ಜೈನ್ ಪ್ರತಿಕ್ರಿಯೆ ನೀಡಿದ್ದು, 'ಇದೆಲ್ಲವೂ ಆಧಾರರಹಿತ ಹಾಗೂ ಸುಳ್ಳು..' ಎಂದಿದ್ದಾರೆ.

ಮುಂಬೈನ ಓಹಿಶ್ವರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ ಮೂಲಕ ರಾಹುಲ್ ಜೈನ್ ಅವರು ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಆ ಮಹಿಳೆಯ ಕೆಲಸವನ್ನು ಶ್ಲಾಘಿಸಿ, ಅಂಧೇರಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಬರುವಂತೆ ರಾಹುಲ್ ಆಹ್ವಾನ ನೀಡಿದ್ದಾರೆ. ಪರ್ಸನಲ್ ಕಾಸ್ಟ್ಯೂಮ್ & ಸ್ಟೈಲಿಸ್ಟ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ ಎಂದು ಆ ಮಹಿಳೆಗೆ ಆಫರ್ ನೀಡಿದ್ದಾರೆ ಎಂದು ಪೊಲೀಸರು ದೂರಿನಲ್ಲಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

FIR filed against singer Rahul Jain for allegedly raping costume stylist, he  denies allegations - Movies News

ಆಗಸ್ಟ್ 11ರಂದು ರಾಹುಲ್ ಜೈನ್ ಅಪಾರ್ಟ್‌ಮೆಂಟ್‌ಗೆ ಆ ಮಹಿಳೆ ಭೇಟಿ ನೀಡಿದ್ದರು. ತಮ್ಮಲ್ಲಿರುವ ಕಲೆಕ್ಷನ್ಸ್‌ ತೋರಿಸುವ ನೆಪದಲ್ಲಿ ರಾಹುಲ್ ಆ ಮಹಿಳೆಯನ್ನು ಬೆಡ್‌ರೂಮ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರ ಪ್ರಕಾರ, ಆ ಮಹಿಳೆಯು ಪ್ರೀಲ್ಯಾನ್ಸ್ ಕಾಸ್ಟ್ಯೂಮ್‌ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. 'ತನಗೆ ಸಹಕರಿಸಲಿಲ್ಲ ಎಂಬ ಕೋಪಕ್ಕೆ ನನ್ನ ಮೇಲೆ ರಾಹುಲ್ ಜೈನ್ ಹಲ್ಲೆ ಮಾಡಿದ್ದಾರೆ. ಸಾಕ್ಷ್ಯ ನಾಶ ಮಾಡುವ ಯತ್ನ ಕೂಡ ಮಾಡಿದ್ದಾರೆ' ಎಂದು ಮಹಿಳೆಯು ಆರೋಪಿಸಿದ್ದಾರೆ.

ಸೆಕ್ಷನ್ 376, 323 ಹಾಗೂ 506 ಅಡಿಯಲ್ಲಿ ರಾಹುಲ್ ಜೈನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಈವರೆಗೂ ರಾಹುಲ್ ಜೈನ್‌ರ ಬಂಧನವಾಗಿಲ್ಲ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, 'ಆ ಮಹಿಳೆ ಯಾರೆಂದೇ ನನಗೆ ಗೊತ್ತಿಲ್ಲ. ಆ ಮಹಿಳೆ ಮಾಡುತ್ತಿರುವ ಆರೋಪಗಳೆಲ್ಲ ಆಧಾರರಹಿತ ಮತ್ತು ಸುಳ್ಳು ಆಗಿದೆ. ಈ ಹಿಂದೆಯೂ ಮಹಿಳೆಯೊಬ್ಬರು ನನ್ನ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ ನನಗೆ ನ್ಯಾಯ ಸಿಕ್ಕಿದೆ. ಬಹುಶಃ ಈಗ ಆರೋಪ ಮಾಡುತ್ತಿರುವ ಮಹಿಳೆ ಕೂಡ ಆ ಮಹಿಳೆಯ ಗುಂಪಿನವರೇ ಇರಬೇಕು' ಎಂದಿದ್ದಾರೆ.

FIR registered against Rahul Jain: Costume stylist alleges rape; Singer said  - I do not know the woman, this case is fake - Divya Bharat 🇮🇳