ಜನಾಂಗೀಯ ನಿಂದನೆ : ಅಮೆರಿಕಾದ ರೆಸ್ಟೋರೆಂಟ್ ವಿರುದ್ಧ ಅನನ್ಯ ಬಿರ್ಲಾ ಕಿಡಿ

27-10-20 11:53 am       Headline Karnataka News Network   ಸಿನಿಮಾ

ಅಮೆರಿಕದ ರೆಸ್ಟಾರೆಂಟೊಂದು ತಮ್ಮ ವಿರುದ್ಧ ಜನಾಂಗೀಯ ತಾರತಮ್ಯ ಮಾಡಿದೆ ಎಂದು ದೇಶದ ಪ್ರಖ್ಯಾತ ಉದ್ಯಮಿ ಕುಮಾರಮಂಗಳಂ ಬಿರ್ಲಾ ಅವರ ಮಗಳು ಅನನ್ಯಾ ಬಿರ್ಲಾ ಆಪಾದಿಸಿದ್ದಾರೆ.

ಅಮೆರಿಕಾ, ಅಕ್ಟೋಬರ್ .27 : ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ ಸ್ಕೂಪಾ ರೆಸ್ಟೋರೆಂಟ್ ನ ಜನಾಂಗೀಯ ನಿಂದನೆ ನಡವಳಿಕೆ ವಿರುದ್ಧ ಉದ್ಯಮಿ ಕುಮಾರಮಂಗಳಂ ಬಿರ್ಲಾ ಅವರ ಪುತ್ರಿ  ನಟಿ ಮತ್ತು ಗಾಯಕಿ ಅನನ್ಯಾ ಬಿರ್ಲಾ ವಾಗ್ದಾಳಿ ನಡೆಸಿದ್ದಾರೆ.

ನಾವು ಆರ್ಡರ್‌ ಮಾಡಿ ಮೂರುಗಂಟೆ ಕಾಯುವಂತಾಯಿತು. ಈ ರೆಸ್ಟಾರೆಂಟ್‌ನ ವೇಟರ್‌ ಜೋಶುವಾ ಸಿಲ್ವರ್‌ವೆುನ್‌ ಅಮ್ಮನೊಂದಿಗೆ ಅತ್ಯಂತ ಒರಟಾಗಿ ವರ್ತಿಸಿದ್ದಾರೆ. ಇದು ಸರಿಯಲ್ಲ. ಸ್ಕೋಪಾ ರೆಸ್ಟಾರೆಂಟ್‌ ಅಕ್ಷರಶಃ ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರನ್ನು ಹೊರದಬ್ಬಿ ಜನಾಂಗೀಯ ತಾರತಮ್ಯ ಮಾಡಿದೆ. ಈ ಘಟನೆಯಿಂದಾಗಿ ನನಗೆ ಬಹಳ ದುಃಖವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. 

ರೆಸ್ಟೋರೆಂಟ್ ಸಿಬ್ಬಂದಿಯ ವರ್ತನೆ ಕಂಡು ತುಂಬಾ ಆಘಾತವಾಗಿದೆ. ಯಾವೊಬ್ಬ ಗ್ರಾಹಕರನ್ನೂ ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ನಿಮಗಿಲ್ಲ ಎಂದು ತಾಯಿ ನೀರಜಾ ಬಿರ್ಲಾ ಕೂಡ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ. ಇನ್ನು ಅನನ್ಯಾ ಸಹೋದರ ಆರ್ಯಮನ್ ಬಿರ್ಲಾ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.