ಗ್ರಾಮ ಪಂಚಾಯಿತಿ ಚುನಾವಣೆ: ಪ್ರಜಾಕೀಯದಿಂದ ಚುನಾವಣೆಗೆ ನಿಲ್ಲಲು ಉಪೇಂದ್ರ ಸಲಹೆ

04-12-20 10:59 am       Source: FILMIBEAT   ಸಿನಿಮಾ

ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಪ್ರಜಾಕೀಯ ಪಕ್ಷದಿಂದ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದಂತೆ.

ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಎಲ್ಲಾ ರಾಜಕೀಯ ಪಕ್ಷಗಳು ಇದೀಗ ಹಳ್ಳಿ ರಾಜಕೀಯದತ್ತ ಮುಖ ಮಾಡಿವೆ.

ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಸಹ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಮಾತನಾಡಿದ್ದು, ತಮ್ಮ ಉತ್ತಮ ಪ್ರಜಾಕೀಯ ಪಕ್ಷದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಹೇಗೆ ಸ್ಪರ್ಧಿಸಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಪ್ರಜಾಕೀಯ ಪಕ್ಷದಿಂದ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದಂತೆ. ಪ್ರಜಾಕೀಯದ ಸದಸ್ಯರೇ ನಿಲ್ಲಬೇಕು ಎಂಬ ನಿಯಮ ಏನೂ ಇರುವುದಿಲ್ಲ ಎಂದಿದ್ದಾರೆ ಉಪೇಂದ್ರ.

ಆದರೆ ಪ್ರಜಾಕೀಯದಿಂದ ಏಳು ಕಾರ್ಯವೈಖರಿ ವಿಧಾನವನ್ನು ಉಪೇಂದ್ರ ಅವರು ಬಿಡುಗಡೆ ಮಾಡಿದ್ದು, ಆ ಕಾರ್ಯ ವೈಖರಿಯನ್ನು ಜನರಿಗೆ ತೋರಿಸಿ ಮತಯಾಚನೆ ಮಾಡಬೇಕು, ಹಾಗೂ ಗೆದ್ದ ನಂತರ ಅದೇ ಕಾರ್ಯವೈಖರಿಯಂತೆ ನಡೆದುಕೊಳ್ಳಬೇಕು ಎಂದಿದ್ದಾರೆ ಉಪೇಂದ್ರ. ಜೊತೆಗೆ ಹಣ ಖರ್ಚು ಮಾಡಿ ಪ್ರಚಾರ ಮಾಡುವಂತಿಲ್ಲ ಎಂಬ ಪಕ್ಷದ ಷರತ್ತನ್ನು ಒತ್ತಿ ಹೇಳಿದ್ದಾರೆ.

ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಮೊದಲ ಹಂತದ ಚುನಾವಣೆಗೆ ಡಿಸೆಂಬರ್ 11 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲನೇ ಹಂತದ ಚುನಾವಣೆ ಮತದಾನವು ಡಿಸೆಂಬರ್ 22, ಎರಡನೇ ಹಂತದ ಮತದಾನ ಡಿಸೆಂಬರ್ 27 ರಂದು ನಡೆಯಲಿದೆ. ಫಲಿತಾಂಶವು ಡಿಸೆಂಬರ್ 30 ರಂದು ಪ್ರಕಟವಾಗಲಿದೆ.

This News Article is a Copy of FILMIBEAT