'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ

21-12-20 02:57 pm       Source: FILMIBEAT Shruthi Gk   ಸಿನಿಮಾ

ರಿಯಲ್ ಹೀರೋ ಆಗಿರುವ ನಟ ಸೋನು ಸೂದ್, ಅನೇಕರ ಪಾಲಿನ ದೇವರಾಗಿದ್ದಾರೆ. ಇದೀಗ ಸೋನು ಸೂದ್ ಹೆಸರಿನಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.

ತೆಲಂಗಾಣ, ಡಿ.21: ಕೊರೊನಾ ಲಾಕ್ ಡೌನ್ ಬಳಿಕ ಕಷ್ಟದಲ್ಲಿದ್ದ ಲಕ್ಷಾಂತರ ಜನರಿಗೆ ಸಹಾಯ ಮಾಡಿ ರಿಯಲ್ ಹೀರೋ ಆಗಿರುವ ನಟ ಸೋನು ಸೂದ್, ಅನೇಕರ ಪಾಲಿನ ದೇವರಾಗಿದ್ದಾರೆ. ಸಂಕಷ್ಟದಲ್ಲಿದ್ದ ಜನರ ನೆರವಿಗೆ ನಿಂತಿದ್ದ ಸೋನು ಸೂದ್ ಅವರನ್ನು ಅನೇಕರು ದೇವರಂತೆ ಪೂಜಿಸುತ್ತಾರೆ. ಇದೀಗ ಸೋನು ಸೂದ್ ಹೆಸರಿನಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಹೌದು, ತೆಲಂಗಾಣದ ಸಿದ್ದಿಪೇಟೆಯ, ದುಬ್ಬತಂಡ ಗ್ರಾಮದ ಜನರು ನಟ ಸೋನು ಸೂದ್ ಗಾಗಿ ದೇವಾಲಯವನ್ನು ನಿರ್ಮಿಸಿ, ಪೂಜಿಸಿದ್ದಾರೆ. ಸೋನು ಸೂದ್ ಮಾನವೀಯ ಕೆಲಸ ಮೆಚ್ಚಿ, ಅವರಿಗಾಗಿ ಗುಡಿ ಕಟ್ಟಿ ಪೂಜಿಸು ಪ್ರಾರಂಭಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ಬಾರಿ ಪ್ರಶಂಸೆ ಗಿಟ್ಟಿಸಿದ್ದರು. ಅವರ ಮಾನವೀಯ ಕೆಲಸ ಅಲ್ಲಿಗೆ ನಿಲ್ಲದೆ, ಇವತ್ತಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಬಡವರು, ವಿದ್ಯಾರ್ಥಿಗಳ ಶಿಕ್ಷಣ, ಆಸ್ಪತ್ರೆ ಖರ್ಚು ಸೇರಿದಂತೆ ಕಷ್ಟ ಎಂದ ಅನೇಕರಿಗೆ ನೆರವಾಗಿದ್ದಾರೆ.



ಇಡೀ ದೇಶ ಸೋನು ಸೂದ್ ಮಾನವೀಯ ಕೆಲಸ ಮೆಚ್ಚಿ ಶ್ಲಾಘಿಸುತ್ತಿದೆ. ಆದರೆ ತೆಲಂಗಾಣ ಜನತೆ ಒಂದು ಹೆಜ್ಜೆ ಮುಂದೆ ಹೋಗಿ ದೇವಾಲಯವನ್ನು ನಿರ್ಮಿಸಿ ಪೂಜಿಸಲು ಪ್ರಾರಂಭಿಸಿದ್ದಾರೆ. ಲಾಕ್ ಡೌನ್ ಬಳಿಕ ಸೋನು ಸೂದ್ ನಮಗೆ ಸಹಾಯ ಮಾಡಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರು ಸೋನು ಸೂದ್, ಯಾವುದೇ ಸಮಸ್ಯೆಯಾದರೂ ಬಗೆಹರಿಸಿದ್ದಾರೆ. ಭಾರತದಲ್ಲಿ ಇರುವ ಒಬ್ಬರೇ ದೇವರು ಅದು ಸೋನು ಸೂದ್ ಎಂದು ಸ್ಥಳಿಯರು ಹಾಡುಹೊಗಳುತ್ತಿದ್ದಾರೆ.

This News Article is a Copy of FILMIBEAT