ಎಸ್ ಪಿ ಬಿಗೆ 'ಸ್ವೀಟ್' ಗೌರವ; ಚಾಕೋಲೇಟ್ ನಲ್ಲಿ ಗಾನ ಗಂಧರ್ವನ ಪ್ರತಿಮೆ

24-12-20 12:55 pm       Source: FILMIBEAT Shruthi Gk   ಸಿನಿಮಾ

ಚಾಕೋಲೇಟ್ ಅಂಗಡಿಯೊಂದರಲ್ಲಿ ಗಾಯಕ ಎಸ್ ಪಿ ಬಿ ಚಾಕೋಲೇಟ್ ಪ್ರತಿಮೆ ನಿರ್ಮಾಣ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರು, ಡಿ.24: ದಿವಂಗತ ಖ್ಯಾತ ಹಿನ್ನಲೆ ಗಾಯಕ, ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸ್ಮರಣೆಗಾಗಿ ಚಾಕೋಲೇಟ್ ಅಂಗಡಿಯೊಂದರಲ್ಲಿ ಗಾಯಕ ಎಸ್ ಪಿ ಬಿ ಚಾಕೋಲೇಟ್ ಪ್ರತಿಮೆ ನಿರ್ಮಾಣ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಈ ಚಾಕೋಲೇಟ್ ಪ್ರತಿಮೆ ನಿರ್ಮಾಣವಾಗಿದ್ದು, ಪುದುಚೇರಿಯ ಮಿಷನ್ ಸ್ಟ್ರೀಟ್ ನಲ್ಲಿರುವ ಅಂಗಡಿಯಲ್ಲಿ. ಸುಮಾರು 5.8 ಅಡಿ ಎತ್ತರದ 339 ತೂಕದ ಬಾಲಸುಬ್ರಹ್ಮಣ್ಯಂ ಚಾಕೋಲೇಟ್ ಪ್ರತಿಮೆ ಎಲ್ಲರ ಗಮನ ಸೆಳೆಯುತ್ತಿದೆ.

ಈ ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕೋಲೇಟ್ ನಿಂದಲೇ ಮಾಡಲಾಗಿದೆ. ಈ ಕ್ರಿಸ್ಮಸ್ ಮತ್ತು ಹೊಸ ವರ್ಷ ಸೀಸನ್ ನಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲಿಕರು ಈ ಪ್ರತಿಮೆ ಪ್ರದರ್ಶನ ಏರ್ಪಡಿಸಿದ್ದಾರೆ.



ಅಂದಹಾಗೆ ಈ ಸುಂದರ ಸ್ವೀಟ್ ಪ್ರತಿಮೆಯನ್ನು ಅಂಗಡಿಯ ಮುಖ್ಯ ಬಾಣಸಿಗ ರಾಜೇಂದ್ರನ್ ತನ್ನ ತಂಡದೊಂದಿಗೆ ತಯಾರಿಸಿದ್ದಾರೆ. ಈ ಪ್ರತಿಮೆಯನ್ನು ಮುಂದಿನ ವರ್ಷ ಜನವರಿ 3ರ ವರೆಗೂ ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಅಂಗಡಿ ಚಾಕೋಲೇಟ್ ಪ್ರತಿಮೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಎಪಿಜೆ ಅಬ್ದುಲ್ ಕಲಾಂ, ನಟ ರಜನಿಕಾಂತ್ ಪ್ರತಿಮೆಗಳನ್ನು ನಿರ್ಮಾಣ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಎಸ್ ಪಿ ಬಿ ಪ್ರತಿಮೆ ನಿರ್ಮಾಣ ಮಾಡಿ, ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

This News Article is a Copy of FILMIBEAT