ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆ

30-12-20 11:51 am       Source: FILMIBEAT   ಸಿನಿಮಾ

ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ವಿಷ್ಣುದಾದಾ ಅಗಲಿ ಇಂದಿಗೆ 11 ವರ್ಷಗಳು ಕಳೆದಿವೆ.

Photo credits : FILMIBEAT

ಬೆಂಗಳೂರು, ಡಿ.30: ಕನ್ನಡದ ಮೇರು ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯತಿಥಿ ಆಚರಿಸಲಾಗುತ್ತಿದೆ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ವಿಷ್ಣುದಾದಾ ಅಗಲಿ ಇಂದಿಗೆ 11 ವರ್ಷಗಳು ಕಳೆದಿವೆ. ಆದರೂ ವಿಷ್ಣು ಕನ್ನಡ ಚಿತ್ರಪ್ರಿಯರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. 2009 ಡಿಸೆಂಬರ್ 30 ಕನ್ನಡ ಚಿತ್ರರಂಗದ ಪಾಲಿನ ಕರಾಳದಿನ.

ಅದ್ಭುತ ಸಿನಿಮಾಗಳನ್ನು ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದ ವಿಷ್ಣು ದಾದಾ ಮರೆಯಾದ ದಿನವಿದು. 11ವರ್ಷಗಳ ಹಿಂದೆ ಇದೇ ದಿನ ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅನಾಥಮಾಡಿ, ವಿಷ್ಣುದಾದಾ ಬಾರದ ಲೋಕಕ್ಕೆ ಹೊರಟು ಹೋಗಿದ್ದರು. ಸಾಹಸಿಂಹ ಮರೆಯಾಗಿ11 ವರ್ಷಗಳು ಕಳೆದಿವೆ. ಇಂದು ಅವರ ಪುಣ್ಯ ಸ್ಮರಣೆ. ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋಗೆ ಬಂದು ನೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ ವಿಷ್ಣುದಾದಾನನ್ನು ಸ್ಮರಿಸಲಿದ್ದಾರೆ.

ಇನ್ನು ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲಿ ಸ್ಮಾರಕ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ಅಭಿಮಾನಿಗಳು ಸಹ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪುಣ್ಯಸ್ಮರಣೆಯ ಅಂಗವಾಗಿ ಅಭಿಮಾನಿಗಳಿಂದ ಅನ್ನದಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ.

This News Article is a Copy of FILMIBEAT