ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡುವುದು ಹೇಗೆ?

02-01-21 11:03 am       Source: GIZBOT   ಸಿನಿಮಾ

ಫೇಸ್‌ಬುಕ್‌ ಪ್ರೊಫೈಲ್‌ ಲಾಕ್‌ ಫೀಚರ್ಸ್ ಬಳಕೆದಾರರ ಮಾಹಿತಿ ಸ್ನೇಹಿತರಲ್ಲದವರಿಗೆ ತಿಳಿಯದಂತೆ ಮಾಡಲು ಸಹಾಯಕವಾಗಿದೆ.

ಸಾಮಾಜಿಕ ಜಾಲತಾಣಗಳ ದೈತ್ಯ ಫೆಸ್‌ಬುಕ್‌ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ಫೇಸ್‌ಬುಕ್‌ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಬಳಕೆದಾರರ ಗೌಪ್ಯತೆ ಕಾಪಾಡುವಲ್ಲಿ ಸಾಕಷ್ಟು ಕ್ರಮಗಳನ್ನ ಕೈ ಗೊಂಡಿರುವ ಫೇಸ್‌ಬುಕ್‌ ಕಳೆದ ವರ್ಷ ಫೇಸ್‌ಬುಕ್‌ ಭಾರತದ ಬಳಕೆದಾರರಿಗಾಗಿ ಫೇಸ್‌ಬುಕ್ ಪ್ರೊಫೈಲ್ ಲಾಕ್ ಫೀಚರ್ಸ್‌ ಅನ್ನು ಪರಿಚಯಿಸಿತು. ಹೆಸರೇ ಸೂಚಿಸುವಂತೆ, ಈ ಫೀಚರ್ಸ್‌ ಬಳಕೆದಾರರ ಸ್ನೇಹಿತರ ಪಟ್ಟಿಯಲ್ಲಿಲ್ಲದ ಬಳಕೆದಾರರಿಂದ ತಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಲು ಅನುಮತಿಸುತ್ತದೆ.

ಹೌದು, ಫೇಸ್‌ಬುಕ್‌ ಪ್ರೊಫೈಲ್‌ ಲಾಕ್‌ ಫೀಚರ್ಸ್ ಬಳಕೆದಾರರ ಮಾಹಿತಿ ಸ್ನೇಹಿತರಲ್ಲದವರಿಗೆ ತಿಳಿಯದಂತೆ ಮಾಡಲು ಸಹಾಯಕವಾಗಿದೆ. ಇದು ದೇಶದ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇನ್ನು ಫೇಸ್‌ಬುಕ್‌ನಲ್ಲಿ ಪ್ರೊಫೈಲ್‌ ಲಾಕ್‌ ಅನ್ನು ಬಳಸುವುದು ಹೇಗೆ ಅನ್ನೊದು ಕೆಲವರಿಗೆ ತಿಳಿದೆ ಇಲ್ಲ. ಸದ್ಯ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ನೀವು ಹೇಗೆ ಲಾಕ್ ಮಾಡಬಹುದು



ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡುವುದು ಹೇಗೆ?

ಹಂತ 1: ನಿಮ್ಮ ಫೇಸ್‌ಬುಕ್‌ ಪ್ರೊಫೈಲ್ ಪೇಜ್‌ಗೆ ಭೇಟಿ ನೀಡಿ

ಹಂತ 2: ನಂತರ ನಿಮ್ಮ ಪ್ರೊಫೈಲ್ ಹೆಸರಿನಲ್ಲಿ ‘More' ಟ್ಯಾಪ್ ಮಾಡಿ

ಹಂತ 3: ಡ್ರಾಪ್ ಡೌನ್ ಮೆನುವಿನಿಂದ ‘ಲಾಕ್ ಪ್ರೊಫೈಲ್' ಆಯ್ಕೆಯನ್ನು ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ

ಹಂತ 4: ಅದರ ಮೇಲೆ ಟ್ಯಾಪ್ ಮಾಡಿದ ನಂತರ ನಿಮ್ಮ ಸ್ಕ್ರೀನ್‌ ಮೇಲೆ ದೃಡೀಕರಣ ಮೆಸೇಜ್‌ ಅನ್ನು ಸ್ವೀಕರಿಸುತ್ತೀರಿ.

ಹಂತ 5: ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಲು ‘ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿ' ಕ್ಲಿಕ್ ಮಾಡಿ.



ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ನೀವು ಲಾಕ್ ಮಾಡಿದರೆ ಏನಾಗುತ್ತದೆ?

ಫೇಸ್‌ಬುಕ್ ಪ್ರೊಫೈಲ್ ಲಾಕ್ ಆಗಿದ್ದರೆ, ಬಳಕೆದಾರರು ತಮ್ಮ ಸ್ನೇಹಿತರ ಪಟ್ಟಿಯಿಂದ ಯಾರಾದರೂ ತಮ್ಮ ಫೋಟೋಗಳು, ಪೋಸ್ಟ್‌ಗಳು ಮತ್ತು ಇತರ ವಿವರಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅವರು ತಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಲು ಮತ್ತು ಫೇಸ್‌ಬುಕ್‌ನಲ್ಲಿ ಅವರು ಸ್ನೇಹಿತರಲ್ಲದ ಜನರಿಗೆ ತಮ್ಮ ಪ್ರೊಫೈಲ್ ವಿಷಯದ ಸೀಮಿತ ನೋಟವನ್ನು ತೋರಿಸಲು ಆಯ್ಕೆ ಮಾಡಬಹುದಾಗಿದೆ.

ಇನ್ನು ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ನೀವು ಲಾಕ್ ಮಾಡಿದಾಗ, ನಿಮ್ಮ ಸ್ನೇಹಿತರ ಪಟ್ಟಿಯ ಹೊರಗಿನ ಜನರು ಟೈಮ್‌ಲೈನ್, ಪೂರ್ಣ ಗಾತ್ರದ ಪ್ರೊಫೈಲ್ ಚಿತ್ರ ಅಥವಾ ಕವರ್ ಫೋಟೋ, ಕಥೆಗಳು, ಹೊಸ ಪೋಸ್ಟ್‌ಗಳು ಮತ್ತು ಫೋಟೋಗಳು ಮತ್ತು ಇತರವುಗಳಲ್ಲಿ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.

This News Article is a Copy of GIZBOT