ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ 'ರುದ್ರಿ'ಗೆ ಎರಡು ಪ್ರಶಸ್ತಿ

15-01-21 02:55 pm       Source: FILMIBEAT Manjunatha C   ಸಿನಿಮಾ

ಕನ್ನಡ ಸಿನಿಮಾ 'ರುದ್ರಿ'ಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಎರಡು ಪ್ರಮುಖ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಸಿನಿಮಾ 'ರುದ್ರಿ'ಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಎರಡು ಪ್ರಮುಖ ಪ್ರಶಸ್ತಿ ನೀಡಲಾಗಿದೆ. ಬೀರಬಲ್ಲ ಹುಟ್ಟಿದ ಮಧ್ಯಪ್ರದೇಶದ ಸಿಧಿಯಲ್ಲಿ ಜನವರಿ 8 ರಿಂದ ಜನವರಿ 10 ರ ವರೆಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯಿತು.

ವಿಂದ್ಯಾ ಸಿನಿಮಾ ಉತ್ಸವದಲ್ಲಿ 'ರುದ್ರಿ'ನಲ್ಲಿ ನಟಿಸಿರುವ ಪಾವನಾ ಗೌಡ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರೆತಿದೆ. ಜೊತೆಗೆ ಸಿನಿಮಾ ಉತ್ಸವದ ಎರಡನೇ ಅತ್ಯುತ್ತಮ ಫೀಚರ್ ಫಿಲಂ ಎಂಬ ಹೆಗ್ಗಳಿಕೆಗೆ ಸಹ 'ರುದ್ರಿ' ಭಾಜನವಾಗಿದೆ.



46 ದೇಶಗಳ ಸುಮಾರು 350 ಕ್ಕೂ ಹೆಚ್ಚು ಸಿನಿಮಾಗಳು ಸಿನಿಮಾ ಉತ್ಸವದಲ್ಲಿ ಭಾಗವಹಿಸಿದ್ದವು. ಅಂತಿಮ ಸುತ್ತಿನಲ್ಲಿ ರುದ್ರಿ ಜೊತೆಯಲ್ಲಿ ಇನ್ನೂ 14 ಸಿನಿಮಾಗಳು ಇದ್ದವು. ಕೊನೆಗೆ 'ರುದ್ರಿ' ಎರಡನೇ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಗೆ ಭಾಜನವಾಯಿತು. ಪ್ರಶಸ್ತಿಯನ್ನು ನಿರ್ದೇಶಕ ಬಡಿಗೇರ್ ದೇವೇಂದ್ರ ಸ್ವೀಕರಿಸಿದರು. 'ರುದ್ರಿ' ಸಿನಿಮಾಕ್ಕೆ ಪ್ರಶಸ್ತಿ ಬಂದಿದ್ದಕ್ಕೆ ಚಿತ್ರತಂಡ ಅತೀವ ಸಂತಸ ವ್ಯಕ್ತಪಡಿಸಿದ್ದು, ಪ್ರಶಸ್ತಿಯು ಇಡೀಯ ಚಿತ್ರತಂಡದ ಶ್ರಮದ ಫಲ ಎಂದಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದು, ಸಿ.ಆರ್.ಮಂಜುನಾಥ ಸಿನಿಮಾ ನಿರ್ಮಿಸಿದ್ದಾರೆ.
 

This News Article is a Copy of FILMIBEAT