ತೆಲುಗು ಸಿನಿಮಾ ಖ್ಯಾತ ನಿರ್ಮಾಪಕ, ವಿತರಕ ದೊರೆಸ್ವಾಮಿ ರಾಜು ನಿಧನ

19-01-21 12:53 pm       Source: FILMIBEAT   ಸಿನಿಮಾ

ತೆಲುಗು ಸಿನಿಮಾರಂಗದ ಖ್ಯಾತ ನಿರ್ಮಾಪಕ, ವಿತರಕ ದೊರೆಸ್ವಾಮಿ ರಾಜು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ತೆಲುಗು ಸಿನಿಮಾರಂಗದ ಖ್ಯಾತ ನಿರ್ಮಾಪಕ, ವಿತರಕ ದೊರೆಸ್ವಾಮಿ ರಾಜು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ದೊರೆಸ್ವಾಮಿ ಅವರು ಜೂ.ಎನ್‌ಟಿಆರ್, ನಾಗಾರ್ಜುನ, ನಾನಿ ಇನ್ನೂ ಹಲವಾರು ಖ್ಯಾತ ನಟರ ಸಿನಿಮಾಗಳನ್ನು ನಿರ್ಮಿಸಿದ್ದರು. ಹಲವಾರು ಖ್ಯಾತ ನಟರ ಸಿನಿಮಾಗಳನ್ನು ವಿತರಣೆ ಸಹ ಮಾಡಿದ್ದರು.

ಫಿಲಂ ಚೇಂಬರ್ ನ ಅಧ್ಯಕ್ಷರೂ ಆಗಿದ್ದ ದೊರೆಸ್ವಾಮಿ, ವಿತರಕರ ಕೌನ್ಸಿಲ್ ಮತ್ತು ಪ್ರದರ್ಶಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸುಮಾರು 1000 ಕ್ಕೂ ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ ದೊರೆಸ್ವಾಮಿ ರಾಜು.

ಜೂ.ಎನ್‌ಟಿಆರ್, ನಾನಿ, ನಿರ್ಮಾಪಕ ರಾಘವೇಂದ್ರ ರಾವ್, ನಿರ್ದೇಶಕ ಎಸ್‌ಎಸ್ ರಾಜಮೌಳಿ, ರಾಣಾ ದಗ್ಗುಬಾಟಿ ಇನ್ನೂ ಹಲವರು ದೊರೆಸ್ವಾಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದೋರಸ್ವಾಮಿ ರಾಜು ಇನ್ನಿಲ್ಲ ಎಂಬ ಸುದ್ದಿ ತುಂಬಾ ದುಃಖಕರವಾಗಿದೆ. ನಿರ್ಮಾಪಕ ಮತ್ತು ವಿತರಕರಾಗಿ ತೆಲುಗು ಚಲನಚಿತ್ರೋದ್ಯಮಕ್ಕೆ ಅವರು ಮಾಡಿದ ಸೇವೆಗಳು ಮರೆಯಲಾಗದವು.

ಸಿಂಹಾದ್ರಿಯ ಯಶಸ್ಸಿನಲ್ಲಿ ಅವರ ಪಾತ್ರ ನಿರ್ಣಾಯಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತಾ, ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಹಾನುಭೂತಿಯನ್ನು ಅರ್ಪಿಸುತ್ತೇನೆ. ಎಂದಿದ್ದಾರೆ ಜೂ ಎನ್‌ಟಿಆರ್.

ರಾಜಮೌಳಿ ಟ್ವೀಟ್ ಮಾಡಿ, 1000 ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ ದೊರೆಸ್ವಾಮಿ ರಾಜು ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸೀತಾರಾಮ ಗಾರಿ ಮನವರಾಲು, ಅನ್ನಮಯ್ಯ ಅದರಲ್ಲಿ ಕೆಲವು, ನಾನು ಸಿಂಹಾದ್ರಿ ಸಿನಿಮಾದಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದು ನನ್ನ ಸುಕೃತ ಎಂದಿದ್ದಾರೆ ರಾಜಮೌಳಿ.

This News Article is a Copy of FILMIBEAT