200 ಕೋಟಿ ಕ್ಲಬ್ ಸೇರಿದ 'ಮಾಸ್ಟರ್': ದಾಖಲೆ ಬರೆದ ದಳಪತಿ ವಿಜಯ್

22-01-21 03:09 pm       Source: FILMIBEAT   ಸಿನಿಮಾ

ತಮಿಳು ನಟ ವಿಜಯ್ ನಟಿಸಿರುವ 'ಮಾಸ್ಟರ್' ಸಿನಿಮಾದ ಅಬ್ಬರ ಮುಂದುವರಿದಿದೆ.

ತಮಿಳು ನಟ ವಿಜಯ್ ನಟಿಸಿರುವ 'ಮಾಸ್ಟರ್' ಸಿನಿಮಾದ ಅಬ್ಬರ ಮುಂದುವರಿದಿದೆ. ಲಾಕ್‌ಡೌನ್‌ ಬಳಿಕ ಬಹಳ ದೊಡ್ಡ ಮಟ್ಟದಲ್ಲಿ ತೆರೆಕಂಡ ಚಿತ್ರಕ್ಕೆ ಎಲ್ಲೆಡೆಯೂ ಒಳ್ಳೆಯ ರೆಸ್‌ಪಾನ್ಸ್ ಸಿಕ್ಕಿದೆ. 50 ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಟ್ಟಿದ್ದರೂ ಕಲೆಕ್ಷನ್‌ನಲ್ಲಿ ಮಾಸ್ಟರ್ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆದ 9ನೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿದೆ ಎಂದು ಹೇಳಲಾಗಿದೆ. ಈ ಮೂಲಕ ವಿಜಯ್ ಅಭಿನಯದ 4ನೇ ಚಿತ್ರ ಸತತವಾಗಿ 200 ಕೋಟಿ ಕ್ಲಬ್ ಪ್ರವೇಶಿಸಿದೆ. ತಮಿಳುನಾಡಿನಲ್ಲಿ ಮಾತ್ರ 100 ಕೋಟಿ ಗಳಿಸಿರುವ ಮಾಸ್ಟರ್ ಅಲ್ಲಿಯೂ ಅಪರೂಪದ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದೆ.

200 ಕೋಟಿ ಗಳಿಸಿದ ನಾಲ್ಕನೇ ಚಿತ್ರ ವರ್ಲ್ಡ್ ವೈಡ್ 200 ಕೋಟಿ ಗಳಿಸಿದ ವಿಜಯ್ ಚಿತ್ರಗಳ ಪೈಕಿ ಮಾಸ್ಟರ್ ಸಿನಿಮಾ ನಾಲ್ಕನೇಯದು. ಇದಕ್ಕೂ ಮುಂಚೆ ಮೆರ್ಸಲ್ (2017), ಸರ್ಕಾರ್ (2018) ಹಾಗೂ ಬಿಗಿಲ್ (2019) ಚಿತ್ರಗಳು 200 ಕೋಟಿ ಗಳಿಸಿತ್ತು ಎಂದು ದಾಖಲೆಗಳು ಹೇಳಿದೆ.



100 ಕೋಟಿ ಗಳಿಸಿದ ಚಿತ್ರಗಳು ವರ್ಲ್ಡ್ ವೈಡ್ 200 ಕೋಟಿ ಗಳಿಸಿದ ಈ ನಾಲ್ಕು ಚಿತ್ರಗಳು ತಮಿಳುನಾಡಿನಲ್ಲಿ ಅಪರೂದ ದಾಖಲೆ ಬರೆದಿದೆ. ತಮಿಳುನಾಡು ಒಂದರಲ್ಲಿ ಮಾತ್ರ ಸತತವಾಗಿ ನಾಲ್ಕನೇ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಇದಕ್ಕೂ ಮುಂಚೆ ತಮಿಳುನಾಡಿನಲ್ಲಿ ಮೆರ್ಸಲ್ (2017), ಸರ್ಕಾರ್ (2018) ಹಾಗೂ ಬಿಗಿಲ್ (2019) ಚಿತ್ರಗಳು ನೂರು ಕೋಟಿ ಬಾಚಿಕೊಂಡಿತ್ತು. ಈಗ ಮಾಸ್ಟರ್ ಸಹ ಈ ಪಟ್ಟಿ ಸೇರಿದೆ.



ಆಂಧ್ರ-ತೆಲಂಗಾಣದಲ್ಲಿ 13 ಕೋಟಿ ಮಾಸ್ಟರ್ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಜಯ್ ಮಾಸ್ಟರ್ ಅಬ್ಬರಿಸಿದ್ದು, ಇದುವರೆಗೂ 13 ಕೋಟಿ ಗಳಿಸಿದೆಯಂತೆ. ಇದು ಸಹ ಮಾಸ್ಟರ್ ಹೆಸರಿನಲ್ಲಿ ದಾಖಲಾಗಿರುವ ಹೊಸ ರೆಕಾರ್ಡ್.



ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರ ತಮಿಳು ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ರಜನಿಯ 2.0. (ಡಬ್ಬಿಂಗ್ ಚಿತ್ರಗಳನ್ನು ಬಿಟ್ಟು - ಬಾಹುಬಲಿ, ಸಾಹೋ) ತಲೈವಾ ನಟನೆಯ ಈ ಚಿತ್ರ 500 ಕೋಟಿ ಗಳಿಸಿದೆ. ಎರಡನೇ ಸ್ಥಾನದಲ್ಲಿ ಬಿಗಿಲ್ (ವಿಜಯ್ ಸಿನಿಮಾ- 300 ಕೋಟಿ). ಮೂರನೇ ಸ್ಥಾನದಲ್ಲಿ ಎಂಥೀರನ್ (290 ಕೋಟಿ).

This News Article is a Copy of FILMIBEAT