ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ನಟಿ, ಸಂಸದೆ ಸುಮಲತಾ ಅಂಬರೀಶ್

23-01-21 12:36 pm       Source: FILMIBEAT Manjunatha C   ಸಿನಿಮಾ

ಶಿವಮೊಗ್ಗದಲ್ಲಿ ನಡೆದ ಘಟನೆ ತಿಳಿದು ತೀವ್ರ ನೋವಾಯಿತು. ನಮ್ಮೆಲರಿಗೂ ಇದೊಂದು ಎಚ್ಚರಿಕೆಯ ಗಂಟೆ. ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಸಮಯ ಬಂದಿದೆ' ಎಂದಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಘಟನೆ ನಂತರ ಹಲವರು ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡುತ್ತಿದ್ದಾರೆ. ನಿನ್ನೆ ರಾತ್ರಿ ಶಿವಮೊಗ್ಗದ ಕಲ್ಲುಗಣಿಯೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಐವರು ಮೃತಪಟ್ಟಿದ್ದಾರೆ. ಕಲ್ಲು ಗಣಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಹಲವರು ಸಂತಾಪ ಸೂಚಿಸಿದ್ದು, ಗಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಹ ಒತ್ತಾಯಿಸಿದ್ದಾರೆ. ನಟಿ, ಮಂಡ್ಯ ಸುಮಲತಾ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಶಿವಮೊಗ್ಗದಲ್ಲಿ ನಡೆದ ಘಟನೆ ತಿಳಿದು ತೀವ್ರ ನೋವಾಯಿತು. ನಮ್ಮೆಲರಿಗೂ ಇದೊಂದು ಎಚ್ಚರಿಕೆಯ ಗಂಟೆ. ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಸಮಯ ಬಂದಿದೆ' ಎಂದಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸ್ಪೋಟದಿಂದ ಸಂಭವಿಸಿರುವ ಸಾವುಗಳು ತೀವ್ರ ದುಃಖ ಹಾಗೂ ಸಂಕಟ ತಂದಿವೆ. ಮೃತರಾದ ಅಮಾಯಕರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಈ ದುರಾದೃಷ್ಟ ಘಟನೆಯ ಹಿಂದೆ ಇರುವುದು ಗಣಿಗಾರಿಕೆಯಲ್ಲಿ ತೊಡಗಿರುವವರ ಬೇಜವಾಬ್ದಾರಿ ವರ್ತನೆ. ಕಾನೂನಿನ ಮೂಲಕ ಏನೇ ಕ್ರಮ ಕೈಗೊಂಡರು ಆ ಅಮಾಯಕ ಜೀವಗಳು ಮರಳಿ ಬರುವುದಿಲ್ಲ' ಎಂದಿದ್ದಾರೆ ಸುಮಲತಾ ಅಂಬರೀಶ್. ಮಂಡ್ಯ ಜಿಲ್ಲೆಯಲ್ಲಿ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನಾನು ದನಿ ಎತ್ತುತ್ತಿರುವುದು ಸಹ ಇದೇ ಕಾಳಜಿಯಿಂದ. ಈ ಘಟನೆ ಮಂಡ್ಯದಲ್ಲಿ ಕಾನೂನು ಬಾಹಿರ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಲಿ ಎಂದಿದ್ದಾರೆ. ಅಕ್ರಮ ಗಣಿಗಾರಿಕೆ ಹಿಂದೆ ಬಹಳಸಲ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳ ಬೆಂಬಲ ಇದ್ದೇ ಇರುತ್ತದೆ. ಸರಕಾರ ಕೂಡಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಬೇಕು ಎಂದಿದ್ದಾರೆ.

ನಟ ಸುದೀಪ್ ಸಹ ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಶಿವಮೊಗ್ಗದ ಹುಣಸೋಡಿನಲ್ಲಿ , ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ, ಪ್ರತಿ ಪ್ರಾಣವು ಅಮೂಲ್ಯ, ಸರ್ಕಾರ ಅಗತ್ಯ ಕ್ರಮತಗೆದು ಕೊಳ್ಳಲಿ' ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್.

This News Article is a Copy of FILMIBEAT