ಆಸ್ಕರ್ ಸ್ಪರ್ಧೆಗೆ ದಕ್ಷಿಣ ಭಾರತದ ಮತ್ತೊಂದು ಸಿನಿಮಾ

01-02-21 12:38 pm       Source: FILMIBEAT Manjunatha C   ಸಿನಿಮಾ

ಕನ್ನಡಿಗನ ಕತೆ ಹೊಂದಿರುವ ಸೂರ್ಯ ನಟಿಸಿ ಸುಧಾ ಕೊಂಗರ ನಿರ್ದೇಶನದ 'ಸೂರರೈ ಪೊಟ್ರು' ಸಿನಿಮಾ ಆಸ್ಕರ್‌ಗೆ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದೆ.

ಸಿನಿಮಾ ಮಟ್ಟಿಗೆ ವಿಶ್ವದ ಸರ್ವೋತ್ತಮ ಪ್ರಶಸ್ತಿ ಎನ್ನಲಾಗುವ ಆಸ್ಕರ್ ಪ್ರಶಸ್ತಿಗೆ ಈ ಬಾರಿ ಎರಡು ದಕ್ಷಿಣ ಭಾರತದ ಸಿನಿಮಾಗಳು ಸ್ಪರ್ಧೆಗೆ ಹೊರಟಿವೆ. ಮಲಯಾಳಂ ನ 'ಜಲ್ಲಿಕಟ್ಟು' ಸಿನಿಮಾವನ್ನು ಭಾರತದಿಂದ ಆಸ್ಕರ್‌ ಗೆ ಅಧಿಕೃತ ಆಯ್ಕೆ ರೂಪದಲ್ಲಿ ಕಳುಹಿಸಲಾಗಿದೆ.

ಇದರ ಬೆನ್ನಲ್ಲೇ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಆಸ್ಕರ್ ಸ್ಪರ್ಧೆಗೆ ಹೊರಟಿದೆ. ಕನ್ನಡಿಗನ ಕತೆ ಹೊಂದಿರುವ ಸೂರ್ಯ ನಟಿಸಿ ಸುಧಾ ಕೊಂಗರ ನಿರ್ದೇಶನದ 'ಸೂರರೈ ಪೊಟ್ರು' ಸಿನಿಮಾ ಆಸ್ಕರ್‌ಗೆ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದೆ.

ಕೊರೊನಾ ಕಾರಣಕ್ಕೆ ಆಸ್ಕರ್ ಸ್ಪರ್ಧೆಯ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳೂ ಸಹ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂಬ ನಿಯಮ ತರಲಾಗಿದೆ.



ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಸಂಗೀತ, ನಿರ್ದೇಶನ, ಅತ್ಯುತ್ತಮ ಕತೆ ವಿಭಾಗದಲ್ಲಿ ಸ್ಪರ್ಧೆ ಮಾಡಲಿದೆ. ಆಸ್ಕರ್ ನ ಆಯ್ಕೆದಾರರು ಸಿನಿಮಾವನ್ನು ನೋಡಿ ಮುಂದಿನ ಸುತ್ತಿಗೆ ಆಯ್ಕೆ ಮಾಡಲಿದ್ದಾರೆ.

This News Article is a Copy of FILMIBEAT