ಕೇಂದ್ರ ಬಜೆಟ್ 2021: ಚಿತ್ರೋದ್ಯಮವನ್ನು ಮರೆತ ನಿರ್ಮಲಾ ಸೀತಾರಾಮನ್

01-02-21 05:04 pm       Source: FILMIBEAT Bharath Kumar K   ಸಿನಿಮಾ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಣೆ ಮಾಡಿದ ಬಜೆಟ್ ಸಿನಿ ಇಂಡಸ್ಟ್ರಿಗೆ ನಿರಾಸೆ ಮೂಡಿಸಿದೆ.

ಕೊರೊನಾದಿಂದ ತೀವ್ರ ಸಂಕಷ್ಟದಲ್ಲಿದ್ದ ಚಿತ್ರೋಧ್ಯಮಕ್ಕೆ ಕೇಂದ್ರ ಬಜೆಟ್‌ನಲ್ಲಿ ಏನಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಣೆ ಮಾಡಿದ ಬಜೆಟ್ ಸಿನಿ ಇಂಡಸ್ಟ್ರಿಗೆ ನಿರಾಸೆ ಮೂಡಿಸಿದೆ.

ಕೊರೊನಾ ವೈರಸ್ ಸಮಯದಲ್ಲಿ ಇಡೀ ಚಿತ್ರೋಧ್ಯಮ ಸಂಕಷ್ಟ ಎದುರಿಸಿದೆ. ಚಿತ್ರಮಂದಿರಗಳು ಮುಚ್ಚಿದ್ದರ ಪರಿಣಾಮ ಕಾರ್ಮಿಕರೆಲ್ಲವೂ ಸಂಕಷ್ಟದಲ್ಲಿದ್ದರು. ಕೇಂದ್ರ ಹಾಗೂ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾವತಿಸುವ ಉದ್ಯಮಗಳಲ್ಲಿ ಒಂದಾಗಿರುವ ಸಿನಿ ಇಂಡಸ್ಟ್ರಿಯನ್ನು ಪರಿಗಣಿಸದೆ ಇರುವುದು ತೀರಾ ಬೇಸರ ತರಿಸಿದೆ ಎಂದು ಚಿತ್ರೋಧ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದಿ ಚಲನಚಿತ್ರ ಪ್ರದರ್ಶಕ ಅಕ್ಷಯ್ ರತಿ ಈ ಕುರಿತು ಪಿಂಕ್‌ವಿಲ್ಲಾಗೆ ಪ್ರತಿಕ್ರಿಯಿಸಿದ್ದು, "ಬಜೆಟ್‌ನಲ್ಲಿ ಮನರಂಜನಾ ಕ್ಷೇತ್ರದ ಬಗ್ಗೆ ಯಾವುದೇ ಉಲ್ಲೇಖ ಮಾಡದಿರುವುದು ದುರದೃಷ್ಟ. ಕನಿಷ್ಠ ಹೆಚ್ಚುವರಿ ಹೊರೆಗಳಿಲ್ಲ ಎನ್ನುವುದು ಸಮಾಧಾನ ಅಷ್ಟೇ. ಸಾಂಕ್ರಾಮಿಕ ರೋಗ ಪರಿಣಾಮ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಕ್ಷೇತ್ರ

ನಿರ್ಮಾಪಕ ಟಿಪಿ ಅಗರ್‌ವಾಲ್ ಮಾತನಾಡಿ ''ನಾವು ಸರ್ಕಾರದಿಂದ ಹೆಚ್ಚು ನಿರೀಕ್ಷೆ ಹೊಂದಿರಲಿಲ್ಲ. ನಮಗೆ ಯಾವುದೇ ಸಾಲ ದೊರೆಯುವುದಿಲ್ಲ. ಒಂದು ವೇಳೆ ಸಾಲ ಬೇಕು ಅಂದ್ರೆ ನಮ್ಮ ಆಸ್ತಿಯನ್ನು ಅಡಮಾನ ಇಡಬೇಕು. ನಾವು ನಿರ್ಮಿಸುವ ಸಿನಿಮಾವನ್ನು ಅಡಮಾನ ಇಡಲು ಸಾಧ್ಯವಿಲ್ಲ. ಆದರೆ, ಜಿಎಸ್ಟಿ ಮತ್ತು ತೆರಿಗೆಯಲ್ಲಿ ಸ್ವಲ್ಪ ಕಡಿತ ಎದುರು ನೋಡುತ್ತಿದ್ದೇವು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ಆರ್ಥಿಕ ಪ್ಯಾಕೇಜ್‌ನಲ್ಲೂ ಸಿನಿಮಾ ರಂಗಕ್ಕೆ ವಿಶೇಷವಾಗಿ ಯಾವುದೇ ಯೋಜನೆ ಘೋಷಿಸಿರಲಿಲ್ಲ. ಕೇಂದ್ರ ಬಜೆಟ್‌ ಮೇಲೆ ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಕೊರೊನಾ ಕಾರಣದಿಂದ ಈ ಸಲ ಏನಾದರೂ ಸಹಾಯ ಸಿಗಬಹುದು ಎಂದು ಕಾದಿದ್ದರು.

This News Article is a Copy of FILMIBEAT