ಧನಂಜಯ್ ಅತ್ಯುತ್ತಮ ನಟ, ಖುಷಿ ಅತ್ಯುತ್ತಮ ನಟಿ, ದಿಯಾ ಅತ್ಯುತ್ತಮ ಸಿನಿಮಾ

23-02-21 03:23 pm       Source: FILMIBEAT Manjunatha C   ಸಿನಿಮಾ

'ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021' ನಲ್ಲಿ 'ದಿಯಾ' ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ.

'ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021' ನಲ್ಲಿ 'ದಿಯಾ' ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. 'ಪಾಪ್‌ ಕಾರ್ನ್ ಮಂಕಿ ಟೈಗರ್' ಸಿನಿಮಾದ ನಟನೆಗೆ ಧನಂಜಯ್ ಅತ್ಯುತ್ತಮ ನಟ, 'ದಿಯಾ' ಸಿನಿಮಾದ ಅತ್ಯುತ್ತಮ ನಟನೆಗೆ ಖುಷಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.

ಭಾನುವಾರ ಸಂಜೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಕಾರ್ಯಕ್ರಮ ನಡೆದಿದ್ದು, 'ಆಕ್ಟ್-1978' ಸಿನಿಮಾದ ನಿರ್ದೇಶಕ ಮಂಸೋರೆಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ. 2020 ರಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳನ್ನು ಸಿನಿಮಾ ಪತ್ರಕರ್ತರು ನೋಡಿ 21 ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ನಟ, ನಟಿ, ತಂತ್ರಜ್ಞರನ್ನು ಆಯ್ಕೆ ಮಾಡಿದ್ದಾರೆ.'ಚಂದನವನ ಫಿಲಮ್ಸ್‌ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021' ನಲ್ಲಿ ಅಚ್ಯುತ್‌ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ತಾರಾ ಅನುರಾಧಾಗೆ ಶಿವಾರ್ಜುನ ಸಿನಿಮಾಕ್ಕಾಗಿ ಪೋಷಕ ನಟಿ ಪ್ರಶಸ್ತಿ, ಅತ್ಯುತ್ತಮ ಸಂಗೀತ ದಿಯಾ ಗಾಗಿ ಅಜನೀಶ್ ಲೋಕನಾಥ್, 'ಮರಳಿ ಮನಸ್ಸಾಗಿದೆ' ಹಾಡಿಗೆ ಅತ್ಯುತ್ತಮ ಗಾಯಕ ಸಂಜಿತ್ ಹೆಗಡೆಗೆ ಪ್ರಶಸ್ತಿ, ದಿಯಾ ಸಿನಿಮಾದ ಹಾಡಿಗಾಗಿ ಚಿನ್ಮಯಿಗೆ ಪ್ರಶಸ್ತಿ ದೊರೆತಿದೆ.

ಸಂಗೀತ ನಿರ್ದೇಶನ ವಿಭಾಗದಲ್ಲಿ ರಘು ದೀಕ್ಷಿತ್ ಗೆ ಪ್ರಶಸ್ತಿ ದೊರೆತಿದೆ. ಮನುಷ್ಯೇತರ ವಿಭಾಗವೂ ಒಂದಿದ್ದು, ಆ ವಿಭಾಗದಲ್ಲಿ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಕಾಣಿಸಿಕೊಂಡ ನಾಯಿ ಸಿಂಭಾ ಗೆ ಆ ಪ್ರಶಸ್ತಿ ನೀಡಲಾಗಿದೆ. ಆ ಸಿಂಭಾ ನಾಯಿಯು, ಮಲಯಾಳಂ ನ 'ಬೆಂಗಳೂರು ಡೇಸ್', 'ಗುಲ್ಟು', 'ಶಿವಾಜಿ ಸೂರತ್ಕಲ್' ಸಿನಿಮಾದಲ್ಲಿಯೂ ಪಾತ್ರವಹಿಸಿದೆ.

This News Article is a Copy of FILMIBEAT