ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹಿಂದೆ ಎಷ್ಟು ಜನ ಕೆಲಸ ಮಾಡ್ತಾರೆ?

26-02-21 12:22 pm       Source: FILMIBEAT   ಸಿನಿಮಾ

ಕನ್ನಡದ ಪಾಲಿಗೆ ಬಿಗ್ ಬಾಸ್ ಅತಿ ದೊಡ್ಡ ರಿಯಾಲಿಟಿ ಶೋ. ಸುಮಾರು 100 ದಿನಗಳ ಕಾಲ ನಡೆಯುವ ಭಾರಿ ಬಜೆಟ್‌ನ ಕಾರ್ಯಕ್ರಮ. ಬಿಗ್‌ಬಾಸ್‌ಗಾಗಿ ಹಲವು ತಿಂಗಳುಗಳ ಮುಂಚೆಯೇ ಪೂರ್ವ ತಯಾರಿ ನಡೆಯುತ್ತಿದೆ.

ಕನ್ನಡದ ಪಾಲಿಗೆ ಬಿಗ್ ಬಾಸ್ ಅತಿ ದೊಡ್ಡ ರಿಯಾಲಿಟಿ ಶೋ. ಸುಮಾರು 100 ದಿನಗಳ ಕಾಲ ನಡೆಯುವ ಭಾರಿ ಬಜೆಟ್‌ನ ಕಾರ್ಯಕ್ರಮ. ಬಿಗ್‌ಬಾಸ್‌ಗಾಗಿ ಹಲವು ತಿಂಗಳುಗಳ ಮುಂಚೆಯೇ ಪೂರ್ವ ತಯಾರಿ ನಡೆಯುತ್ತಿದೆ.

ಸ್ಪರ್ಧಿಯಾಗಿ ಆಯ್ಕೆ, ಬಿಗ್ ಬಾಸ್ ತಯಾರಿ, ಆಡಿಷನ್, ತಾಂತ್ರಿಕ ವರ್ಗ ಹೀಗೆ ಎಲ್ಲ ವರ್ಗದಲ್ಲೂ ನೂರಾರು ಮಂದಿ ಕೆಲಸ ಮಾಡ್ತಾರೆ. ಬಿಗ್ ಬಾಸ್ ಕನ್ನಡದ ಶೋನಲ್ಲಿ ಎಷ್ಟು ಜನ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದನ್ನು ಸ್ವತಃ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಬಹಿರಂಗಪಡಿಸಿದ್ದಾರೆ.

ಪ್ರತಿ ಆವೃತ್ತಿ ಸುಮಾರು 300 ಜನರು ಬಿಗ್ ಬಾಸ್‌ನಲ್ಲಿ ಕೆಲಸ ಮಾಡ್ತಿದ್ರು, ಆದರೆ, ಈ ಸಲ ಡಿಜಿಟಲ್ ವೇದಿಕೆಯಲ್ಲಿ ಕೆಲವು ವಿಶೇಷತೆಗಳಿರಲಿದ್ದು, ಹೆಚ್ಚುವರಿಯಾಗಿ 100 ಜನ ಸೇರಿಕೊಂಡಿದ್ದಾರೆ. ಒಟ್ಟು ನಾಲ್ಕುನೂರು ಮಂದಿ ಈ ಆವೃತ್ತಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಗ್ ಬಾಸ್ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವ ಬಹುತೇಕರನ್ನು ಕ್ವಾರಂಟೈನ್ ಮಾಡಲಾಗಿದೆ. ಎರಡು ಬಾರಿ ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊನೆಯ ದಿನವೂ ಕೊರೊನಾ ಪರೀಕ್ಷೆ ನಡೆಸಿದ ನಂತರವೇ ಪಿಸಿಆರ್‌ ಹಾಗೂ ಕ್ಯಾಮೆರಾ ವಿಭಾಗದಲ್ಲಿ ಕೆಲಸ ಆರಂಭಿಸಲಿದ್ದಾರಂತೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ ಬಿಗ್ ಬಾಸ್ ಮನೆಯೊಳಗೆ 68 ಕ್ಯಾಮೆರಾಗಳಿವೆ, ಗಲ್ಲಿ ಕ್ಯಾಮೆರಾ, ನೈಟ್ ವಿಶನ್ ಕ್ಯಾಮೆರಾ, ವೂಟ್‌ಗಾಗಿಯೇ ವಿಶೇಷವಾದ ಕ್ಯಾಮೆರಾಗಳು ಎಲ್ಲವೂ ಸೇರಿ 80ಕ್ಕಿಂತ ಹೆಚ್ಚು ಕ್ಯಾಮೆರಾ ಇದೆ.

ಫೆಬ್ರವರಿ 28 ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ ಕನ್ನಡ ಆರಂಭವಾಗಲಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಎಪಿಸೋಡ್ ಟೆಲಿಕಾಸ್ಟ್ ಆಗಲಿದೆ.

This News Article is a Copy of FILMIBEAT