'ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ'- ನಟ ದರ್ಶನ್

03-03-21 03:35 pm       Source: FILMIBEAT   ಸಿನಿಮಾ

ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನ. ಈ ದಿನದ ವಿಶೇಷವಾಗಿ ಕನ್ನಡ ಚಲನಚಿತ್ರ ನಟ ದರ್ಶನ್ ಟ್ವಿಟ್ಟರ್ ಮೂಲಕ ಶುಭಕೋರಿದ್ದು, ವನ್ಯಜೀವಿಗಳನ್ನು ಉಳಿಸೋಣ ಎಂದು ಕರೆ ನೀಡಿದ್ದಾರೆ. ''ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ".

ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನ. ಈ ದಿನದ ವಿಶೇಷವಾಗಿ ಕನ್ನಡ ಚಲನಚಿತ್ರ ನಟ ದರ್ಶನ್ ಟ್ವಿಟ್ಟರ್ ಮೂಲಕ ಶುಭಕೋರಿದ್ದು, ವನ್ಯಜೀವಿಗಳನ್ನು ಉಳಿಸೋಣ ಎಂದು ಕರೆ ನೀಡಿದ್ದಾರೆ. ''ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ".

ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ಸ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ!

ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ! ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ.

ನಿಮ್ಮ ದಾಸ ದರ್ಶನ್'' ಎಂದು ಟ್ವೀಟ್ ಮಾಡಿದ್ದಾರೆ. ನಟ ದರ್ಶನ್ ಅವರ ಈ ಮಾತಿಗೆ ಅಭಿಮಾನಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ''ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ'' ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅಂದ್ಹಾಗೆ, ದರ್ಶನ್ ಅವರು ಪ್ರಾಣಿ ಪ್ರಿಯರು.

ಸಾಕು ಪ್ರಾಣಿಗಳು ಹಾಗೂ ವನ್ಯ ಜೀವಿಗಳ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಸಹ ಆಗಿದ್ದರು. ಪ್ರಸ್ತುತ, ಕೃಷಿ ಇಲಾಖೆಯ ರಾಯಭಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದು, ನೂರಾರು ಸಾಕು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಹಸು, ಕುದುರೆ, ಕುರಿ, ಎಮ್ಮೆ, ಕೋಳಿ ಸೇರಿದಂತೆ ಎಲ್ಲ ರೀತಿಯ ಸಾಕು ಪ್ರಾಣಿಗಳನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ ಪೋಷಿಸುತ್ತಿದ್ದಾರೆ.

ಈ ಸಂಕೇತವಾಗಿಯೇ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ''ವಿಶೇಷವಾದ ಕಾಮನ್ ಡಿಪಿ'' ಬಿಡುಗಡೆ ಮಾಡಲಾಗಿತ್ತು. ಈ ಡಿಪಿಯಲ್ಲಿ ನಟ ದರ್ಶನ್ ಅರಣ್ಯದಲ್ಲಿ ಮರದ ಕೆಳಗೆ ಕುಳಿತುಕೊಂಡಿದ್ದು, ಸುತ್ತಲೂ ಪ್ರಾಣಿಗಳನ್ನು ನೋಡಬಹುದು.

ಸಿನಿಮಾ ವಿಚಾರಕ್ಕೆ ಬಂದ್ರೆ, ರಾಬರ್ಟ್ ಸಿನಿಮಾ ಮಾರ್ಚ್ 11 ರಂಮದು ತೆರೆಗೆ ಬರ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್, ಆಶಾ ಭಟ್, ಜಗಪತಿ ಬಾಬು, ರವಿಶಂಕರ್, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ನಟಿಸಿದ್ದಾರೆ.

This News Article Is A Copy Of FILMIBEAT