ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಮಾಳವಿಕಾ ಅವಿನಾಶ್ ಹೇಳಿದ್ದೇನು?

05-03-21 04:26 pm       Source: FILMIBEAT   ಸಿನಿಮಾ

ರಾಜಕೀಯ ಮತ್ತು ಸಿನಿಮಾರಂಗದಲ್ಲಿ ಯಶಸ್ವಿಯಾಗಿ ಹೆಜ್ಜೆಯಿಡುತ್ತಿರುವ ನಟಿ ಮಾಳವಿಕಾ ಅವಿನಾಶ್ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ರಾಜಕೀಯ ಮತ್ತು ಸಿನಿಮಾರಂಗದಲ್ಲಿ ಯಶಸ್ವಿಯಾಗಿ ಹೆಜ್ಜೆಯಿಡುತ್ತಿರುವ ನಟಿ ಮಾಳವಿಕಾ ಅವಿನಾಶ್ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕೆಜಿಎಫ್ ಚಿತ್ರ 'ಭಾರತದ ಹೆಮ್ಮೆ' ಎಂದು ಫೋಸ್ಟ್ ಮಾಡಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಯಶ್ ಜೊತೆಗಿನ ಫೋಟೋ ಹಾಗೂ ಕೆಜಿಎಫ್ ಚಾಪ್ಟರ್ 2ರ ಶೂಟಿಂಗ್‌ನಲ್ಲಿ ಭಾಗವಹಿಸಿರುವ ಫೋಟೋಗಳನ್ನು ಹಂಚಿಕೊಂಡು, ''ಕನ್ನಡ ಸಿನಿಮಾ ಹಾಗೂ ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್ ಒಂದು ಅದ್ಭುತ'' ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ಸರಣಿಯಲ್ಲಿ ಸುದ್ದಿ ಸಂಸ್ಥೆಯ ಮುಖ್ಯ ಸಂಪಾದಕಿ ಪಾತ್ರದಲ್ಲಿ ನಟಿಸಿರುವ ಮಾಳವಿಕಾ, ಮೊದಲ ಚಾಪ್ಟರ್‌ನಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಎರಡನೇ ಚಾಪ್ಟರ್‌ನಲ್ಲೂ ಮಾಳವಿಕಾ ಪಾತ್ರ ಮುಂದುವರಿದಿದ್ದು ಅವರ ಮೇಲೆ ಅಷ್ಟೇ ಕುತೂಹಲವಿದೆ.

ಜುಲೈ 16 ರಂದು ಕೆಜಿಎಫ್ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರಲಿದೆ ಎಂದು ಖುದ್ದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಭಾರಿ ದೊಡ್ಡ ಮಟ್ಟಕ್ಕೆ ಬಿಡುಗಡೆಯಾಗಲಿದೆ. ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

This News Article Is A Copy Of FILMIBEAT