ಬಾಲಿವುಡ್ ಚಿತ್ರದ ಶೂಟಿಂಗ್ ಆರಂಭಿಸಿದ ರಶ್ಮಿಕಾ ಮಂದಣ್ಣ

06-03-21 11:20 am       Source: FILMIBEAT   ಸಿನಿಮಾ

ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.

ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಶುಕ್ರವಾರ ಲಕ್ನೌನಲ್ಲಿ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣದಲ್ಲಿ ರಶ್ಮಿಕಾ ಭಾಗವಹಿಸಿದ್ದಾರೆ.

ಮಿಷನ್ ಮಿಜ್ನು ಚಿತ್ರದ ಸೆಟ್‌ನಲ್ಲಿ ಮೊದಲ ದಿನ ಪಾಲ್ಗೊಂಡ ನಟಿ ರಶ್ಮಿಕಾ ಆ ಸಂತಸವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಕಳೆದ ಎರಡು ವಾರಗಳ ಹಿಂದಯೇ ಮಿಷನ್ ಮಜ್ನು ಶೂಟಿಂಗ್ ಆರಂಭಿಸಿದ್ದರು. ಇದೀಗ, ನಟಿ ರಶ್ಮಿಕಾ ಶುಕ್ರವಾರದಿಂದ ಚಿತ್ರತಂಡ ಸೇರಿಕೊಂಡಿದ್ದಾರೆ.

ಮಿಷನ್ ಮಜ್ನು ಸೆಟ್‌ನಲ್ಲಿ ಭಾಗವಹಿಸಿರುವ ವಿಡಿಯೋವನ್ನು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ''ಮಿಷನ್ ಮಜ್ನು ದಿನ 1'' ಎಂದು ಕ್ಯಾಪ್ಷನ್ ಹಾಕಿ, ಕ್ಲಾಪ್ ಬೋರ್ಡ್ ಹಿಡಿದು ನಿಂತಿರುವ ವಿಡಿಯೋ ಇದಾಗಿದೆ.

ಅಂದ್ಹಾಗೆ, ಮಿಷನ್ ಮಜ್ನು ಚಿತ್ರ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಚೊಚ್ಚಲ ಬಾಲಿವುಡ್ ಸಿನಿಮಾ. ಶಾಂತನು ಬಾಗ್ಚಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಸ್ಪೈ ಥ್ರಿಲ್ಲರ್ ಕಥೆ ಹೊಂದಿದೆ.

ರೋನಿ ಸ್ಕ್ರೂವಾಲಾ, ಗರಿಮಾ ಮೆಹ್ತಾ ಮತ್ತು ಅಮರ್ ಬುಟಾಲಾ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 1970ರ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ಡಿಸೆಂಬರ್ 20, 2020ರಲ್ಲಿ 'ಮಿಷನ್ ಮಜ್ನು' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು.

This News Article Is A Copy Of FILMIBEAT