ಸಾಲದ ಸುಳಿಯಲ್ಲಿ ದ್ವಾರಕೀಶ್ ; ಪ್ರೀತಿಯ ಬಂಗಲೆ ಖರೀದಿಸಿದ ರಿಷಬ್ ಶೆಟ್ಟಿ !

07-03-21 07:43 pm       Headline Karnataka News Network   ಸಿನಿಮಾ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಭಾರೀ ನಷ್ಟಕ್ಕೆ ಸಿಲುಕಿದ್ದಾರೆ. ನಷ್ಟದ ಸುಳಿಯಿಂದ ಪಾರಾಗಲು ದ್ವಾರಕೀಶ್ ತಮ್ಮ ಮನೆಯನ್ನೇ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಬೆಂಗಳೂರು, ಮಾ.7: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಭಾರೀ ನಷ್ಟಕ್ಕೆ ಸಿಲುಕಿದ್ದಾರೆ. ನಷ್ಟದ ಸುಳಿಯಿಂದ ಪಾರಾಗಲು ದ್ವಾರಕೀಶ್ ತಮ್ಮ ಮನೆಯನ್ನೇ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೆಯನ್ನು ಹತ್ತೂವರೆ ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಮನೆಯನ್ನು ಕರಾವಳಿಯ ಪ್ರತಿಭೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಖರೀದಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಈ ವಿಚಾರವನ್ನು ದ್ವಾರಕೀಶ್ ಆಗಲೀ, ರಿಷಬ್ ಶೆಟ್ಟಿಯಾಗಲೀ ದೃಢಪಡಿಸಿಲ್ಲ.

ಸುದೀರ್ಘ 52 ವರ್ಷಗಳಲ್ಲಿ 52 ಸಿನಿಮಾಗಳನ್ನು ನಿರ್ಮಿಸಿರುವ ದ್ವಾರಕೀಶ್, ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಕೊಡುಗೆ ಕೊಟ್ಟವರು. ಆದರೆ, ತಮ್ಮ ಇಳಿವಯಸ್ಸಿನಲ್ಲಿ ಮನೆಯನ್ನೇ ಕಳಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ದ್ವಾರಕೀಶ್ ನಿರ್ಮಾಣದ ಇತ್ತೀಚೆಗೆ ಬಿಡುಗಡೆಯಾಗಿದ್ದ ಆಯುಷ್ಮಾನ್ ಭವ ಚಿತ್ರದ ದೊಡ್ಡ ಯಶಸ್ಸು ಕಂಡಿರಲಿಲ್ಲ. ಇದರಿಂದಾಗಿ ದ್ವಾರಕೀಶ್ ಪುತ್ರ ಯೋಗಿ ಸಾಲದ ಸುಳಿಗೆ ಸಿಲುಕಿದ್ದಾರೆ ಎನ್ನಲಾಗಿದ್ದು, ಇದರಿಂದ ಪಾರಾಗಲು ತಂದೆಯ ಬಂಗಲೆಯನ್ನೇ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ.

ಚಿತ್ರರಂಗದಲ್ಲಿ ಕುಳ್ಳನೆಂದೇ ಹೆಸರು ಮಾಡಿದ್ದ ದ್ವಾರಕೀಶ್, 70ರ ಇಳಿ ವಯಸ್ಸಿನಲ್ಲಿದ್ದು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

Veteran Actor and Director Dwarakish is in a huge debt and sells his house to Director Rishab Shetty in Bangalore.