ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೈತ ಹೋರಾಟದ ಸದ್ದು; ಗಮನ ಸೆಳೆದ ಲಿಲ್ಲಿ ಸಿಂಗ್ ಮಾಸ್ಕ್

15-03-21 06:04 pm       source: FILMIBEAT   ಸಿನಿಮಾ

ಅಮೆರಿಕದಲ್ಲಿ ನಡೆದ 63ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಕಾಮಿಡಿಯನ್ ಮತ್ತು ಯೂಟ್ಯೂಬರ್ ಲಿಲ್ಲಿ ಸಿಂಗ್ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಅಮೆರಿಕದಲ್ಲಿ ನಡೆದ 63ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಕಾಮಿಡಿಯನ್ ಮತ್ತು ಯೂಟ್ಯೂಬರ್ ಲಿಲ್ಲಿ ಸಿಂಗ್ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಸಮಾರಂಭದಲ್ಲಿ ಲಿಲ್ಲಿ ಸಿಂಗ್ ಮಾಸ್ಕ್ ಧರಿಸಿ ಭಾಗಿಯಾಗಿದ್ದರು. ಕಪ್ಪು ಬಣ್ಣದ ಮಾಸ್ಕ್ ಮೇಲೆ 'ನಾನು ರೈತರ ಪರವಾಗಿದ್ದೇನೆ' ಎಂದು ಬರೆದುಕೊಂಡಿದ್ದರು. ಲಿಲ್ಲಿ ಸಿಂಗ್ ಈ ಮಾಸ್ಕ್ ಫೋಟೋ ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ರೈತರ ಪ್ರತಿಭಟನೆ: ಅಜಯ್ ದೇವಗನ್ ಕಾರು ಅಡ್ಡಗಟ್ಟಿದ ವ್ಯಕ್ತಿ ಬಂಧನ ಸಮಾರಂಭದಲ್ಲಿ ಭಾಗಿಯಾಗಿರುವ ಫೋಟೋವನ್ನು ಲಿಲ್ಲಿ ಸಿಂಗ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ, 'ನನಗೆ ಗೊತ್ತು ರೆಡ್ ಕಾರ್ಪೆಟ್ ಮತ್ತು ಪ್ರಶಸ್ತಿ ಸಮಾರಂಭ ಫೋಟೋಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತದೆ ಎಂದು. ವಿಚಾರ ಹಂಚಿಕೊಳ್ಳಲು ಉತ್ತಮ ವೇದಿಕೆ ಇದು' ಎಂದು ಬರೆದುಕೊಂಡಿದ್ದಾರೆ.

ಲಿಲ್ಲಿ ಸಿಂಗ್ ಪೋಸ್ಟ್ ಗೆ ವ್ಯಾಪಕ ಬೆಂಬಲ

ಲಿಲ್ಲಿ ಸಿಂಗ್ ಪೋಸ್ಟ್ ಗೆ ವ್ಯಾಪಕ ಬೆಂಬಲ

ಲಿಲ್ಲಿ ಸಿಂಗ್ ಈ ಪೋಸ್ಟ್ ಗೆ 52 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಒತ್ತಿ ಕಾಮೆಂಟ್ ಮಾಡುತ್ತಿದ್ದಾರೆ. ಖ್ಯಾತ ರೂಪದರ್ಶಿ ಅಮಂಡಾ ಸೆರ್ನಿ, WWE ಖ್ಯಾತಿಯ ಸುನಿಲ್ ಸಿಂಗ್, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಭಾರತದ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಜಗತ್ತಿನ ಅತೀ ದೊಡ್ಡ ಪ್ರಶಸ್ತಿ ಸಮಾರಂಭಗಳಲ್ಲಿ ಒಂದು

ಜಗತ್ತಿನ ಅತೀ ದೊಡ್ಡ ಪ್ರಶಸ್ತಿ ಸಮಾರಂಭಗಳಲ್ಲಿ ಗ್ರ್ಯಾಮಿ ಸಮಾರಂಭ ಕೂಡ ಒಂದು. ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಈ ಸಮಾರಂಭ ವೀಕ್ಷಿಸುತ್ತಾರೆ. ವಿಶ್ವದ ಪ್ರಸಿದ್ಧ ಪ್ರಶಸ್ತಿ ಸಮಾರಂಭದಲ್ಲಿ ಲಿಲ್ಲಿ ಸಿಂಗ್ ಮಾಸ್ಕ್ ಧರಿಸಿ ರೈತರಿಗೆ ಬೆಂಬಲ ಸೂಚಿಸುವ ಮೂಲಕ ಭಾರತದ ರೈತ ಪ್ರತಿಭಟನೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದ್ದಾರೆ.

ಲಿಲ್ಲಿ ಸಿಂಗ್ ಯಾರು?

ಲಿಲ್ಲಿ ಸಿಂಗ್ ಮೂಲತಃ ಭಾರತದವರು. ಪ್ರಸ್ತುತ ಲಿಲ್ಲಿ ಕುಟುಂಬ ಕೆನಡಾದಲ್ಲಿ ನೆಲೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಯೂಟ್ಯೂಬರ್, ಕಾಮಿಡಿಯನ್, ಟಾಕ್ ಶೋ ನಿರೂಪಕಿಯಾಗಿದ್ದಾರೆ. ವಿಶ್ವದ ಅತೀ ಹೆಚ್ಚು ಆದಾಯಗಳಿಸುವ ಯೂಟ್ಯೂಬರ್ ಎನ್ನುವ ಖ್ಯಾತಿ ಸಹ ಲಿಲ್ಲಿ ಗಳಿಸಿದ್ದಾರೆ.

ರೈತರಿಗೆ ಬೆಂಬಲ ಸೂಚಿಸಿದ್ದ ರಿಹಾನ್ನಾ

ಈ ಮೊದಲು ಭಾರತದ ರೈತರಿಗೆ ಬೆಂಬಲ ನೀಡಿ ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಮಾಡಿದ್ದರು. ರಿಹಾನ್ನಾ ಟ್ವೀಟ್ ವಿಶ್ವಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಬಳಿಕ ಭಾರತದ ರೈತರ ಪ್ರತಿಭಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿತ್ತು. ರಿಹನ್ನಾ ಬೆಂಬಲ ಸೂಚಿಸಿದ ಬೆನ್ನಲ್ಲೇ, ನಟಿ ಮಿಯಾ ಖಲೀಫಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಸೇರಿದಂತೆ ಅನೇಕರು ಭಾರತದ ರೈತರ ಬೆಂಬಲಕ್ಕೆ ನಿಂತರು.

This News Article Is A Copy Of FILMIBEAT