'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ವಿವಾದ: ಅಲಿಯಾ ಮತ್ತು ಸಂಜಯ್ ಲೀಲಾ ಬನ್ಸಾಲಿಗೆ ಸಮನ್ಸ್

25-03-21 01:37 pm       Source: FILMIBEAT   ಸಿನಿಮಾ

ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಸಂಬಂಧ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಟಿ ಅಲಿಯಾ ಭಟ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಸಮನ್ಸ್ ನೀಡಿದೆ.

ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಸಂಬಂಧ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಟಿ ಅಲಿಯಾ ಭಟ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಸಮನ್ಸ್ ನೀಡಿದೆ. ಅಲಿಯಾ ಭಟ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರನ್ನು ಮೇ 21ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಕೋರಲಾಗಿದೆ.

ಗಂಗೂಬಾಯಿ ದತ್ತು ಪುತ್ರ ಎಂದು ಹೇಳಿಕೊಳ್ಳುತ್ತಿರುವ ಬಾಬು ರಾವ್ ಷಾ ಚಿತ್ರತಂಡದ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಗಂಗೂಬಾಯಿ ಕಾಥಿಯಾವಾಡಿ ಚಿತ್ರವು ಹುಸೈನ್ ಜೈದಿ ಎನ್ನುವವರು ಬರೆದ 'ಮಾಫಿಯಾ ಕ್ವೀನ್ ಆಫ್ ಮುಂಬೈ' ಪುಸ್ತಕವನ್ನು ಆಧರಿಸಿ ಮಾಡಲಾಗುತ್ತಿದೆ.

ಈ ಪುಸ್ತಕದಲ್ಲಿ ಗಂಗೂಬಾಯಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಅವರ ಪ್ರತಿಷ್ಠೆಗೆ ಕಳಂಕ ತರಲಾಗಿದೆ ಮತ್ತು ಸ್ವಾಭಿಮಾನದ ಹಕ್ಕನ್ನು ಉಲ್ಲಂಘಿಸಿದೆ ಎಂದು ಬಾಬು ರಾವ್ ಷಾ ಆರೋಪಿಸಿದ್ದಾರೆ. ಈ ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡುತ್ತಿರುವ ನಿರ್ದೇಶಕ ಮತ್ತು ನಟಿಯರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಈ ಮೊದಲು ಬಾಬು ರಾವ್ ಷಾ, ಪುಸ್ತಕವನ್ನು ಪ್ರಕಟಿಸದಂತೆ ಲೇಖಕರ ವಿರುದ್ಧ ಮುಂಬೈ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಬಾಬು ರಾವ್ ತಾವೆ ಗಂಗೂಬಾಯಿ ಅವರ ದತ್ತು ಪುತ್ರ ಎಂದು ದೃಢೀಕರಿಸಲು ಯಾವುದೇ ಆಧಾರಗಳಿಲ್ಲ. ಹೇಗೆ ಆರೋಪ ಮಾಡುತ್ತಾರೆ ಎಂದು ಲೇಖಕರು ಮತ್ತು ಸಿನಿಮಾ ನಿರ್ಮಾಪಕರು ನ್ಯಾಯಾಲಯಕ್ಕೆ ಸೂಚಿಸಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದಲ್ಲಿ ಅಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 30ಕ್ಕೆ ತೆರೆಗೆ ಬರುತ್ತಿದೆ.

This News Article Is A Copy Of FILMIBEAT