ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ

10-04-21 06:57 pm       Source: FILMIBEAT   ಸಿನಿಮಾ

ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಮೇಡೇ' ಸಿನಿಮಾದ ಚಿತ್ರೀಕರಣ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಿಗದಿಯಾಗಿದ್ದ ಶೂಟಿಂಗ್ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ.

ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಮೇಡೇ' ಸಿನಿಮಾದ ಚಿತ್ರೀಕರಣ ಮುಂದೂಡಿಕೆಯಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಿಗದಿಯಾಗಿದ್ದ ಶೂಟಿಂಗ್ ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಸೆಟ್ಟೇರಿದ್ದ 'ಮೇಡೇ' ಸಿನಿಮಾ ಅದಾಗಲೇ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿದೆ. ಆದರೆ, ಕೋವಿಡ್ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿತ್ತು.

ಅಂದ್ಹಾಗೆ, ಏಪ್ರಿಲ್ ಕೊನೆಯಲ್ಲಿ ದೋಹಾದಲ್ಲಿ ಶೂಟಿಂಗ್ ಶುರು ಮಾಡಲು ಎಲ್ಲಾ ತಯಾರಿ ನಡೆದಿತ್ತು. ಈ ವೇಳೆ ಅಜಯ್ ದೇವಗನ್ ಜೊತೆ ಅಮಿತಾಭ್ ಬಚ್ಚನ್, ನಾಯಕಿ ನಟಿ ರಕುಲ್ ಪ್ರೀತ್ ಸಿಂಗ್ ಸಹ ಪಾಲ್ಗೊಳ್ಳಬೇಕಿತ್ತು.

ಸದ್ಯದ ಮಾಹಿತಿ ಪ್ರಕಾರ, ಮೇಡೇ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ದೋಹಾದಲ್ಲಿ ಮೂರು ದಿನಗಳ ಶೂಟಿಂಗ್ ಹಾಗೂ ಕತಾರ್‌ನಲ್ಲಿ ಕೊನೆಯ ಹಂತದ ಚಿತ್ರೀಕರಣದ ಬಳಿಕ ಸಿನಿಮಾ ಮುಗಿಸುವ ಯೋಜನೆಯಲ್ಲಿದ್ದರು. ನಿರ್ದೇಶಕ ಅಜಯ್ ದೇವಗನ್ ಕಡಿಮೆ ಸಿಬ್ಬಂದಿ ಜೊತೆ ಕತಾರ್‌ಗೆ ತೆರಳಿ ಕೊನೆಯ ಚಿತ್ರೀಕರಣ ಮಾಡಲು ನಿರ್ಧರಿಸಿದ್ದರು. ಆದ್ರೀಗ, ಆ ಯೋಜನೆಗೆ ಕೊರೊನಾ ಅಡ್ಡಿಯಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಮತ್ತು ರಕುಲ್ ಪ್ರೀತ್ ಸಿಂಗ್ ಇಬ್ಬರಿಗೂ ಕೊರೊನಾ ವೈರಸ್ ತಗುಲಿತ್ತು.

ಆ ಸಂದರ್ಭದಲ್ಲಿ ಬಿಗ್ ಬಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದರು. ರಕುಲ್ ತಮ್ಮ ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದರು. ಒಂದು ವಾರದ ವಿಶ್ರಾಂತಿ ಬಳಿಕ ನೆಗೆಟಿವ್ ಫಲಿತಾಂಶ ಬಂದಿತ್ತು.

ಅಂದ್ಹಾಗೆ, ಮೇಡೇ ಸಿನಿಮಾ ನೈಜ ಘಟನೆಗಳ ಆಧರಿಸಿ ಸಿದ್ದವಾಗುತ್ತಿರುವ ಚಿತ್ರ. 2015ರಲ್ಲಿ ನಡೆದ ಕೆಲವು ಘಟನೆಗಳನ್ನು ಚಿತ್ರಕಥೆ ಮಾಡಿ ಸಿನಿಮಾ ರೂಪ ನೀಡಲಾಗುತ್ತಿದೆ. ದೋಹಾ ಮತ್ತು ಕೊಚ್ಚಿ ವಿಮಾನದ ಸಂಘರ್ಷದ ವೇಳೆ ನಡೆದ ಘಟನೆಯ ಸುತ್ತಮುತ್ತಾ ಕಥೆ ಮಾಡಲಾಗಿದೆ.

This News Article Is A Copy Of FILMIBEAT