Breaking: ಆಸ್ಪತ್ರೆಯಲ್ಲಿದ್ದ ತಮಿಳು ಹಾಸ್ಯ ನಟ ವಿವೇಕ್ ನಿಧನ

17-04-21 10:30 am       Headline Karnataka News Network   ಸಿನಿಮಾ

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ (59) ಶನಿವಾರ ಬೆಳಗ್ಗೆ 5 ಗಂಟೆಗೆ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ (59) ಶನಿವಾರ ಬೆಳಗ್ಗೆ 5 ಗಂಟೆಗೆ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಶುಕ್ರವಾರ ಮಧ್ಯಾಹ್ನ ನಟ ವಿವೇಕ್ ಎಸ್‌ಇಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯಾಘಾತ ಸಂಭವಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ವಿವೇಕ್ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಇಂದು (ಏಪ್ರಿಲ್ 17) ಮುಂಜಾನೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯಿಂದ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

Vivek sees Jallikattu protesters as testimony for Swami Vivekananda's  popular quote - Tamil News - IndiaGlitz.com

ನಟ ವಿವೇಕ್ ತಮ್ಮ ಪತ್ನಿ ಹಾಗೂ ಮಗಳನ್ನು ಬಿಟ್ಟು ಅಗಲಿದ್ದಾರೆ. ವಿವೇಕ್ ಅವರ ನಿಧನಕ್ಕೆ ದಕ್ಷಿಣ ಚಿತ್ರರಂಗ ಸಂತಾಪ ಸೂಚಿಸಿದೆ. ಹಾಸ್ಯನಟನ ಸಾವಿನ ಸುದ್ದಿ ಬೆಳ್ಳಂಬೆಳಗ್ಗೆ ಆಘಾತ ತಂದಿದ್ದು, ಹಲವರು ಈ ಸುದ್ದಿಯಿಂದ ತೀರಾ ಬೇಸರಗೊಂಡಿದ್ದಾರೆ.

ಅಂದ್ಹಾಗೆ, ನಟ ವಿವೇಕ್ ಗುರುವಾರ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಕೊರೊನಾ ವೈರಸ್ ಲಸಿಕೆ ಪಡೆದ ಮರುದಿನವೇ ಹೃದಯಾಘಾತಕ್ಕೆ ಒಳಗಾಗಿದ್ದ ಅನುಮಾನ ಮೂಡಿಸಿತ್ತು. ಬಳಿಕ ವೈದ್ಯರು ಈ ಕುರಿತು ಸ್ಪಷ್ಟನೆ ನೀಡಿದ್ದರು. ಕೋವಿಡ್ ಲಸಿಕೆ ಪಡೆದುದ್ದರಿಂದ ಹೃದಯಾಘಾತ ಸಂಭವಿಸಿಲ್ಲ ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದರು. 

Tamil actor-comedian Vivekh dies, south celebs mourn his sudden death |  Regional News - Shweta Singh

ತಮಿಳು ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಆರಂಭಿಸಿದ್ದ ವಿವೇಕ್ ಕಳೆದ ಮೂರುವರೆ ದಶಕದಿಂದ ಸಕ್ರಿಯರಾಗಿದ್ದಾರೆ. ಕೆ ಬಾಲಚಂದಿರ್ ಅವರು ವಿವೇಕ್ ಅವರನ್ನು ಚಿತ್ರರಂಗಕ್ಕೆ ಪರಿಚಿಯಿಸಿದ್ದರು. ತಮಿಳಿನ ಜೊತೆಗೆ ತೆಲುಗು ಹಾಗೂ ಕನ್ನಡದ (ಚಂದ್ರ) ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ವಿವೇಕ್ ನೀಡಿರುವ ಕೊಡುಗೆ ಗೌರವಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಅದಲ್ಲದೇ ಫಿಲಂ ಫೇರ್ ಪ್ರಶಸ್ತಿ, ತಮಿಳು ರಾಜ್ಯ ಚಲಚನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Popular Tamil actor and comedian Vivekh died this morning in the hospital hours after he was admitted after a cardiac arrest. The 59-year-old was reportedly critical in a Chennai hospital after a cardiac arrest on Thursday morning.