ಬ್ರೇಕಿಂಗ್ ನ್ಯೂಸ್
19-04-21 01:37 pm Headline Karnataka News Network ಸಿನಿಮಾ
ಬೆಂಗಳೂರು,ಎ.19: ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಖಚಿತಪಡಿಸಿರುವ ಅವರು, ಅನೇಕರ ವಿರುದ್ಧ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ರಾಘವೇಂದ್ರ, ಆರೋಗ್ಯ ಸಚಿವ ಸುಧಾಕರ್, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಒಂದು ವೇಳೆ ತಾವು ನಿಧನರಾದರೆ ಅದಕ್ಕೆ ಯಡಿಯೂರಪ್ಪ, ರಾಘವೇಂದ್ರ, ಸುಧಾಕರ್ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್ ಹೇಳಿದ್ದಾರೆ.
ಕೊನೇ ಕ್ಷಣಗಳ ಕೊನೇ ಮಾತುಗಳು. ಕೊರೊನಾ ಪಾಸಿಟಿವ್ ಬಂದಿದೆ. ನಮ್ಮ ಮನೆಯವರೆಗೂ ಕೊರೊನಾ ತಂದುಕೊಟ್ಟಂತಹ ಯಡಿಯೂರಪ್ಪ, ವಿಜಯೇಂದ್ರ ಇವರಿಗೆಲ್ಲ ಧನ್ಯವಾದಗಳು. ನಮ್ಮ ಸಾವಿಗೆ ಮುನ್ನುಡಿ ಬರೆದಿದ್ದೀರಿ. ಕೊರೊನಾ ಪಾಸಿಟಿವ್ ಆಗಿದ್ದಕ್ಕೆ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಸತ್ತರೂ ಕೂಡ ಕೊನೇ ಕ್ಷಣದವರೆಗೂ ನನ್ನ ಈ ಶಾಪ ನೋವು ಕೊಡಬೇಕು ಎಂದು ಈ ಮಾತು ಹೇಳುತ್ತಿದ್ದೇನೆ. ಒಂದೂವರೆ ವರ್ಷ ಟೈಮ್ ತಗೊಂಡು, ಮೂರು-ನಾಲ್ಕು ತಿಂಗಳು ಲಾಕ್ಡೌನ್ ಮಾಡಿದ್ರಲ್ಲ’ ಎನ್ನುವ ಮೂಲಕ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ ಗುರುಪ್ರಸಾದ್.
ಮೋದಿ ಪ್ರಾಮಾಣಿಕ. ಆದರೆ ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಜೆಡಿಎಸ್, ಕಾಂಗ್ರೆಸ್ನವರೆಲ್ಲ ಪ್ರಾಮಾಣಿಕರಲ್ಲ. ಒಂದು ವೈರಸ್ ನಿಮ್ಮನ್ನು ಆಡಿಸುತ್ತಿದೆ. ವಿಜ್ಞಾನದ ಹಿನ್ನೆಲೆ ಇದ್ದರೆ ಡಾ. ಸುಧಾಕರ್ ಬೆಂಗಳೂರಿನಲ್ಲಿ ಒಂದು ಲಕ್ಷ ವಾರ್ಫೇರ್ ಟೆಂಟ್ ಹಾಕಿಸಿ. ಅದರ ಬದಲು ಯಾವುದೇ ಬ್ಯುಸಿನೆಸ್ ನಿಲ್ಲಿಸ ಬೇಡಿ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ. ಒಂದೂವರೆ ವರ್ಷ ಸಮಯ ತೆಗೆದುಕೊಂಡು ಪ್ರತಿಮನೆಗೂ ವೈರಸ್ ಕಳಿಸಿದ್ದೀರಲ್ಲ.. ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಕೊರೊನಾ ಬಂದಿದೆ. ಅಕಸ್ಮಾತ್ ಸತ್ತು ಹೋದರೆ ಇದನ್ನೆಲ್ಲ ಹೇಳೋಕೆ ಆಗಲ್ಲ’ ಎಂದು ಗುರುಪ್ರಸಾದ್ ಹೇಳಿದ್ದಾರೆ.
ಚಿತ್ರರಂಗದ ಅನೇಕ ಜನರನ್ನು ಸಾಯಿಸಿದ್ದೀರಿ. ನಾನು ಕೂಡ ಹಾರ್ಟ್ ಅಟ್ಯಾಕ್ ಆಗಿ ಸಾಯಬಹುದು. ಮನೆಮನೆಗೂ ವೈರಸ್ ಬಂದಿದೆ. ಸಿನಿಮಾ ಪ್ರಚಾರಕ್ಕಾಗಿ ಇದನ್ನೆಲ್ಲ ನಾನು ಮಾಡುತ್ತಿಲ್ಲ. ನಾನು ಬದುಕಿದ್ದರೆ ತಾನೇ ಅದೆಲ್ಲ. ಪ್ರತಿಯೊಬ್ಬರು ಬದುಕುವುದು ಕೂಡ ಮುಖ್ಯ. ಕರ್ನಾಟಕದಲ್ಲಿ ಕೊರೊನಾದಿಂದಾದ ಪ್ರತಿ ಸಾವಿಗೆ ಡಾ. ಸುಧಾಕರ್ ಕಾರಣ. ಡಿ.ಕೆ. ಶಿವಕುಮಾರ್. ಎಚ್.ಡಿ. ಕುಮಾರಸ್ವಾಮಿ ಸಾಚಾ ಎಂದು ನಾನು ಹೇಳುತ್ತಿಲ್ಲ. ಎಲ್ಲರೂ ನಮ್ಮನ್ನು ಕೊಲ್ಲುತ್ತಿದ್ದೀರಿ. ಇದು ನನ್ನ ಡೆತ್ ನೋಟ್. ನನ್ನ ಸಾವಿಗೆ ನೀವೆಲ್ಲರೂ ಕಾರಣ’ ಎಂದು ಗುರುಪ್ರಸಾದ್ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
Director Guruprasad mata tested covid positive. Alleges Karnataka ministers CM and Dr Sudhakar will be responsible for my death on Facebook live video.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm