ಹಿರಿಯ ನಟ ಕಿಶೋರ್ ನಂದಲಸ್ಕರ್ ಕೊರೊನಾದಿಂದ ಸಾವು

20-04-21 07:50 pm       Source: FILMIBEAT   ಸಿನಿಮಾ

ಹಿಂದಿ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ ಕಿಶೋರ್ ನಂದಲಸ್ಕರ್ (kishore nandlaskar) ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ ಕಿಶೋರ್ ನಂದಲಸ್ಕರ್ (kishore nandlaskar) ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ವಾಸ್ತವ್, ಸಿಂಗಮ್, ಸಿಂಬಾ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದ ಕಿಶೋರ್ ಅವರು ಮಂಗಳವಾರ ಮಧ್ಯಾಹ್ನ ಥಾಣೆಯಲ್ಲಿ ನಿಧನರಾದರು.

81 ವರ್ಷದ ಕಿಶೋರ್ ನಂದಲಸ್ಕರ್ ಅವರು ಕೊರೊನಾ ವೈರಸ್‌ನಿಂದ ಬಳಲುತ್ತಿದ್ದರು. ಕಿಶೋರ್ ಅವರ ಮೊಮ್ಮಗ ಅನಿಶ್ ತಮ್ಮ ತಾತನ ಕೋವಿಡ್‌ನಿಂದ ನಿಧನರಾಗಿರುವ ಸುದ್ದಿಯನ್ನು ಎಬಿಪಿಗೆ ತಿಳಿಸಿದ್ದಾರೆ.

''ನನ್ನ ಅಜ್ಜ ಕಳೆದ ವಾರ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಏಪ್ರಿಲ್ 14 ರಂದು ಥಾಣೆಯ ಕೋವಿಡ್ -19 ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಅವರು ಇಂದು ಮಧ್ಯಾಹ್ನ ಕೋವಿಡ್ ಕೇಂದ್ರದಲ್ಲಿ ಕೊನೆಯುಸಿರೆಳೆದರು" ಎಂದು ಹೇಳಿದರು. ''ಕೋವಿಡ್ ಕೇಂದ್ರಕ್ಕೆ ಪ್ರವೇಶ ಪಡೆಯುವ ಮೊದಲು ಉಸಿರಾಡಲು ಮತ್ತು ಮಾತನಾಡಲು ಕಷ್ಟ ಅನುಭವಿಸುತ್ತಿದ್ದರು. ಅವರ ಆಮ್ಲಜನಕದ ಮಟ್ಟವೂ ಗಮನಾರ್ಹವಾಗಿ ಕುಸಿದಿತ್ತು'' ಎಂದು ಮೊಮ್ಮಗ ಅನಿಶ್ ಮಾಹಿತಿ ನೀಡಿದ್ದಾರೆ.

ಕಿಶೋರ್ ನಂದಲಸ್ಕರ್ ಅವರು ಮರಾಠಿ ಚಿತ್ರರಂಗದಲ್ಲಿ ಪ್ರಸಿದ್ಧ ನಟ. 1989 ರಲ್ಲಿ ಬಿಡುಗಡೆಯಾದ 'ಇನಾ ಮಿನಾ ಡಿಕಾ' ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಖಾಕೀ (2004), ವಾಸ್ತವ್: ದಿ ರಿಯಾಲಿಟಿ (1999), ಸಿಂಗಮ್ (2011) ಮತ್ತು ಬಾಲಿವುಡ್ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು.

This News Article Is A Copy Of  FILMIBEAT