ಸರ್ಕಾರದ ಬಗ್ಗೆ ಅನು ಪ್ರಭಾಕರ್‌ ಬೇಸರ: ಕೊರೊನಾ ಕುರಿತು ಜಾಗೃತಿ ವಿಡಿಯೋ

22-04-21 08:39 pm       Source: FILMIBEAT   ಸಿನಿಮಾ

ಕೊರೊನಾ ಪಾಸಿಟಿವ್ ಆಗಿರುವ ನಟಿ ಅನು ಪ್ರಭಾಕರ್ ಮುಖರ್ಜಿ ಅವರು ಸರ್ಕಾರವು ಕೊರೊನಾ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಕೊರೊನಾ ಪಾಸಿಟಿವ್ ಆಗಿರುವ ನಟಿ ಅನು ಪ್ರಭಾಕರ್ ಮುಖರ್ಜಿ ಅವರು ಸರ್ಕಾರವು ಕೊರೊನಾ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ನಟಿ ಅನು ಪ್ರಭಾಕರ್ ಅವರಿಗೆ ಏಪ್ರಿಲ್ 17 ರಂದು ಕೊರೊನಾ ಪಾಸಿಟಿವ್ ಆಗಿತ್ತು. ಅವರಿಗೆ ಸ್ಯಾಂಪಲ್ ರೆಫರಸ್ ಫಾರ್ಮ್ ನಂಬರ್ ಸಹ ದೊರಕಿತ್ತು. ಆದರೆ ಅದಾಗಿ ನಾಲ್ಕು ದಿನವಾದರೂ ಅನು ಪ್ರಭಾಕರ್ ಅವರ ದಾಖಲೆಗಳು ಕೋವಿಡ್ ವಾರ್ ವೆಬ್‌ಸೈಟ್‌ಗೆ ಅಪ್‌ಲೋಡ್ ಆಗಿರಲಿಲ್ಲ. ಈ ಬಗ್ಗೆ ಸಚಿವ ಸುಧಾಕರ್ ಅವರಿಗೆ ಟ್ವೀಟ್ ಮಾಡಿದ್ದ ಅನು ಪ್ರಭಾಕರ್, ನನಗೆ ಈ ವರೆಗೆ ಬಿಯು ನಂಬರ್ ಸಹ ದೊರೆತಿಲ್ಲ ಹಾಗೂ ಬಿಬಿಎಂಪಿಯಿಂದ ಕರೆ ಸಹ ಬಂದಿಲ್ಲ' ಎಂದಿದ್ದರು.

ಇದೀಗ ಅನುಪ್ರಭಾಕರ್ ಅವರು ಅವರ ಮನೆಯಲ್ಲಿಯೇ ಐಸೋಲೇಷನ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿರು ವಿಡಿಯೋಗಳನ್ನು ಪ್ರಕಟಿಸುವ ಮೂಲಕ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅನು ಪ್ರಭಾಕರ್ ಅವರಿಗೆ ಪಾಸಿಟಿವ್ ಬಂದಿದೆಯಾದರೂ ಅವರ ಕುಟುಂಬದವರಿಗೆ ನೆಗೆಟಿವ್ ಬಂದಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ವಿಡಿಯೋದಲ್ಲಿ ಮಾಹಿತಿ ನೀಡಿರುವ ಅನು ಪ್ರಭಾಕರ್, 'ನನಗೆ ಕಳೆದ ವಾರವೇ ರುಚಿ ಮತ್ತು ವಾಸನೆ ಗ್ರಹಿಕೆ ನಿಧಾನಕ್ಕೆ ಕಡಿಮೆಯಾಗುತ್ತಾ ಬಂತು. ಕೂಡಲೇ ನಾನು ವೈದ್ಯೆ ಆಗಿರುವ ನನ್ನ ಸಹೋದರಿಗೆ ಕರೆ ಮಾಡಿದೆ, ಆಕೆಯ ಸಲಹೆಯಂತೆ ಪರೀಕ್ಷೆಗೆ ಒಳಪಟ್ಟೆ ಹಾಗೂ ವರದಿಗಾಗಿ ಕಾಯದೆ ನನ್ನ ಕುಟುಂಬದವರಿಂದ ಪ್ರತ್ಯೇಕವಾಗಿ ಇದ್ದು ಐಸೋಲೇಶನ್‌ಗೆ ಒಳಪಟ್ಟೆ.

ಬಹುಷಃ ಹಾಗಾಗಿ ನನ್ನ ಕುಟುಂಬದವರಿಗೆ ನೆಗೆಟಿವ್ ಬಂತು' ಎಂದಿದ್ದಾರೆ. 'ಯಾರಿಗೇ ಆಗಲಿ ರೋಗ ಲಕ್ಷಣಗಳು ಬಂದ ಕೂಡಲೇ ಪರೀಕ್ಷೆಗೆ ಒಳಪಡಿ ಮತ್ತು ವರದಿಗಾಗಿ ಕಾಯದೆ ಮೊದಲು ಐಸೋಲೇಷನ್‌ ಆಗಿ' ಎಂದು ಮನವಿ ಮಾಡಿದ್ದಾರೆ ಅನು ಪ್ರಭಾಕರ್. ನಟಿಯ ಈ ಜಾಗೃತಿ ವಿಡಿಯೋವನ್ನು ಕರ್ನಾಟಕ ಆರೋಗ್ಯ ಇಲಾಖೆ ಸಹ ರೀಟ್ವೀಟ್ ಮಾಡಿದೆ.

This News Article Is A Copy Of FILMIBEAT