ನಟಿ, ಟಿವಿ ನಿರೂಪಕಿ ಕನುಪ್ರಿಯಾ ಕೊರೊನಾಗೆ ಬಲಿ

03-05-21 11:15 am       Source: FILMIBEAT Shruthi Gk   ಸಿನಿಮಾ

ನಿರೂಪಕಿಯಾಗಿ, ನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಕನುಪ್ರಿಯಾ ಕೊರೊನಾಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಕೊರೊನಾ ಮಹಾಮಾರಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಚಿತ್ರರಂಗದ ಅನೇಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಟಿವಿ ಖ್ಯಾತ ನಿರೂಪಕಿ ಮತ್ತು ನಟಿ ಕನುಪ್ರಿಯಾ ಕೊರೊನಾಗೆ ಬಲಿಯಾಗಿದ್ದಾರೆ. ಬ್ರಹ್ಮ ಕುಮಾರಿಸ್ ಮತ್ತು ಕರ್ಮಭೂಮಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವ ಮೂಲಕ ಕನುಪ್ರಿಯಾ ಪ್ರಸಿದ್ಧಿಗಳಿಸಿದ್ದರು. ನಿರೂಪಕಿಯಾಗಿ, ನಟಿಯಾಗಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು.

ಈ ವಿಚಾರವನ್ನು ಕನುಪ್ರಿಯಾ ಸಹೋದರಿ ಬಿ.ಕೆ ಶಿವಾನಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಬಳಿಕ ಕನುಪ್ರಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕನುಪ್ರಿಯಾ ನಡೆಸಿಕೊಡುತ್ತಿದ್ದ ಕರ್ಮಭೂಮಿ ಕಾರ್ಯಕ್ರಮ ಯುವ ನಾಯಕತ್ವವನ್ನು ಕೇಂದ್ರಿಕರಿಸಿತ್ತು. ನಾಯಕತ್ವ, ಸ್ವಯಂ ಸುಧಾರಣೆ, ನಿರ್ಧಾರ ತೆಗೆದುಕೊಳ್ಳುವುದು ಹೀಗೆ ಯುವಕರನ್ನು ಪ್ರೇರೇಪಿಸುವ ಕಾರ್ಯಕ್ರಮವಾಗಿತ್ತು.

ನಟಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಕನುಪ್ರಿಯಾ 80ಕ್ಕೂ ಹೆಚ್ಚು ಧಾರಾವಾಹಿ, 50 ಟೆಲಿಫಿಲ್ಮ್ ಗಳಲ್ಲಿ ನಟಿಸಿದ್ದಾರೆ. ಭನ್ವಾರ್, ಕಹಿ ಏಕ್ ಗಾಂವ್, ಮೇರಿ ಕಹಾನಿ, ಕರ್ತವ್ಯ, ತೆಸು ಕೆ ಫೂಲ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

This News Article Is A Copy Of FILMIBEAT