ಬಾಡಿಗೆ ತಾಯಿ ಬಳಿ ಅವಳಿ ಮಕ್ಕಳನ್ನು ಪಡೆದ ನಟಿ ಪ್ರೀತಿ ಜಿಂಟಾ – ಗುಡಿನೋ ದಂಪತಿ

18-11-21 11:00 pm       HK News Desk   ಸಿನಿಮಾ

ಬಾಲಿವುಡ್ ನಟಿ, ಪಂಜಾಬ್ ಐಪಿಎಲ್ ತಂಡದ ಸಹ ಮಾಲಕಿ ಪ್ರೀತಿ ಝಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.

ನವದೆಹಲಿ, ನ.18: ಬಾಲಿವುಡ್ ನಟಿ, ಪಂಜಾಬ್ ಐಪಿಎಲ್ ತಂಡದ ಸಹ ಮಾಲಕಿ ಪ್ರೀತಿ ಝಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.

2016ರಲ್ಲಿ ಅಮೆರಿಕ ಮೂಲದ ಬಿಸಿನೆಸ್ ಮ್ಯಾನ್ ಜೀನ್ ಗುಡಿನೋ ಅವರನ್ನು ಮದುವೆಯಾದ ಬಳಿಕ ಪ್ರೀತಿ ಜಿಂಟಾ ಅಮೆರಿಕದಲ್ಲಿಯೇ ನೆಲೆಸಿದ್ದರು. ಈಗ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಬಗ್ಗೆ ಪ್ರೀತಿ ಜಿಂಟಾ ಇನ್ ಸ್ಟಾ ಗ್ರಾಮ್ ಪೋಸ್ಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಗಂಡು ಮತ್ತು ಹೆಣ್ಣು ಮಗುವಾಗಿದ್ದು, ಅವರಿಗೆ ಜೈ ಜಿಂಟಾ ಗುಡಿನೋ ಮತ್ತು ಜಿಯಾ ಜಿಂಟಾ ಗುಡಿನೋ ಎಂದು ಹೆಸರಿಟ್ಟಿದ್ದಾರೆ. ಅವರನ್ನು ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇವೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸ ಆಗುತ್ತಿದೆ ಎಂದು ಪ್ರೀತಿ ಜಿಂಟಾ ಪೋಸ್ಟ್ ಮಾಡಿದ್ದಾರೆ. ಪತಿ ಜೀನ್ ಜೊತೆಗಿನ ಸೆಲ್ಫೀ ಫೋಟೋ ಒಂದನ್ನು ಪೋಸ್ಟ್ ಮಾಡಿರುವ ಪ್ರೀತಿ, ವೈದ್ಯರು, ನರ್ಸ್ ಗಳು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಪ್ರೀತಿ ಜಿಂಟಾ ಮತ್ತು ಗುಡಿನೋ ಅವರ ವೀರ್ಯ ಮತ್ತು ಅಂಡಾಣುವನ್ನು ಟೆಸ್ಟ್ ಟ್ಯೂಬ್ ನಲ್ಲಿ ಒಂದಾಗಿಸಿ, ಅದು ಫಲಿಸಿದ ಬಳಿಕ ಬಾಡಿಗೆ ಮಹಿಳೆಯ ಹೊಟ್ಟೆಯಲ್ಲಿರಿಸಿ ಭ್ರೂಣವನ್ನು ಬೆಳೆಸಲಾಗುತ್ತದೆ. ವಿದೇಶದಲ್ಲಿ ಶ್ರೀಮಂತರು ಈ ರೀತಿ ಮಕ್ಕಳನ್ನು ಪಡೆಯುವುದು ಕಾಮನ್ ಆಗಿದೆ. ಅದಕ್ಕಾಗಿಯೇ ಕೆಲವು ಮಹಿಳೆಯರು ವಿದೇಶದಲ್ಲಿದ್ದು, ಭಾರೀ ಹಣವನ್ನೂ ಪಡೆಯುತ್ತಾರೆ. 9 ತಿಂಗಳ ಕಾಲ ಜತನಲ್ಲಿದ್ದು ಮಕ್ಕಳನ್ನು ಹೆತ್ತು ಸಲಹಿದ ಬಳಿಕ ಅದರ ಹೆತ್ತವರಿಗೆ ಬಿಟ್ಟು ಹೋಗುತ್ತಾರೆ.

Congratulations, Preity Zinta and Gene Goodenough. The couple surprised their fans on Thursday by announcing the birth of their twins - Jai and Gia - via surrogacy in an Instagram post.