ಬ್ರೇಕಿಂಗ್ ನ್ಯೂಸ್
04-12-21 05:00 pm HK Desk news ಸಿನಿಮಾ
ಬೆಂಗಳೂರು, ಡಿ.4: ಕನ್ನಡ ಚಿತ್ರರಂಗದ ಪಾಲಿನ ಹಳೆಯ ಕೊಂಡಿ, ನಟ, ನಿರ್ಮಾಪಕ, ನಿರ್ದೇಶಕರಾಗಿ ಸುದೀರ್ಘ ಆರು ದಶಕಗಳಿಂದ ಗುರುತಿಸಿಕೊಂಡಿದ್ದ ಶಿವರಾಮಣ್ಣ (81) ನಮ್ಮನ್ನಗಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸುದೀರ್ಘ ಕಾಲದಿಂದ ಹೆಸರು ಮಾಡಿದ್ದ ಶಿವರಾಂ ಕನ್ನಡ ಚಿತ್ರರಂಗದ ದಂತಕತೆ ರಾಜಕುಮಾರ್ ಜೊತೆಗಿನ ಸುದೀರ್ಘ ಒಡನಾಡಿ. ಹಲವಾರು ಚಿತ್ರಗಳಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಜೊತೆಗೆ ಕಾಣಿಸಿಕೊಂಡಿದ್ದವರು. ಬಳಿಕ ತಮ್ಮ ಇಳಿವಯಸ್ಸಿನಲ್ಲಿ ರಾಜಕುಮಾರ್ ಪುತ್ರರ ಜೊತೆಗೂ ನೂರಾರು ಚಿತ್ರಗಳಲ್ಲಿ ಕಾಣಿಸಿದ್ದ ಅಪರೂಪದ ಮನುಷ್ಯ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ಸ್ಟಾರ್ ಚಿತ್ರಗಳಲ್ಲೆಲ್ಲ ಶಿವರಾಂ ಕೂಡ ಇದ್ದರೆನ್ನುವುದು ವಿಶೇಷ.
1972 ರಲ್ಲಿ ತಮ್ಮ ಸಹೋದರ ಎಸ್.ಶಿವರಾಮನ್ ಜೊತೆ ಸೇರಿ ರಾಶಿ ಬ್ರದರ್ಸ್ ಎನ್ನುವ ಸಂಸ್ಥೆ ಸ್ಥಾಪಿಸಿದ್ದ ಶಿವರಾಂ ಸಹೋದರರು ಕನ್ನಡ, ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಮೊದಲಿಗೆ ಹೃದಯ ಸಂಗಮ, ನಂತರ ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಹೀಗೆ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದರು. ಡಾ.ರಾಜ್ ಕುಮಾರ್ ಅವರ 175 ನೇ ಚಿತ್ರ “ನಾನೊಬ್ಬ ಕಳ್ಳ” ನಿರ್ಮಿಸಿದ ಹೆಗ್ಗಳಿಕೆಯೂ ರಾಶಿ ಬ್ರದರ್ಸ್ ಸಂಸ್ಥೆಗೆ ಸೇರುತ್ತದೆ.
1958 ರಿಂದ 1965 ರವರೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶಿವರಾಂ, ಕಲ್ಯಾಣ್ ಕುಮಾರ್ ನಟನೆಯ ಬೆರೆತ ಜೀವ ಚಿತ್ರದಲ್ಲಿ ಪೋಷಕ ಕಲಾವಿದನಾಗಿ ಬಣ್ಣ ಹಚ್ಚಲು ಆರಂಭಿಸಿದ್ದರು. ಅಂದಿನಿಂದ ಇತ್ತೀಚಿನ 2000 ಇಸವಿ ವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಶಿವರಾಂ ಚಂದನವನಕ್ಕೆ ನೀಡಿದ ಕೊಡುಗೆ ಅಪಾರವಾದ್ದು. ಚಲಿಸುವ ಮೋಡಗಳು, ಶ್ರಾವಣ ಬಂತು ಶ್ರಾವಣ, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು , ಸಿಂಹದ ಮರಿ, ಮಕ್ಕಳ ಸೈನ್ಯ, ಎರಡು ನಕ್ಷತ್ರಗಳು, ಭಕ್ತಪ್ರಹ್ಲಾದ ಸೇರಿ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿದ್ದರು. ಜೊತೆಗೆ, ದ್ವಾರಕೀಶ್ ಜೊತೆಗೆ ಹಾಸ್ಯ ಪ್ರಧಾನ ಚಿತ್ರಗಳಲ್ಲೂ ಪಾತ್ರಗಳನ್ನು ಮಾಡಿದ್ದಾರೆ. ಶಿವರಾಂ ಅವರಿಗೆ 2010 ರಲ್ಲಿ ಜೀವಮಾನ ಸಾಧನೆಗೆ ಕೊಡಮಾಡುವ ಡಾ.ರಾಜ್ ಕುಮಾರ್ ಪ್ರಶಸ್ತಿ, 2013 ರಲ್ಲಿ ಪದ್ಮಭೂಷಣ, ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿದ್ದರು.
1965 ರಲ್ಲಿ ಮೊದಲ ಬಾರಿಗೆ ಬೆರೆತ ಜೀವ ಚಿತ್ರದಲ್ಲಿ ನಟನಾ ವೃತ್ತಿ ಆರಂಭಿಸಿದ್ದ ಶಿವರಾಂ ಕೊನೆಯ ಬಾರಿಗೆ 2021 ರಲ್ಲಿ ಸ್ನೇಹಿತ ಎನ್ನುವ ಚಿತ್ರದಲ್ಲಿ ನಟಿಸಿದ್ದರು.
ಜತೆಗೆ ಭಾಗ್ಯದ ಲಕ್ಷ್ಮಿ ಬಾರಮ್ಮ, ರಾಜಾ ಕೆಂಪು ರೋಜಾ, ಗಂಡು ಸಿಡಿಗುಂಡು, ಹಳ್ಳಿ ರಂಭೆ ಬೆಳ್ಳಿ ಬೊಂಬೆ, ಮಾಂಗಲ್ಯ, ಧರ್ಮದೊರೈ, ಸಾಹಸಿ, ಕ್ಷೀರಸಾಗರ, ಪ್ರೇಮ ಸಂಗಮ, ಕೋಣ ಈದೈತೆ, ಅಮ್ಮಾವ್ರ ಗಂಡ, ತಾಯಿಸಾಹೇಬ, , ಸಿಂಹಾದ್ರಿಯ ಸಿಂಹ, ಹೃದಯವಂತ, ರಾಜಾ ನರಸಿಂಹ, ಆಪ್ತಮಿತ್ರ ಚಿತ್ರಗಳಲ್ಲಿನ ನಟನೆಯಿಂದ ಶಿವರಾಂ ಗಮನ ಸೆಳೆದಿದ್ದರು. ಕನ್ನಡದ ಬಹುತೇಕ ಎಲ್ಲ ನಟ- ನಟಿಯರ ಜೊತೆ ಸಿನಿಮಾಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದ ಅಪರೂಪದ ಸಾಧನೆಯೂ ಶಿವರಾಂ ಅವರದ್ದು.
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ನಿರ್ಮಿಸಿದ ಗೆಜ್ಜೆಪೂಜೆ ಚಿತ್ರ ಶಿವರಾಂ ಮಾಲೀಕತ್ವದ ರಾಶಿ ಬ್ರದರ್ಸ್ ಸಂಸ್ಥೆಗೆ ಹೆಸರು ತಂದುಕೊಟ್ಟಿತ್ತು. ಆನಂತರ ಪುಟ್ಟಣ್ಣ ಜೊತೆಗಿನ ಸಂಬಂಧ ಮುಂದುವರಿದು ಹಲವಾರು ಚಿತ್ರಗಳನ್ನು ನೀಡುವಂತಾಗಿತ್ತು. ಕನ್ನಡದ ಸೂಪರ್ ಹಿಟ್ ಚಿತ್ರ ದೇವಾದ ತಮಿಳು ಅವತರಣಿಕೆ ಧರ್ಮ ದುರೈ ಚಿತ್ರವನ್ನೂ ಶಿವರಾಂ ನಿರ್ಮಿಸಿದ್ದರು. 1985 ರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗಾಗಿ ಗಿರಫ್ದಾರ್ ಎನ್ನುವ ಚಿತ್ರ ನಿರ್ಮಿಸಿ ಬಾಲಿವುಡ್ಡಿನಲ್ಲೂ ಹೆಸರು ಗಳಿಸಿದ್ದರು.
ಸಣ್ಣ ವಯಸ್ಸಿನಲ್ಲೇ ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನದ ಪ್ರಭಾವಕ್ಕೆ ಒಳಗಾಗಿದ್ದ ಶಿವರಾಂ, ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ (1958) ಆಗಿನ ಸ್ಟಾರ್ ನಿರ್ದೇಶಕ ಕು. ರಾ. ಸೀತಾರಾಮ ಶಾಸ್ತ್ರಿ ಬಳಿ ಸಹಾಯಕರಾಗಿ ಸೇರಿಕೊಂಡರು. ಬೊಮನ್ ಡಿ ಇರಾನಿ ಅವರ ಜೊತೆಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದರು. ಬಳಿಕ ಕೆಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಖ್ಯಾತನಾಮರ ಜೊತೆ ಸಹಾಯಕರಾಗಿ ದುಡಿದಿದ್ದರು. ಇವರ ವಿಶೇಷ ಅಂದ್ರೆ, ಚಿತ್ರರಂಗದ ಹಿರಿ-ಕಿರಿಯ ಕಲಾವಿದರ ನಡುವೆ ಹಿರಿತನದ ಅಹಂ ಇಲ್ಲದೆ, ಎಲ್ಲರ ನಡುವೆ ಕೊಂಡಿಯಾಗೇ ಇದ್ದರು. ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಗ್ಗೆ ಅಪಾರ ಭಕ್ತಿ ಇಟ್ಟುಕೊಂಡಿದ್ದ ಶಿವರಾಂ, ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಕಲಾವಿದರನ್ನು ಶಬರಿಮಲೆಗೆ ಕರೆದೊಯ್ಯುವ ಸಂಪ್ರದಾಯಕ್ಕೆ ನಾಂದಿ ಹಾಡಿ ಕಡೆಕಾಲದ ವರೆಗೂ ಅದನ್ನು ಮುಂದುವರಿಸಿದ್ದರು.
Some of his memorable roles were in films of director Puttanna Kanagal, and with matinee idol Rajkumar. Veteran actor Shivaram, 83, who was undergoing treatment for brain haemorrhage at a private hospital in Bengaluru, passed away on December 4 morning.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 05:56 pm
Mangalore Correspondent
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am