ಬ್ರೇಕಿಂಗ್ ನ್ಯೂಸ್
25-12-21 01:12 pm Mangalore Correspondent ಸಿನಿಮಾ
ಮಂಗಳೂರು, ಡಿ.25 : ಗುಳಿ ಕೆನ್ನೆಯ ಚೆಲುವೆ, ನಟಿ ರಚಿತಾ ರಾಮ್ ಮಂಗಳೂರಿನ ಪೊಲೀಸರಲ್ಲಿ ಮಿಂಚು ಹರಿಸಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಕರೆಯಂತೆ, ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ನಟಿ ರಚಿತಾ ಪೊಲೀಸರ ಜೊತೆಗೆ ಬೆರೆತು ಹರಟಿದ್ದಾರೆ.
ದೇವಸ್ಥಾನ ಭೇಟಿ ಸೇರಿದಂತೆ ಖಾಸಗಿ ಕಾರ್ಯಕ್ರಮಕ್ಕೆಂದು ರಚಿತಾ ಮಂಗಳೂರಿಗೆ ಆಗಮಿಸಿದ್ದರು. ಪಬ್ಬಾಸ್ ನಲ್ಲಿ ಐಸ್ ಕ್ರೀಮ್ ತಿಂದು ಹೋಗೋಣ ಎಂದು ಲಾಲ್ ಬಾಗ್ ಬಂದಿದ್ರಂತೆ. ಅಷ್ಟೊತ್ತಿಗೆ ಕಮಿಷನರ್ ಶಶಿಕುಮಾರ್ ಫೋನ್ ಮಾಡಿದ್ದು, ಕಚೇರಿಗೆ ಬರುವಂತೆ ಹೇಳಿದ್ದಾರೆ. ಅದರಂತೆ, ಕಚೇರಿಗೆ ಬಂದ ನಟಿಯನ್ನು ಪೊಲೀಸರು ಮುತ್ತಿಕೊಂಡಿದ್ದಾರೆ.
ಸಿನಿಮಾದಲ್ಲಿ ನೋಡಿದ್ದ ಪೊಲೀಸರು ನಟಿಯನ್ನು ಕಾಣುತ್ತಲೇ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ನಟಿಯ ಅಕ್ಕ ಪಕ್ಕದಲ್ಲಿ ನಿಂತು ಥರಹೇವಾರಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಮಹಿಳಾ ಪೊಲೀಸ್ ಪೇದೆಯರು, ಕಮಿಷನರ್ ಕಚೇರಿಯ ಉದ್ಯೋಗಸ್ಥ ಸಿಬಂದಿ, ಪೊಲೀಸ್ ಅಧಿಕಾರಿಗಳೆಲ್ಲ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಇದೇ ವೇಳೆ, ಪೊಲೀಸರ ವತಿಯಿಂದ ಕಮಿಷನರ್ ಶಶಿಕುಮಾರ್ ರಚಿತಾ ರಾಮ್ ಅವರನ್ನು ಸನ್ಮಾನಿಸಿದರು. ಕರಾವಳಿಯ ಯಕ್ಷಗಾನದ ಕಿರೀಟವುಳ್ಳ ಸ್ಮರಣಿಕೆ, ಶಾಲು ಹೊದೆಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆ, ಮಾತನಾಡಿದ ನಟಿ ತಮ್ಮ ಚೆಲ್ಲು ಚೆಲ್ಲು ಮಾತುಗಳಿಂದಲೇ ಪೊಲೀಸರನ್ನು ಆಕರ್ಷಿಸಿದರು. ಏನೋ ಆಕಸ್ಮಿಕವಾಗಿ ಬಂದಿದ್ದೇನೆ. ಯಾವುದೇ ಮೇಕಪ್ ಮಾಡಿಕೊಂಡಿಲ್ಲ ಎಂದು ನಗುತ್ತಾ ಇಲ್ಲಿ ಬರೋದಿಕ್ಕೆ ಶಶಿ ಸರ್ ಕಾರಣ ಎಂದು ಹೇಳಿದರು. ನನಗೂ ಸಣ್ಣಂದಿನಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಆದರೆ ಈಡೇರಲಿಲ್ಲ. ಬದಲಿಗೆ ನಟಿಯಾಗಿದ್ದೇನೆ. ನಟಿಯಾಗಿ ಸಾಧಾರಣ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಪೊಲೀಸ್ ಅಧಿಕಾರಿಯಾಗುವ ಪಾತ್ರ ಇನ್ನೂ ಸಿಕ್ಕಿಲ್ಲ. ಅಂಥ ಉತ್ತಮ ಚಿತ್ರಕತೆ ಸಿಕ್ಕಿದರೆ ಮಾಡಬೇಕೆಂದಿದ್ದೇನೆ ಎಂದು ಹೇಳಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಎಲ್ಲರೂ ಖುಷಿಯಿಂದಿರಿ. ಖುಷಿಯಿಂದ ಜೀವನ ಎಂಜಾಯ್ ಮಾಡಿ. ಇವತ್ತು ಹೀಗಿದ್ದೇವೆ, ನಾಳೆ ಹೇಗಿರುತ್ತೇವೋ ಗೊತ್ತಿಲ್ಲ. ಅದಕ್ಕಾಗಿ ಪಾಸಿಟಿವ್ ಆಗಿ ಯೋಚಿಸುತ್ತಾ ಖುಷಿಯಿಂದಿರಬೇಕು ಎನ್ನುತ್ತಾ ಪುನೀತ್ ಹೆಸರೇಳದೆ, ಅಂದಿನ ಘಟನೆಯನ್ನು ಮೆಲುಕು ಹಾಕಿದರು. ಮುಂದಿನ ವಾರ ತನ್ನ ಹೊಸ ಫಿಲ್ಮ್ ಬರ್ತಿದೆ, ಎಲ್ಲರೂ ನೋಡಿ. ಸಪೋರ್ಟ್ ಮಾಡಿ ಎನ್ನುತ್ತಾ ಬೈ ಬೈ ಹೇಳಿದರು.
Actress Rachita Ram in Mangalore, facilitated by Police Commissioner Shahi Kumar and staffs. Police personals thronged for selfies. Also Rachita thanked the Mangalore police department for their overwhelm love and care.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm