ಪೂನಂ ಪಾಂಡೆಗೆ ಮದುವೆಯಾದ ಒಂದೇ ವಾರದಲ್ಲಿ ಪತಿಯ ಕಿರುಕುಳವಂತೆ..!

23-09-20 12:39 pm       Headline Karnataka News Network   ಸಿನಿಮಾ

ಪೂನಂ ಪಾಂಡೆ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಆಕೆಯ ಪತಿ ಸ್ಯಾಮ್‌ ಅಹ್ಮದ್‌ ಬಾಂಬೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಗೋವಾ, ಸೆಪ್ಟಂಬರ್ 23: ಹತ್ತು ದಿನಗಳ ಹಿಂದಷ್ಟೇ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಪತಿಯ ವಿರುದ್ಧವೇ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೂನಂ ಪತಿ ಸ್ಯಾಮ್​ ಬಾಂಬೆ ಅವರನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಪೂನಂ ಪಾಂಡೆ ಇತ್ತೀಚೆಗೆ ಸೆಪ್ಟೆಂಬರ್ 11 ರಂದು ತನ್ನ ಬಹುದಿನದ ಗೆಳೆಯ ಸ್ಯಾಮ್ ಬಾಂಬೆಯನ್ನು ಮದುವೆಯಾಗಿರುವುದಾಗಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ನಂತರ ಇಬ್ಬರು ಹನಿಮೂನ್ ಗೆ ತೆರಳಿದ್ದು, ಈ ಕುರಿತಂತೆ ಹಸಿ ಬಿಸಿ ದೃಶ್ಯಗಳಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. 

ಪೂನಂ ಪಾಂಡೆ ಪ್ರಸ್ತುತ  ಶೂಟಿಂಗ್​ ನಿಮಿತ್ತ ಗೋವಾದ ಕ್ಯಾನಕೋನಾದಲ್ಲಿದ್ದಾರೆ. ಈ ನಡುವೆ, ಸೋಮವಾರ ರಾತ್ರಿ ಪತಿ ಕಿರುಕುಳ ನೀಡಿದ್ದು ಹಲ್ಲೆಗೈದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕ್ಯಾನಕೋನಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ, ಅಲ್ಲಿಯೇ ಇದ್ದ ಸ್ಯಾಮ್​ ಬಾಂಬೆಯನ್ನು ಪೊಲೀಸರು ಬಂಧಿಸಿದ್ದಾರೆ.

Join our WhatsApp group for latest news updates (2)