Vijay: 'ಬೀಸ್ಟ್‌' ಟೀಮ್‌ಗೆ ಶಾಕ್ ಕೊಟ್ಟ ಕುವೈತ್‌ ಸರ್ಕಾರ; ಸಿನಿಮಾ ಪ್ರದರ್ಶನ ಮಾಡಂಗಿಲ್ಲ!

05-04-22 02:04 pm       Source: Vijayakarnataka   ಸಿನಿಮಾ

'ಮಾಸ್ಟರ್' ಸಿನಿಮಾದ ನಂತರ ವಿಜಯ್ ನಟಿಸಿರುವ 'ಬೀಸ್ಟ್‌' ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸನ್‌ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಾಡುಗಳು ಭರ್ಜರಿ ಹಿಟ್ ಆಗಿವೆ. ಈ ಮಧ್ಯೆ ಒಂದು ಸಮಸ್ಯೆ ಎದುರಾಗಿದ್ದು, ಕುವೈತ್ ಸರ್ಕಾರ ಈ ಸಿನಿಮಾವನ್ನೇ ಬ್ಯಾನ್ ಮಾಡಲು ಆದೇಶಿಸಿದೆ. ಇದಕ್ಕೆ ಕಾರಣವೇನು? ಮುಂದೆ ಓದಿ.

'ದಳಪತಿ' ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ಬೀಸ್ಟ್' ಸಿನಿಮಾ ಏಪ್ರಿಲ್ 13ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಒಂದು ವರ್ಷದ ನಂತರ ವಿಜಯ್ ಸಿನಿಮಾವೊಂದು ತೆರೆಗೆ ಬರುತ್ತಿರುವುದರಿಂದ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. ಈಚೆಗಷ್ಟೇ ರಿಲೀಸ್ ಆಗಿರುವ ಸಿನಿಮಾದ ಟ್ರೇಲರ್ ಎಲ್ಲರ ಗಮನಸೆಳೆಯುತ್ತಿದೆ. ತಮಿಳು ಜೊತೆಗೆ ಹಿಂದಿ, ತೆಲುಗು, ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ ಒಂದು ಬ್ಯಾಡ್ ನ್ಯೂಸ್ ವಿಜಯ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಅದೇನೆಂದರೆ, ಈ ಬಹುನಿರೀಕ್ಷಿತ 'ಬೀಸ್ಟ್' ಸಿನಿಮಾವನ್ನು ಕುವೈತ್‌ನಲ್ಲಿ ನೋಡುವಂತಿಲ್ಲ. ಅಲ್ಲಿ ಪ್ರದರ್ಶನ ಮಾಡದಂತೆ ಸಿನಿಮಾವನ್ನು ಬ್ಯಾನ್ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ! ಇದು ಸಿನಿಮಾ ತಂಡಕ್ಕೆ ದೊಡ್ಡ ಶಾಕ್ ನೀಡಿದೆ. ಅಷ್ಟಕ್ಕೂ ಇಂಥದ್ದೊಂದು ಖಡಕ್ ನಿರ್ಧಾರಕ್ಕೆ ಕಾರಣವೇನು?

ಮುಸ್ಲಿಮರನ್ನು ಟೆರರಿಸ್ಟ್‌ ರೀತಿ ತೋರಿಸುವ ಹಾಗಿಲ್ಲ!

Vijay: 'ಬೀಸ್ಟ್‌' ಟೀಮ್‌ಗೆ ಶಾಕ್ ಕೊಟ್ಟ ಕುವೈತ್‌ ಸರ್ಕಾರ; ಸಿನಿಮಾ ಪ್ರದರ್ಶನ  ಮಾಡಂಗಿಲ್ಲ! - GhandiClass
ಕುವೈತ್‌ ಸರ್ಕಾರ ಒಂದು ನಿಯಮ ರೂಪಿಸಿದೆ. ಅದೇನೆಂದರೆ, ಸಿನಿಮಾಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದಕರಂತೆ ತೋರಿಸುವ ಹಾಗಿಲ್ಲ. ಹಾಗೇ ತೋರಿಸಿದರೆ, ಅಂಥ ಸಿನಿಮಾಗಳನ್ನು ಕುವೈತ್‌ನಲ್ಲಿ ಪ್ರದರ್ಶನ ಮಾಡುವುದಕ್ಕೆ ಅನುಮತಿ ನೀಡುವುದಿಲ್ಲ. ಇದೀಗ ಆ ನಿಯಮ 'ಬೀಸ್ಟ್'ಗೂ ಅನ್ವಯಿಸಲಿದೆ. ಅಷ್ಟಕ್ಕೂ ಸಿನಿಮಾದಲ್ಲಿ ಏನಿದೆ? ಚೆನ್ನೈನ ಪ್ರಸಿದ್ಧ ಮಾಲ್‌ ಮೇಲೆ ಟೆರರಿಸ್ಟ್‌ಗಳು ದಾಳಿ ಮಾಡಿ, ಮಾಲ್‌ನಲ್ಲಿ ಇರುವವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಸಾಕಷ್ಟು ಭಯೋತ್ಪಾದಕರ ಜೊತೆಗೆ ಹೀರೋ ಹೋರಾಡುತ್ತಾನೆ. ಅಲ್ಲದೆ, ಹಾಗೆ ಸಿನಿಮಾದಲ್ಲಿ ಬರುವ ಟೆರರಿಸ್ಟ್‌ ಪಾತ್ರಗಳು ಮುಸ್ಲಿಮರನ್ನು ಹೋಲುತ್ತವೆ. ಆ ಕಾರಣಕ್ಕಾಗಿ ಕುವೈತ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಇದೇ ಮೊದಲ ಬಾರಿ ಏನಲ್ಲ!

Vijay, Pooja Hegde's Arabic Kuthu song from Beast gets 100 million views in  12 days | Music News – India TV
ಈ ರೀತಿ ಭಾರತದ ಸಿನಿಮಾಗಳನ್ನು ಕುವೈತ್ ಸರ್ಕಾರ ಬ್ಯಾನ್ ಮಾಡಿರುವುದು ಇದೇ ಮೊದಲ ಬಾರಿ ಏನಲ್ಲ. ಈಚೆಗೆ ತೆರೆಕಂಡ ಮಲಯಾಳಂ ಕುರುಪ್ ಮತ್ತು ತಮಿಳಿನ ಎಫ್‌ಐಆರ್ ಸಿನಿಮಾಗಳನ್ನು ಕೂಡ ಕುವೈತ್ ಸರ್ಕಾರ ಬ್ಯಾನ್ ಮಾಡಿತ್ತು. ಅದಕ್ಕೂ ಕೂಡ ಇದೇ ಅಂಶವೇ ಕಾರಣವಾಗಿತ್ತು. ಈ ಸಿನಿಮಾಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದು ಕುವೈತ್‌ ಸರ್ಕಾರದ ನೀತಿಗೆ ವಿರುದ್ಧವಾಗಿತ್ತು. ಇದೀಗ ವಿಜಯ್ ಅವರ 'ಬೀಸ್ಟ್‌' ರಿಲೀಸ್‌ಗೆ ತಡೆಯೊಡ್ಡಿರುವುದು ಅಲ್ಲಿರುವ ದಳಪತಿ ಫ್ಯಾನ್ಸ್‌ಗೆ ಬೇಸರ ಉಂಟು ಮಾಡಿದೆ. ಅವರೀಗ ಸಿನಿಮಾ ವೀಕ್ಷಿಸಲು ಬೇರೆಡೆಗೆ ಹೋಗಬೇಕಿದೆ.

Kuwait Government Bans Thalapathy Vijay Pooja Hegdes Beast Movie.