'ಹೊಯ್ಸಳ' ಚಿತ್ರಕ್ಕಾಗಿ ಮತ್ತೆ ಜೋಡಿಯಾದ ಧನಂಜಯ್ & ಅಮೃತಾ; ಇಲ್ಲಿವೆ ಮುಹೂರ್ತದ ಫೋಟೋಗಳು

22-04-22 02:26 pm       Source: Vijayakarnataka   ಸಿನಿಮಾ

'ಡಾಲಿ' ಧನಂಜಯ್ ನಾಯಕರಾಗಿರುವ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಹೌದು, 'ರತ್ನನ್ ಪ್ರಪಂಚ' ನಂತರ ಕೆಆರ್‌ಜಿ ಸ್ಟುಡಿಯೋಸ್‌ನಲ್ಲಿ ಧನಂಜಯ್ ಮತ್ತೊಂದು ಸಿನಿಮಾ ಮಾಡಲಿದ್ದು, ಅದಕ್ಕೆ 'ಹೊಯ್ಸಳ' ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಕೆಲ ದಿನಗಳ ಹಿಂದೆ ಬಹಿರಂಗಗೊಂಡಿತ್ತು. ಇದೀಗ ಆ ಸಿನಿಮಾಕ್ಕೆ ಮುಹೂರ್ತ ನೆರವೇರಿದೆ.

'ಹೊಯ್ಸಳ' ಸಿನಿಮಾದಲ್ಲಿ ಧನಂಜಯ್ & ಅಮೃತಾ

'ಡಾಲಿ' ಧನಂಜಯ್ ನಾಯಕರಾಗಿರುವ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಹೌದು, 'ರತ್ನನ್ ಪ್ರಪಂಚ' ನಂತರ ಕೆಆರ್‌ಜಿ ಸ್ಟುಡಿಯೋಸ್‌ನಲ್ಲಿ ಧನಂಜಯ್ ಮತ್ತೊಂದು ಸಿನಿಮಾ ಮಾಡಲಿದ್ದು, ಅದಕ್ಕೆ 'ಹೊಯ್ಸಳ' ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಕೆಲ ದಿನಗಳ ಹಿಂದೆ ಬಹಿರಂಗಗೊಂಡಿತ್ತು. ಇದೀಗ ಆ ಸಿನಿಮಾಕ್ಕೆ ಮುಹೂರ್ತ ನೆರವೇರಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ 'ಹೊಯ್ಸಳ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಭಾಗಿಯಾಗಿತ್ತು. ವಿಜಯ್ ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 75 ದಿನಗಳ ಚಿತ್ರೀಕರಣ ನಡೆಯಲಿದೆ. 'ಪಾಪ್‌ಕಾರ್ನ್ ಮಂಕಿ ಟೈಗರ್', 'ಬಡವ ರಾಸ್ಕಲ್‌' ನಂತರ ಮತ್ತೊಮ್ಮೆ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ 'ಹೊಯ್ಸಳ' ಚಿತ್ರಕ್ಕಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಕಾರ್ಯಕ್ರಮಕ್ಕೆ ನಿರ್ದೇಶಕರಾದ ಸಂತೋಷ್ ಆನಂದರಾಮ್, ಡಾ. ಸೂರಿ, ಡಾ. ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು

ಕಾರ್ಯಕ್ರಮಕ್ಕೆ ನಿರ್ದೇಶಕರಾದ ಸಂತೋಷ್ ಆನಂದರಾಮ್, ಡಾ. ಸೂರಿ, ಡಾ. ರಮೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು

ಹೊಯ್ಸಳದಲ್ಲಿ ಧನಂಜಯ್‌ಗೆ ಪೊಲೀಸ್ ಪಾತ್ರ

ಹೊಯ್ಸಳದಲ್ಲಿ ಧನಂಜಯ್‌ಗೆ ಪೊಲೀಸ್ ಪಾತ್ರ

ಮೂರನೇ ಬಾರಿಗೆ ಜೊತೆಯಾದ ಧನು & ಅಮೃತಾ

ಮೂರನೇ  ಬಾರಿಗೆ ಜೊತೆಯಾದ ಧನು & ಅಮೃತಾ

ಶೀಘ್ರದಲ್ಲೇ ಶುರುವಾಗಲಿದೆ 'ಹೊಯ್ಸಳ' ಶೂಟಿಂಗ್

ಶೀಘ್ರದಲ್ಲೇ ಶುರುವಾಗಲಿದೆ ಹೊಯ್ಸಳ ಶೂಟಿಂಗ್

ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕ್ಲಾಪ್ ಮಾಡಿದರು

ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕ್ಲಾಪ್ ಮಾಡಿದರು

ವಿಜಯ್ ಕಿರಗಂದೂರು, ಧನಂಜಯ್, ವಿಜಯ್, ಕಾರ್ತಿಕ್, ಯೋಗಿ ಜಿ. ರಾಜ್

ವಿಜಯ್ ಕಿರಗಂದೂರು, ಧನಂಜಯ್, ವಿಜಯ್, ಕಾರ್ತಿಕ್, ಯೋಗಿ ಜಿ. ರಾಜ್

ಮುಹೂರ್ತ ಸಮಾರಂಭದಲ್ಲಿ ನಟ ಧನಂಜಯ್ & ಟೀಮ್

ಮುಹೂರ್ತ ಸಮಾರಂಭದಲ್ಲಿ ನಟ ಧನಂಜಯ್ & ಟೀಮ್

ದೀಪ ಬೆಳಗಿಸಿದ ನಟಿ ಅಮೃತಾ ಅಯ್ಯಂಗಾರ್

ದೀಪ ಬೆಳಗಿಸಿದ ನಟಿ ಅಮೃತಾ ಅಯ್ಯಂಗಾರ್

Dhananjay Amrutha Iyengar Starrer Hoysala Movie Launched.