ಬಾಲಿವುಡ್ ಡ್ರಗ್ಸ್ ನಂಟು ; ಎನ್​ಸಿಬಿ ಕಚೇರಿ ತಲುಪಿದ ನಟಿ ದೀಪಿಕಾ

26-09-20 10:42 am       Headline Karnataka News Network   ಸಿನಿಮಾ

ಡ್ರಗ್ಸ್ ಕೇಸ್​ಗೆ ಸಂಬಂಧಿಸಿ ವಿಚಾರಣೆ ಎದುರಿಸುವ ಸಲುವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶನಿವಾರ ಬೆಳಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಕಚೇರಿ ತಲುಪಿದ್ದಾರೆ. 

ಮುಂಬೈ, ಸೆಪ್ಟಂಬರ್ 26: ಡ್ರಗ್ಸ್ ಕೇಸ್​ಗೆ ಸಂಬಂಧಿಸಿ ವಿಚಾರಣೆ ಎದುರಿಸುವ ಸಲುವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶನಿವಾರ ಬೆಳಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಕಚೇರಿ ತಲುಪಿದ್ದಾರೆ. ದೀಪಿಕಾ ಪಡುಕೋಣೆಯವರ ಮ್ಯಾನೇಜರ್​ ಕರೀಶ್ಮಾ ಪ್ರಕಾಶ್, ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಅವರೂ ಇಂದು ವಿಚಾರಣೆ ಎದುರಿಸಲಿದ್ದಾರೆ.

ದೀಪಿಕಾ ಅವರು ಬೆಳಗ್ಗೆ 9.45ಕ್ಕೆ ಎನ್​ಸಿಬಿ ಕಚೇರಿಗೆ ಆಗಮಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ವಿಚಾರಣೆಗೆ ಹಾಜರಾಗುವಂತೆ ಮೂವರು ನಟಿಯರಿಗೆ ಎನ್​ಸಿಬಿ ಬುಧವಾರವೇ ನೋಟಿಸ್ ಜಾರಿಗೊಳಿಸಿತ್ತು. ದೀಪಿಕಾ ಅವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್​ ನಿನ್ನೆಯೂ ವಿಚಾರಣೆ ಎದುರಿಸಿದ್ದು, ಉಳಿದ ವಿಚಾರಣೆ ಇಂದು ಪೂರ್ಣಗೊಳ್ಳಲಿದೆ.

ಕರೀಶ್ಮಾ ಅವರ ವಾಟ್ಸ್​ಆ್ಯಪ್ ಚಾಟ್​ಗಳಲ್ಲಿ ಡಿ ಎಂಬ ಸಂಕೇತಾಕ್ಷರದೊಂದಿಗೆ ಡ್ರಗ್ಸ್​ ಕುರಿತ ಮಾತುಕತೆ ನಡೆದಿದೆ. ಅವರು ಈ ವಿಚಾರ ಯಾರೊಂದಿಗೆ ಸಂವಹನ ನಡೆಸಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಎಲ್ಲರ ವಿಚಾರಣೆಯೊಂದಿಗೆ ಸಾಕ್ಷ್ಯಗಳನ್ನೂ ಕಲೆಹಾಕಲಾಗುತ್ತಿದೆ ಎಂದು ಎನ್​ಸಿಬಿ ಮೂಲಗಳು ತಿಳಿಸಿವೆ.

Join our WhatsApp group for latest news updates (2)