ಈ ಆಯುರ್ವೇದ ಗಿಡಮೂಲಿಕೆಗಳು, ರಕ್ತದಲ್ಲಿ ಶುಗರ್ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ!

23-05-23 08:10 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಕಾಣಿಸಿಕೊಂಡ ಬಳಿಕ ಕಟ್ಟುನಿಟ್ಟಿನ ಆಹಾರ ಪದ್ಧತಿ, ಪ್ರತಿದಿನ ವ್ಯಾಯಾಮ, ವೈದ್ಯರ ಸಲಹೆ ಹಾಗೂ ಅವರು ನೀಡಿರುವ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುವುದರಿಂದ ಈ ಕಾಯಿಲೆ ಯನ್ನು ನಿಯಂತ್ರಣದಲ್ಲಿಟಲು ಕಷ್ಟಸಾಧ್ಯವಲ್ಲ!

ಇಂದಿನ ದಿನಗಳಲ್ಲಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ದಿನಾ ಹೋದ ಹಾಗೆ ಹೆಚ್ಚಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬದಲಾದ ಜೀವನಶೈಲಿ, ಅನಾರೋಗ್ಯಕಾರಿ ಆಹಾರ ಪದ್ಧತಿ, ಜಡ ಜೀವನಶೈಲಿ ಅಂದರೆ ದೈಹಿಕ ಚಟುವಟಿಕೆಗಳು ಇಲ್ಲದಿ ರುವುದು, ಹೀಗೆ ನಾನಾ ಕಾರಣಗಳಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ, ಇಂದು ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಈ ಶುಗರ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.

ಮಧುಮೇಹ ಕಾಯಿಲೆ ಇದ್ದವರ ಗಮನಕ್ಕೆ...

4 Part On Your Body Showed The Sign And Symptoms Of High Level Of Diabetes - WHO

 • ಮಧುಮೇಹ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಮನುಷ್ಯನನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ! ಕೊನೆಗೆ ಸಾಯುವವರಿಗೂ ಕೂಡ ಈ ಕಾಯಿ ಲೆಯ ಜೊತೆಗೆ ಜೀವನ ನಡೆಸುವ ಪರಿಸ್ಥಿತಿ ಎದುರಾ ಗುತ್ತದೆ.
 • ಆದರೆ ಒಂದು ಸಮಾಧಾನ ಕೊಡುವ ವಿಚಾರ ಏನೆಂ ದರೆ, ಈ ಕಾಯಿಲೆ ಕಾಣಿಸಿಕೊಂಡ ಮೇಲೆ ಸರಿಯಾದ ಆಹಾರ ಪದ್ಧತಿ ಹಾಗೂ ವೈದ್ಯರ ಸಲಹೆ ಗಳನ್ನು ಅನು ಸರಿಸುತ್ತಾ ಹೋದರೆ, ಈ ಕಾಯಿಲೆಯ ಅಪಾಯ ದಿಂದ ಪಾರಾಗಬಹುದು.
 • ಹೀಗಾಗಿ ಒಂದು ವೇಳೆ ಮನುಷ್ಯನಲ್ಲಿ ಸಕ್ಕರೆಕಾಯಿಲೆ ಕಾಣಿಸಿ ಕೊಂಡರೆ, ಮೊದಲು ತನ್ನ ಆಹಾರ ಪದ್ಧತಿ ಯಲ್ಲಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಯನ್ನು ತಂದು ಕೊಂಡರೆ, ಈ ಕಾಯಿಲೆಯನ್ನು ಅರ್ಧ ಗೆದ್ದಂತೆ!
 • ಇದರ ಜೊತೆಗೆ ಇನ್ನೊಂದು ಪ್ರಮುಖ ಅಂಶ ಏನೆಂದ್ರೆ ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಅನುಸರಿಸು ವುದು ಹಾಗೂ ಅವರು ನೀಡಿರುವ ಔಷಧಿಗಳನ್ನು ಸರಿ ಯಾದ ಸಮಯಕ್ಕೆ ತೆಗೆದುಕೊಂಡು, ತಿಂಗಳೊಮ್ಮೆ ಶುಗರ್ ಪರೀಕ್ಷೆ ಮಾಡಿಸಿಕೊಳ್ಳುವುದು.
 • ಇಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಕೆಲವೊಂದು ಸುಲಭ ಮನೆಮದ್ದುಗಳನ್ನು ಕೂಡ, ಅನುಸರಿಸಿಕೊಂಡು ಹೋದರೆ ಮಧುಮೇಹ ವನ್ನು ನಿಯಂತ್ರಿಸಲು ನೆರವಾಗುತ್ತದೆ.

ದಾಲ್ಚಿನ್ನಿ ಅಥವಾ ಚಕ್ಕೆ

Cinnamon and diabetes: Effect on blood sugar and overall health

 • ಮಧುಮೇಹ ಅಥವಾ ಸಕ್ಕರೆಕಾಯಿಲೆ ಇದ್ದವರು ವೈದ್ಯರು ಸೂಚಿಸುವ ಔಷಧಿಗಳ ಜೊತೆಗೆ ಕೆಲ ವೊಂದು ಪರಿಣಾಮಕಾರಿ ಮನೆಮದ್ದುಗಳನ್ನು ಕೂಡ ಪ್ರಯತ್ನಿಸು ವುದರಿಂದ, ಈ ಕಾಯಿಲೆಯನ್ನು ನಿಯಂ ತ್ರಿಸಲು ನೆರವಾಗುತ್ತದೆ.
 • ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಧು ಮೇಹಿಗಳು ಒಂದು ಗ್ರಾಂ ದಾಲ್ಚಿನ್ನಿ ಪುಡಿಯನ್ನು, ತಮ್ಮ ದೈನಂದಿನ ಆಹಾರ ಪದ್ಧತಿಗೆ ಸೇರಿಸಿಕೊಳ್ಳು ವುದರಿಂದ, ದೇಹಕ್ಕೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ, ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.
 • ಪ್ರಮುಖವಾಗಿ, ಮಧುಮೇಹಿಗಳ ರಕ್ತದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ನಿಯಂತ್ರಿಸಿ, ಶುಗರ್ ಲೆವೆಲ್ ನಿಯಂತ್ರಣದಲ್ಲಿರಿಸಲು ನೆರವಾ ಗುತ್ತದೆ.
 • ಈ ಮೂಲಕ ಮಧುಮೇಹದ ಇರುವಿಕೆಯಿಂದ ಕಂಡು ಬರಬಹುದಾದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಯನ್ನು ದೂರಮಾಡುತ್ತದೆ.

ದಾಲ್ಚಿನ್ನಿ ಪುಡಿ ಸೇವಿಸುವ ವಿಧಾನ

ದಾಲ್ಚಿನ್ನಿ ಪುಡಿ ಸೇವಿಸುವ ವಿಧಾನ

 • ಒಂದು ಲೋಟ ಕುದಿಯುವ ನೀರಿಗೆ, ಸಣ್ಣ ಟೀ ಚಮಚದಷ್ಟು ಚಮಚದಷ್ಟು ದಾಲ್ಚಿನ್ನಿ ಪುಡಿ ಬೆರೆಸಿ ಎರಡರಿಂದ-ಮೂರು ನಿಮಿಷ ಕುದಿಸಿ, ಬಳಿಕ ಗ್ಯಾಸ್ ಉರಿ ಯನ್ನು ಆರಿಸಿ, ಉಗುರು ಬೆಚ್ಚಗಾಗುವಷ್ಟು ತಣಿಯಲು ಬಿಡಿ. ಆಮೇಲೆ ಖಾಲಿ ಹೊಟ್ಟೆಗೆ ಪ್ರಥಮ ಆಹಾರವಾಗಿ ಈ ಪಾನೀಯಯನ್ನು ಕುಡಿಯಿರಿ.
 • ಇನ್ನು ಪ್ರತಿದಿನ ಕುಡಿಯುವ ಟೀ ಕಾಫಿಗೆ ಸಕ್ಕರೆ ಬೆರೆಸಿ ಕುಡಿಯುವ ಬದಲು, ಒಂದು ಟೀ ಚಮಚದಷ್ಟು ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ರಕ್ತದಲ್ಲಿ ಸಕ್ಕರೆಮಟ್ಟವನ್ನು ನಿಯಂತ್ರಿ ಸಲು ನೆರವಾಗುತ್ತದೆ.
 • ಇನ್ನು ದೈನಂದಿನ ಅಡುಗೆಗಳಲ್ಲಿ ಉದಾಹರಣೆಗೆ ಟೊಮೆಟೊ ರಸಂ, ತರಕಾರಿ ಸಾಂಬಾರು ಅಥವಾ ಪಲ್ಯ, ಚಟ್ನಿ, ಗೊಜ್ಜು ಮೊದಲಾದವುಗಳನ್ನು ತಯಾ ರಿಸುವಾಗ, ಮೇಲೆ ತಿಳಿಸಿದ ಪ್ರಮಾಣದಲ್ಲಿ ಅಂದರೆ ಒಂದು ಟೀ ಚಮ ಚದಷ್ಟು ದಾಲ್ಚಿನ್ನಿ ಪುಡಿ ಬೆರೆಸಿ ಕೊಂಡರೆ, ಅಡುಗೆಯ ರುಚಿ ಹೆಚ್ಚಾಗುವುದು ಮಾತ್ರ ವಲ್ಲದೆ, ಮಧುಮೇಹ ಕಾಯಿಲೆಯನ್ನು ಕೂಡ ನಿಯಂತ್ರಣದಲ್ಲಿಡಲು ನೆರವಾ ಗುವುದು.

ಅಶ್ವಗಂಧ

ಅಶ್ವಗಂಧ

 • ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಸಲುವಾಗಿ ಹಿಂದಿನ ಕಾಲದಿಂದಲೂ ಕೂಡ ಆಯುರ್ವೇದ ಪದ್ಧತಿ ಯಲ್ಲಿ ಅಶ್ವಗಂಧವನ್ನು ಹೆಚ್ಚಾಗಿ ಬಳಕೆ ಮಾಡುತ್ತಾ ಬರಲಾಗಿದೆ.
 • ಇದನ್ನು ಜಿನ್ಸೆಂಗ್ ಎಂದೂ ಕೂಡ ಕರೆಯಲಾಗುತ್ತದೆ. ಪ್ರಮುಖವಾಗಿ ರಕ್ತದಲ್ಲಿ ಸಕ್ಕರೆಮಟ್ಟವನ್ನು ನಿಯಂತ್ರ ಣಕ್ಕೆ ತರುವಲ್ಲಿ ಹಾಗೂ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುವಲ್ಲಿ ಅಶ್ವಗಂಧದ ಸಾರವು ಪ್ರಮುಖ ಪಾತ್ರವಹಿಸುತ್ತವೆ.
 • ಹೀಗಾಗಿ ಮಧುಮೇಹ ಇರುವ ರೋಗಿಗಳಿಗೆ, ಇದೊಂದು ಅದ್ಭುತ ಗಿಡಮೂಲಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.
 • ಆಯುರ್ವೇದ ಅಂಗಡಿಯಲ್ಲಿ ಅಶ್ವಗಂಧವು ಹುಡಿ ಅಥವಾ ಮಾತ್ರೆಯ ರೂಪದಲ್ಲಿ ಸಿಗುತ್ತದೆ. ಹೀಗಾಗಿ ಇದರ ಹುಡಿಯನ್ನು ಹಾಲಿಗೆ ಮಿಶ್ರಣ ಮಾಡಿಕೊಂಡು ಸೇವನೆ ಮಾಡಿದರೆ, ಒಳ್ಳೆಯ ಫಲಿತಾಂಶವನ್ನು ಕಾಣಬಹು ದಾಗಿದೆ.

ಇಲ್ಲಾಂದ್ರೆ ಹೀಗೆ ಮಾಡಿ

Why is Water so Important for the Body?

ಎರಡು ಕಪ್ ಕುದಿಯುವ ನೀರಿಗೆ ಒಂದು ಟೀ ಚಮಚ ದಷ್ಟು ಅಶ್ವಗಂಧ ಹುಡಿ ಹಾಕಿ. ಸರಿಸುಮಾರು ಐದು ನಿಮಿಷ ಆಗುವ ವರೆಗೆ ಕುದಿಸಿ, ಬಳಿಕ ಸೋಸಿಕೊಳ್ಳಿ. ಒಮ್ಮೆ ಈ ಪಾನೀಯ ತಣ್ಣಗಾದ ಬಳಿಕ, ದಿನದಲ್ಲಿ ಸ್ವಲ್ಪ ಸ್ವಲ್ಪನೇ ಎರಡು ಸಲ ಕುಡಿತ್ತಾ ಬನ್ನಿ...

these herbs that can help control blood sugar levels in diabetic patients.