ಅತೀ ಚಿಕ್ಕ ವಯಸ್ಸಿನಲ್ಲಿಯೇ ಯುವಕ-ಯುವತಿಯರಲ್ಲಿ ಹೃದಯಾಘಾತ ಹೆಚ್ಚಾಗ್ತಿರೋದಕ್ಕೆ ಕಾರಣವೇನು?

28-08-23 02:58 pm       Source: bold sky   ಡಾಕ್ಟರ್ಸ್ ನೋಟ್

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಮೊದಲೆಲ್ಲಾ ವಯಸ್ಸಾದವರಿಗೆ ಸಾಮಾನ್ಯವಾಗಿ ಹೃದಯಾಘಾತವಾಗುತ್ತಿತ್ತು, ಆದರೆ ಈಗೆಲ್ಲಾ ಚಿಕ್ಕ ವಯಸ್ಸಿಗೆ ಹೃದಯಾಘಾತ ಆಗುತ್ತಿರೋದು ಬೆಚ್ಚಿ ಬೀಳುವಂತೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಮೊದಲೆಲ್ಲಾ ವಯಸ್ಸಾದವರಿಗೆ ಸಾಮಾನ್ಯವಾಗಿ ಹೃದಯಾಘಾತವಾಗುತ್ತಿತ್ತು, ಆದರೆ ಈಗೆಲ್ಲಾ ಚಿಕ್ಕ ವಯಸ್ಸಿಗೆ ಹೃದಯಾಘಾತ ಆಗುತ್ತಿರೋದು ಬೆಚ್ಚಿ ಬೀಳುವಂತೆ ಮಾಡಿದೆ. ಇಂದು ಶೇ.25ರಷ್ಟು ಹೃದಯಾಘಾತ ಪ್ರಕರಣಗಳಲ್ಲಿ ಯುವಕರು ಬಲಿಯಾಗುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನ ಶೈಲಿ. ತಿನ್ನುವ, ಮಲಗುವ ಅಥವಾ ಇನ್ನಿತರ ಅಭ್ಯಾಸಗಳೇ ಹೃದಯಾಘಾತಕ್ಕೆ ಕಾರಣವಾಗುತ್ತೆ ಅಂದ್ರೆ ತಪ್ಪಾಗೋದಿಲ್ಲ. ನಮ್ಮ ಹೃದಯದ ಆರೋಗ್ಯದಲ್ಲಿ ಏನೇ ವ್ಯತ್ಯಾಸಗಳಾದ್ರು ಕೂಡ ಅದು ಮೊದಲು ನಮ್ಮ ಜೀವನ ಶೈಲಿಯ ಮೇಲೆಯೇ ಪರಿಣಾಮ ಬೀರುವುದು. ಅಷ್ಟಕ್ಕೂ ಚಿಕ್ಕ ವಯಸ್ಸಿನಲ್ಲಿಯೇ ಯುವಕರಲ್ಲಿ ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.

Cholesterol - Overview, Factors, Functions, Diet

ಸ್ಥೂಲಕಾಯತೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುವುದು!

ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚಾಗಲು ಬೊಜ್ಜು ಕೂಡ ಒಂದು ಕಾರಣ. ಯುವಕರಲ್ಲಿ ಕೆಟ್ಟ ಆಹಾರ ಮತ್ತು ಕುಡಿಯುವ ಅಭ್ಯಾಸಗಳು ಹೆಚ್ಚಾಗುತ್ತಿವೆ. ಸಮಯದ ಅಭಾವದಿಂದ ಮನೆಯಲ್ಲಿ ಆಹಾರ ತಯಾರಿಸಿ ತಿನ್ನೋದನ್ನು ಬಿಟ್ಟು ಹೊರಗಿನ ಜಂಕ್ ಫುಡ್ ಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಇನ್ನೂ ವೀಕೆಂಡ್ ಪಾರ್ಟಿ ಅಂತ ಕುಡಿತ, ಮೋಜು-ಮಸ್ತಿಯಲ್ಲಿ ಬ್ಯುಸಿಯಾಗಿರ್ತಾರೆ. ಇದ್ರಿಂದಾಗಿ ನಿದ್ದೇನೂ ಸರಿಯಾಗಿ ಮಾಡೋದಿಲ್ಲ.

What is being overweight or obese, and where can you find help?

ಅತಿಯಾದ ದೇಹದ ತೂಕ!

ಇತ್ತ ಅಧಿಕ ತೂಕವು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ. ಮತ್ತು ಅವುಗಳನ್ನು ನಿರ್ಬಂಧಿಸುತ್ತದೆ. ಅಷ್ಟೇ ಅಲ್ಲದೇ, ರಕ್ತನಾಳಗಳ ಮೂಲಕ ರಕ್ತವನ್ನು ಚಲಿಸದಂತೆ ತಡೆಯುತ್ತದೆ. ಇದು ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸರಿಯಾದ ಪೋಷಣೆ ಮತ್ತು ವ್ಯಾಯಾಮದಿಂದ ದೇಹದ ತೂಕವನ್ನು ನಿಯಂತ್ರಿಸುವುದು ಅವಶ್ಯಕ.

How Does Insomnia Affect Women? | Sleep Foundation

ಸರಿಯಾಗಿ ನಿದ್ದೆ ಮಾಡದಿರೋದು!

ರಾತ್ರಿ ತಡವಾಗಿ ಮಲಗುವುದು ಮತ್ತು ಬೆಳಗ್ಗೆ ಬೇಗನೆ ಏಳೋದ್ರಿಂದ ಸರಿಯಾಗಿ ನಿದ್ದೆ ಆಗೋದಿಲ್ಲ. ಇದು ಹೃದಯದ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ವ್ಯಾಯಾಮ ಮಾಡೋದ್ರಿಂದ ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವ್ಯಾಯಾಮವು ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಇದು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ರಕ್ತನಾಳಗಳು ಮತ್ತು ನರಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ರಕ್ತದ ಹರಿವನ್ನು ಸುಧಾರಿಸುತ್ತದೆ. ಹೃದಯವನ್ನು ಆರೋಗ್ಯವಾಗಿಡುವುದು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಅದಕ್ಕಾಗಿಯೇ ಉತ್ತಮ ಮತ್ತು ದೀರ್ಘಾಯುಷ್ಯಕ್ಕಾಗಿ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅವಶ್ಯಕ.

5 smart ways to answer 'how do you handle stress at work' | TJinsite

ವೃತ್ತಿ ಮತ್ತು ಕೆಲಸದ ಒತ್ತಡ!

ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ವೃತ್ತಿ, ಉತ್ತಮ ಉದ್ಯೋಗ ಮತ್ತು ಗುಣಮಟ್ಟದ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಒತ್ತಡದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ ಒತ್ತಡ ಹೆಚ್ಚಾಗುತ್ತಿದೆ.

ಇದರಿಂದಾಗಿ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತನಾಳಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ ಹೃದಯದ ರಕ್ತನಾಳಗಳು ಹಾನಿಗೊಳಗಾಗುತ್ತವೆ.

Consumption of alcohol, tobacco could pose bigger health threat than drugs  | Health - Hindustan Times

ಆಲ್ಕೋಹಾಲ್, ಸಿಗರೇಟ್ ಬಿಟ್ಟುಬಿಡಿ!

ಆಲ್ಕೋಹಾಲ್ ಮತ್ತು ಸಿಗರೇಟ್ ಸೇವನೆ ಹೃದಯದ ಆರೋಗ್ಯಕ್ಕೆ ತುಂಬಾನೇ ಕೆಟ್ಟದು. ಯಾಕಂದ್ರೆ ಇದರಿಂದ ಹೃದಯಕ್ಕೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಮತ್ತು ಹೃದಯ ಬಡಿತದಲ್ಲಿ ಅಡಚಣೆ ಉಂಟಾಗುತ್ತದೆ. ಇನ್ನೂ ರಕ್ತ ಹೆಪ್ಪುಹಗಟ್ಟುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ತೊಂದರೆಗಳು ಎದುರಾಗ ಬಾರದೆಂದರೆ ಆರೋಗ್ಯಕರ ಜೀವನ ಶೈಲಿಯತ್ತ ಹೆಚ್ಚಿನ ಗಮನ ಹರಿಸೋದು ತುಂಬಾನೇ ಮುಖ್ಯವಾಗುತ್ತದೆ.

why so many Heart Attacks Cases Increasing in Young Girls and Boys.