ಯಾಕೋ ಏನೋ ಈ ಡಯಟ್ ಪದ್ಧತಿಗಳು ಸ್ವಲ್ಪ ಡೇಂಜರ್ ಅಂತೆ!

23-08-23 07:31 pm       Source: Vijayakarnataka   ಡಾಕ್ಟರ್ಸ್ ನೋಟ್

ಡಯಟ್ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಂದು ರೀತಿ ಒಳ್ಳೆಯದೇ. ಆದರೆ ಸರಿಯಾಗಿ ಅನುಸರಿಸುವ ಜಾಣ್ಮೆ ನಿಮ್ಮಲ್ಲಿರಬೇಕು. ಇಲ್ಲದಿದ್ದರೆ ಜೀವ ಬಿಡಬೇಕಾಗುತ್ತೆ!

ನೀವೆಲ್ಲರೂ ಗಮನಿಸಿರುವ ಹಾಗೆ ಈಗಿನ ದಿನಗಳಲ್ಲಿ ಸಾಕಷ್ಟು ಜನರು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಇಲ್ಲವೆಂದರೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಎರಡಕ್ಕೂ ಬೇರೆ ಬೇರೆ ವಿಧಾನಗಳಿವೆ.

ತೂಕವನ್ನು ಕಡಿಮೆ ಮಾಡಿಕೊಳ್ಳಲು ವ್ಯಾಯಾಮದ ಸಹಿತ ವಿವಿಧ ಬಗೆಯ ಡಯಟ್ ಪದ್ಧತಿಗಳನ್ನು ಸಹ ಅನುಸರಿಸುತ್ತಾರೆ. ಜೊತೆಗೆ ಪೂರಕ ಗಳನ್ನು ತೆಗೆದುಕೊಳ್ಳುವುದು ಬೇರೆ. ಆದರೆ ಇವುಗಳನ್ನು ವೈದ್ಯರ ಅನುಮತಿ ಇಲ್ಲದೆ ಮಾಡಬಾರದು. ಅಷ್ಟೇ ಅಲ್ಲದೆ ತಜ್ಞ ವೈದ್ಯರು ಯಾವ ರೀತಿ ಹೇಳಿರುತ್ತಾರೆ ಅದೇ ರೀತಿ ಅನುಸರಿಸಬೇಕು. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ತೊಂದರೆ. ಹಾಗಾದರೆ ಯಾವ ಡಯಟ್ ಪದ್ಧತಿಗಳು ಇಂದು ಡೇಂಜರ್ ಲಿಸ್ಟ್‌ಗೆ ಸೇರುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ....

ಕಡಿಮೆ ಕ್ಯಾಲೋರಿ ಹೊಂದಿರುವ ಡಯಟ್

Weight Watchers Versus Keto: Which Is Better For Weight Loss?

 • ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ಬಗೆಯ ತಂತ್ರಗಳನ್ನು ನಾವು ಮಾಡುತ್ತೇವೆ. ಅದರಲ್ಲಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಆಹಾರಗಳನ್ನು ನಿರಂತರ ವಾಗಿ ಸೇವಿಸಲು ಮುಂದಾಗು ವುದು ಕೂಡ ಒಂದು.
 • ಆದರೆ ಯಾವ ಡಾಕ್ಟರ್ ಕೂಡ ಸಂಪೂರ್ಣವಾಗಿ ಕ್ಯಾಲೋರಿ ರಹಿತ ಆಹಾರವನ್ನು ಸೇವಿಸಿ ಎಂದು ಹೇಳು ವುದಿಲ್ಲ. ಸಮತೋಲನವಾದ ಆಹಾರವನ್ನು ಸೇವಿಸಬೇಕು ನಿಜ.
 • ದೇಹದ ತೂಕವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಒಳ್ಳೆಯ ಪೌಷ್ಟಿಕಾಂಶಗಳನ್ನು ಮಾತ್ರ ಕಳೆದುಕೊಳ್ಳ ಬಾರದು. ತುಂಬಾ ಕಡಿಮೆ ಕ್ಯಾಲೋರಿಗಳ ಡಯಟ್ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಜೊತೆಗೆ ಮಾಂಸ ಖಂಡಗಳ ಹಾನಿ ಮತ್ತು ಅಂಗಾಂಗಗಳ ತೊಂದರೆ ಉಂಟು ಮಾಡುತ್ತದೆ.​

ಡಿಟಾಕ್ಸ್ ಡಯಟ್

3-day & 7-day Detox Diet Plan For Weight Loss That Really Work

 • ಇಂತಹ ಡಯಟ್ ಅನುಸರಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇವುಗಳಿಗೆ ವೈಜ್ಞಾನಿಕ ಆಧಾರವಿರುವುದಿಲ್ಲ.
 • ಹಾಗಾಗಿ ಒಂದು ವೇಳೆ ನಿಮಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿದ್ದ ರಷ್ಟೇ ಈ ಡಯಟ್ ಪದ್ಧತಿಯನ್ನು ಅನುಸರಿಸುವುದು ಒಳ್ಳೆ ಯದು. ಇಲ್ಲದಿದ್ದರೆ ಸುಮ್ಮನಿರಿ. ಏಕೆಂದರೆ ಇದು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ.

ಕೀಟೋ ಡಯಟ್

Keto Diet Foods - Benefits, Foods To Eat And What To Avoid - Blog - HealthifyMe

 • ಈ ಆಹಾರ ಪದ್ಧತಿ ಸ್ವಲ್ಪ ವಿಚಿತ್ರವಾಗಿದೆ. ಇದಕ್ಕೂ ಸಹ ತಜ್ಞರ ನೆರವು ತುಂಬಾ ಅಗತ್ಯವಾಗಿದೆ. ನೀವಾಗಿ ಇದನ್ನು ಮಾಡಲು ಹೋಗಲೇಬಾರದು.
 • ಏಕೆಂದರೆ ಇದರಿಂದ ನಿಮ್ಮ ದೇಹದಲ್ಲಿ ಪೌಷ್ಟಿಕಾಂಶ ಗಳ ಕೊರತೆ ಉಂಟಾಗುವುದರ ಜೊತೆಗೆ ಎಲೆಕ್ಟ್ರೋ ಲೈಟ್ ಅಂಶಗಳ ಸಮತೋಲನ ತಪ್ಪುತ್ತದೆ ಮತ್ತು ನಿಮ್ಮ ದೇಹ ದಲ್ಲಿ ಪ್ರಮುಖ ಅಂಗಾಂಗಗಳು ಎನ್ನಲಾದ ಲಿವರ್ ಮತ್ತು ಕಿಡ್ನಿಗಳಿಗೆ ತೊಂದರೆ ಉಂಟಾಗುತ್ತದೆ.

FAD ಡಯಟ್ ಪದ್ಧತಿ

​FAD ಡಯಟ್ ಪದ್ಧತಿ

 • ಇತ್ತೀಚಿನ ದಿನಗಳಲ್ಲಿ ಈ ಡಯಟ್ ಪದ್ಧತಿ ಬಹಳ ಪ್ರಚಲಿತವಾ ಗುತ್ತಿದೆ. ಆದರೆ ಇದಕ್ಕೂ ಸಹ ವೈಜ್ಞಾನಿಕ ಆಧಾರವಿಲ್ಲ. ಬಹಳ ವೇಗವಾಗಿ ಇದು ನಿಮಗೆ ಫಲಿತಾಂ ಶಗಳನ್ನು ಒದಗಿಸಬಹುದು ಆದರೆ ದೀರ್ಘ ಕಾಲ ಬರು ವಂತಹದಲ್ಲ.
 • ನಿಮ್ಮ ಆಹಾರ ಪದ್ಧತಿಯಿಂದ ಪೌಷ್ಟಿಕಾಂಶಗಳ ಕೊರತೆ ಉಂಟಾಗುತ್ತದೆ ಮತ್ತು ಇದು ನಿರಂತರವಾಗಿ ಮುಂದು ವರೆ ಯುವುದರಿಂದ ನಿಮಗೆ ಇದರಿಂದ ಸಾವು ಕೂಡ ಸಂಭವಿಸಬಹುದು.

ಪೂರಕಗಳನ್ನು ತೆಗೆದುಕೊಳ್ಳುವುದು

ಪೂರಕಗಳನ್ನು ತೆಗೆದುಕೊಳ್ಳುವುದು

 • ಸಾಮಾನ್ಯವಾಗಿ ನಿಮ್ಮನ್ನು ವೈದ್ಯರು ಪರೀಕ್ಷಿಸಿ ನಿಮ್ಮ ದೇಹದ ಪೌಷ್ಟಿಕಾಂಶಗಳ ಕೊರತೆಯನ್ನು ಆಧರಿಸಿ ನಿಮಗೆ ಪೌಷ್ಟಿಕಾಂಶ ಗಳನ್ನು ಒದಗಿಸುವ ಪೂರಕವನ್ನು ವೈದ್ಯರು ಹೇಳುತ್ತಾರೆ.
 • ಆದರೆ ಇದನ್ನು ಸಹ ನೀವಾಗಿಯೇ ತೆಗೆದುಕೊಳ್ಳಲು ಹೋಗ ಬಾರದು. ವೈದ್ಯರಿಂದ ಸಲಹಾ ಚೀಟಿಯನ್ನು ತೆಗೆದುಕೊಂಡು ಆನಂತರದಲ್ಲಿ ಪೂರಕಗಳನ್ನು ಕೊಂಡುಕೊಳ್ಳಿ.
 • ಅಷ್ಟೇ ಅಲ್ಲದೆ ವೈದ್ಯರು ಹೇಳಿದ ಪ್ರಮಾಣದಲ್ಲಿ ಮಾತ್ರ ಸೇವಿಸಿ. ಅತಿಯಾದ ಸೇವನೆ ನಿಮಗೆ ನಿದ್ರಾಹೀನತೆ ಉಂಟಾಗುವಂತೆ ಮಾಡಬಹುದು ಮತ್ತು ದೇಹದಲ್ಲಿ ಶಕ್ತಿ ಮತ್ತು ಚೈತನ್ಯ ಕಡಿಮೆ ಮಾಡಬಹುದು.​​

Some Diet Practices Seeming Dangerous Than You Think.