ಬ್ರೇಕಿಂಗ್ ನ್ಯೂಸ್
24-06-22 07:37 pm Udupi Correspondent ಕರಾವಳಿ
ಕುಂದಾಪುರ, ಜೂನ್ 24: ಮುಂಬೈನಿಂದ ಬರುತ್ತಿದ್ದ ಬಸ್ಸಿನಿಂದ 18 ಲಕ್ಷದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಬೈಂದೂರು ಪೊಲೀಸರು ಸಿನಿಮೀಯ ರೀತಿಯ ಕಾರ್ಯಾಚರಣೆ ನಡೆಸಿ ಒಂದೇ ವಾರದಲ್ಲಿ ಭೇದಿಸಿದ್ದು, 2870 ಕಿಮೀ ದೂರದ ಮಧ್ಯಪ್ರದೇಶದಿಂದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಜೂನ್ 16ರಂದು ರಾತ್ರಿ ಮುಂಬೈನಿಂದ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಮಹಾರಾಷ್ಟ್ರದ ಈಶ್ವರ್ ದಾಲಿಚಂದ್ ಎನ್ನುವ ಚಿನ್ನದ ವ್ಯಾಪಾರಿ ಸೂಟ್ ಕೇಸ್ ನಲ್ಲಿ ಚಿನ್ನಾಭರಣ ಇಟ್ಟುಕೊಂಡು ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಶಿರೂರಿನಲ್ಲಿ ರಾತ್ರಿ ಬಸ್ಸನ್ನು ಊಟಕ್ಕೆಂದು ನಿಲ್ಲಿಸಿದ್ದಾಗ, ಪ್ರಯಾಣಿಕರೆಲ್ಲ ಊಟಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಯಾರೋ ಆಗಂತುಕರು ಬಸ್ಸಿಗೆ ನುಗ್ಗಿ ಸೂಟ್ ಕೇಸ್ ಒಳಗಿದ್ದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದರು. ಬ್ರೀಜಾ ಕಾರಿನಲ್ಲಿ ಆರೋಪಿಗಳು ಹೋಗಿದ್ದಾರೆ ಅನ್ನುವ ಸುಳಿವು ದೊರಕಿತ್ತು.

ಪ್ರಕರಣದ ಪತ್ತೆಗೆ ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ, ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ಮಾಡಲಾಗಿತ್ತು. ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಮತ್ತು ಗಂಗೊಳ್ಳಿ ಠಾಣೆಯ ವಿನಯ್ ನೇತೃತ್ವದ ಎರಡು ತಂಡಗಳು ಒಂದು ಬೆಂಗಳೂರು, ಮತ್ತೊಂದು ಮುಂಬೈಗೆ ತೆರಳಿತ್ತು. ಇದೇ ವೇಳೆ, ಒಂದಷ್ಟು ಪೊಲೀಸರು ಸಿಸಿಟಿವಿ ಚೆಕ್ ಮಾಡಿದ್ದರು. ಬಿಳಿ ಬಣ್ಣದ ಬ್ರೀಜಾ ಕಾರು ಶಿವಮೊಗ್ಗ ಕಡೆಗೆ ತೆರಳಿದ್ದು ಪತ್ತೆಯಾಗಿತ್ತು. ಅದನ್ನು ಬೆನ್ನತ್ತಿದಾಗ ನಡುವೆ ಬೆಂಗಳೂರು ಕಡೆಯ ನಂಬರ್ ಪ್ಲೇಟ್ ಹಾಕಿದ್ದು ಕಂಡುಬಂದಿತ್ತು. ಆನಂತರ, ಸಾಗರದಲ್ಲಿ ತೆಲಂಗಾಣ ನೋಂದಣಿಯ ನಂಬರ್ ಪ್ಲೇಟನ್ನು ವಾಹನಕ್ಕೆ ಅಳವಡಿಸಲಾಗಿತ್ತು. ಶಿವಮೊಗ್ಗದಲ್ಲಿ ಆ ಕಾರಿನ ಅಸಲಿ ನಂಬರ್ ಪ್ಲೇಟನ್ನೇ ಹಾಕಲಾಗಿತ್ತು.
ನಂಬರ್ ಪ್ಲೇಟ್ ಬದಲಿಸಿಕೊಂಡು ಚಲಿಸುತ್ತಿರುವ ಬ್ರೀಜಾ ಕಾರಿನ ಬಗ್ಗೆ ಪೊಲೀಸರು ಹೆದ್ದಾರಿಗಳಲ್ಲಿ ಅಡ್ಡಲಾಗಿರುವ ಟೋಲ್ ಗೇಟ್ ಗಳಲ್ಲಿ ಮಾಹಿತಿ ಸಂಗ್ರಹಿಸಿದರು. ಟೋಲ್ ಗೇಟ್ ಮಾಹಿತಿ ಆಧರಿಸಿ ತನಿಖೆ ಕೈಗೊಂಡಾಗ, ಕಾರು ಮಹಾರಾಷ್ಟ್ರದ ಮೂಲಕ ಮಧ್ಯಪ್ರದೇಶ ತೆರಳಿದ್ದು ಕಂಡುಬಂದಿತ್ತು. ಕಾರಿನ ವೇಗ ಎಷ್ಟಿತ್ತೆಂದರೆ, ಕೇವಲ ನಾಲ್ಕು ಗಂಟೆಯಲ್ಲಿ 250 ಕಿಮೀ ದೂರವನ್ನು ಕ್ರಮಿಸುತ್ತಿದ್ದರು. ಕೂಡಲೇ ಮಧ್ಯಪ್ರದೇಶ ಪೊಲೀಸರಿಗೆ ಕಾರಿನ ಬಗ್ಗೆ ಮಾಹಿತಿ ನೀಡಿದರು. ಅಲ್ಲಿ ಕರ್ನಾಟಕ ಮೂಲದ ಸಂಜೀವ್ ಪಾಟೀಲ್ ಅನ್ನುವ ಪೊಲೀಸ್ ಅಧಿಕಾರಿಯ ಸಹಾಯದಿಂದ ಮಹಾರಾಷ್ಟ್ರದ ದುಬೇ ಜಿಲ್ಲೆಯ ಸೋನಗಿರ್ ಟೋಲ್ ಗೇಟ್ ನಲ್ಲಿ ಕಾರನ್ನು ಅಡ್ಡ ಹಾಕಿದ್ದಾರೆ. ಪೊಲೀಸರು ಅಡ್ಡ ಹಾಕಿದ್ದನ್ನು ನೋಡುತ್ತಲೇ ಅದರಲ್ಲಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ.

ಆದರೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ದೋಚಿಕೊಂಡು ಹೋಗಿದ್ದ ಚಿನ್ನದ ಆಭರಣವನ್ನು ಪತ್ತೆ ಮಾಡಿದ್ದಾರೆ. ಬಂಧಿತರನ್ನು ಆಲಿ ಖಾನ್(31), ಅಮ್ಜಲ್ ಖಾನ್(35), ಇಕ್ರಾರ್ ಖಾನ್(30), ಗೋಪಾಲ್ ಅಮ್ಲಾವರ್ (30) ಎಂದು ಪೊಲೀಸರು ಗುರುತಿಸಿದ್ದಾರೆ. ಬೈಂದೂರು ಪೊಲೀಸರು ಮಧ್ಯಪ್ರದೇಶದಿಂದ ಆರೋಪಿಗಳನ್ನು ಕರೆತಂದಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಕಸ್ಟಡಿ ಪಡೆದಿದ್ದಾರೆ. ಈಶ್ವರ್ ದಾಲಿಚಂದ್ ಮುಂಬೈನಿಂದ ಬಂಗಾರ ತರುತ್ತಿದ್ದ ಬಗ್ಗೆ ಮಾಹಿತಿ ಹೇಗೆ ಸಿಕ್ಕಿತ್ತು. ಮೊದಲೇ ಪ್ಲಾನ್ ಮಾಡಿಕೊಂಡು ದೋಚುವ ಕೃತ್ಯ ನಡೆದಿತ್ತೇ ಅಥವಾ ಇದರ ಹಿಂದೆ ದಾಲಿಚಂದ್ ಬಗ್ಗೆ ತಿಳಿದವರು ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಚಿನ್ನಾಭರಣ ಕದ್ದು ಮಧ್ಯಪ್ರದೇಶದಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದರು. ಇದೀಗ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಅಂತಹುದೇ ಪ್ರಕರಣವನ್ನು ಬೈಂದೂರು ಪೊಲೀಸರು ಪತ್ತೆ ಮಾಡಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಗಂಗೊಳ್ಳಿ ಠಾಣಾಧಿಕಾರಿ ವಿನಯ್, ಪೊಲೀಸ್ ಸಿಬಂದಿಯಾದ ಮೋಹನ್ ಪೂಜಾರಿ ಶಿರೂರು, ನಾಗೇಂದ್ರ ಬೈಂದೂರು, ಶ್ರೀಧರ, ನಾಗೇಶ್ ಗೌಡ, ಸುಜಿತ್ ಕುಮಾರ್, ಶ್ರೀನಿವಾಸ ಉಪ್ಪುಂದ, ಪ್ರಿನ್ಸ್ ಶಿರೂರು ಮತ್ತು ಚಂದ್ರ ಪಾಲ್ಗೊಂಡಿದ್ದರು.
Byndoor police have arrested four persons in connection with a gold theft case reported on a private bus on June 16. The arrested accused are Ali Khan,31, Amzad Khan,33, Ikrar Khan,30, and Gopal Amlavar,35, who are all residents of Dhar district, Madhya Pradesh.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 11:13 pm
HK News Desk
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
10-12-25 11:04 pm
Mangalore Correspondent
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm