ಬ್ರೇಕಿಂಗ್ ನ್ಯೂಸ್
25-06-22 10:17 pm Mangalore Correspondent ಕರಾವಳಿ
ಮಂಗಳೂರು, ಜೂನ್ 25: ಶಿಕ್ಷಣ ಇಲಾಖೆಯನ್ನು ದುರ್ಬಲಗೊಳಿಸುವುದು, ಅಲ್ಲಿ ತಪ್ಪುಗಳನ್ನು ತುಂಬಿಸಿ ಮಕ್ಕಳ ತಲೆಯಲ್ಲಿ ದೌರ್ಬಲ್ಯ ತುಂಬುವ ಪ್ರಯತ್ನ ನಡೆಯುತ್ತಿದೆ. ಶಾಲೆ ಶುರುವಾಗಿ ತಿಂಗಳು ಕಳೆಯುತ್ತಾ ಬಂದರೂ, ಪಠ್ಯಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ. ಪರಿಷ್ಕರಣೆ ನೆಪದಲ್ಲಿ ಪುಸ್ತಕ ವಿತರಿಸುವುದನ್ನೇ ನಿಲ್ಲಿಸಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ್ದ ನಲಿ ಕಲಿ ಯೋಜನೆ, ವಿದ್ಯಾಸಿರಿ ಯೋಜನೆಯನ್ನೂ ನಿಲ್ಲಿಸಿದ್ದಾರೆ. ಶಾಲೆಗಳಿಗೆ ಕಲಿಕೋಪಕರಣಕ್ಕೆ ಹಣಕಾಸು ಒದಗಿಸದೆ ಶಾಲೆಗಳ ಮುಖ್ಯೋಪಾಧ್ಯಾಯರು ಕಷ್ಟಪಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಕಡ್ಡಾಯ ಶಿಕ್ಷಣ ಅನ್ನುವ ಪರಿಕಲ್ಪನೆಯನ್ನು ಬಿಜೆಪಿ ಸರಕಾರ ಗಾಳಿಗೆ ತೂರುತ್ತಿದೆ. ಇದರಿಂದ ಸರಕಾರಿ ಶಾಲೆಯಲ್ಲಿ ಕಲಿಯುವ ಸಾಮಾನ್ಯ ಮಕ್ಕಳಿಗೆ ತೊಂದರೆಯಾಗಿದೆ. ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗ್ತಾ ಇಲ್ಲ. ಪರಿಶಿಷ್ಟ ಪಂಗಡದ ಮಕ್ಕಳಿಗೆ ಸವಲತ್ತು ಸಿಗುತ್ತಿಲ್ಲ. ಸರಕಾರಿ ಶಾಲೆಗಳ ಮಕ್ಕಳ ಹಿತಕ್ಕಾಗಿ ಏನೆಲ್ಲ ಮಾಡಬೇಕಿತ್ತೋ ಅದನ್ನು ಬಿಟ್ಟು ಹಿಡನ್ ಅಜೆಂಡಾವನ್ನು ಹೇರುತ್ತಿದೆ. ಬಿಜೆಪಿ ಸರಕಾರ ನಲ್ವತ್ತು ಪರ್ಸೆಂಟ್ ಸಿಗುವ ಯೋಜನೆಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ ಎಂದು ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನ ವಿರುದ್ಧ ಆರೋಪ ಇದ್ದರೂ, ಮಂಗಳೂರಿನಲ್ಲಿ ಸನ್ಮಾನಿಸಲು ಮುಂದಾಗಿರುವುದು ನೋವುಂಡ ಸಮಾಜಕ್ಕೆ ಉಪ್ಪು ಸವರಿದಂತಾಗಿದೆ. ಹಿಂದುಳಿದ ವರ್ಗ ಮತ್ತು ಹಿಂದು ಸಮಾಜ ಪಠ್ಯಪುಸ್ತಕ ಪರಿಷ್ಕರಣೆಯಿಂದ ನೋವು ಉಂಡಿದೆ. ಪಠ್ಯದಲ್ಲಿ ಏನೆಲ್ಲ ಬದಲಾವಣೆ ಆಗಿದೆ, ಅದರಲ್ಲಿ ಏನೆಲ್ಲ ಹಂಗಿಸಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಆ ರೀತಿಯ ಅವಮಾನ ಮಾಡಿದ ವ್ಯಕ್ತಿಯನ್ನು ನಾಗರಿಕ ಸನ್ಮಾನ ನೆಪದಲ್ಲಿ ಸಮ್ಮಾನಿಸುವುದು ಎಷ್ಟು ಸರಿ. ಇದು ಇಡೀ ಸಮಾಜಕ್ಕೆ ಮಾಡಿದ ಅವಮಾನ ಎಂದು ಹೇಳಿದ ರಮಾನಾಥ ರೈ, ಬುದ್ಧಿವಂತರು ಎಂದು ಇತರರು ಹೇಳುವ ಜಾಗದಲ್ಲಿ ಈ ರೀತಿಯ ಬೆಳವಣಿಗೆ ಆಗಿರುವುದು ದುಃಖದ ವಿಷಯ. ಈ ರೀತಿ ಆಗಬಾರದಿತ್ತು ಎಂದು ಹೇಳಿದರು.

ಯಾರದ್ದೇ ಭಾವನೆಗೆ ನೋವು ಮಾಡುವುದು ತಪ್ಪು. ಅತ್ಯಾಚಾರಿಗಳ ಧರ್ಮ, ಕೊಲೆಗಡುಕರ ಧರ್ಮ ಎಂದು ಭಾಷಣ ಮಾಡಿದಲ್ಲಿ ಆಯಾ ಧರ್ಮದ ಜನರಿಗೆ ನೋವಾಗುವುದಿಲ್ಲವೇ.. ನಮ್ಮ ಮನಸ್ಸಿನ ಮೇಲೆ ನೋವು ಆಗುವುದಿಲ್ಲವೇ.. ಆದರೆ ಪ್ರತೀ ಬಾರಿ ಅಂತಹುದೇ ಪ್ರಶ್ನೆಗಳನ್ನು ಕೇಳಿ ಕೆದಕಿದರೆ ಅವರ ಮನಸ್ಸಿನಲ್ಲಿ ಯಾವ ಪರಿಣಾಮಗಳು ಉಂಟಾಗಲ್ಲ ಎಂದು ಪ್ರಶ್ನೆ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ರಕ್ಷಿತ್ ಶಿವರಾಂ, ಮಮತಾ ಗಟ್ಟಿ, ನವೀನ್ ಡಿಸೋಜ ಮತ್ತಿತರರಿದ್ದರು.
Government is creating confusion and panic amid School children due to text book row slams Ramanath Rai.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
12-06-26 11:58 am
HK News Staffer
Manoj Kodikere Arrest: ಕೋಕಾ ಕಾಯ್ದೆ- ಕಿಡ್ನಾಪ್...
11-06-26 08:44 pm
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm