ಬ್ರೇಕಿಂಗ್ ನ್ಯೂಸ್
30-06-22 04:49 pm HK News Desk ಕರಾವಳಿ
ಉಳ್ಳಾಲ, ಜೂ.30: ಉದ್ಯಮಿಯೋರ್ವರು ಸೇರಿ ಮನೆ ಮಂದಿಯೆಲ್ಲ ಕೇರಳದ ಚೋಟಾನಿಕೆರೆ ಭಗವತೀ ಕ್ಷೇತ್ರಕ್ಕೆ ತೆರಳಿದ್ದ ವೇಳೆ ಮನೆಗೆ ಕಳ್ಳರು ಕನ್ನ ಹಾಕಿ ಭಾರೀ ಪ್ರಮಾಣದ ನಗ, ನಗದನ್ನು ಕದ್ದೊಯ್ದ ಘಟನೆ ಉಳ್ಳಾಲ ಬೈಲಿನ ಬಂಗೇರ ಲೇನ್ ಎಂಬಲ್ಲಿ ನಡೆದಿದೆ.
ಉಳ್ಳಾಲಬೈಲು ಬಂಗೇರ ಲೇನ್ ನಿವಾಸಿ ಉದ್ಯಮಿ ಶಿವ ಕೆ. ಎಂಬವರ ಮನೆಗೆ ಕಳ್ಳರು ಕನ್ನ ಹಾಕಿರುವ ಪ್ರಕರಣ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲಿನ ಚಿಲಕ ಒಡೆದು ಒಳ ನುಗ್ಗಿದ ಕಳ್ಳರು ಮೂರು ಕೋಣೆಗಳ ಕಪಾಟು, ಹಾಸಿಗೆಗಳನ್ನ ತಡಕಾಡಿದ್ದು ಸುಮಾರು 13 ಲಕ್ಷ ಮೌಲ್ಯದ 210 ಗ್ರಾಂ ಚಿನ್ನ ಮತ್ತು 37,000 ರೂಪಾಯಿ ನಗದನ್ನ ಎಗರಿಸಿದ್ದಾರೆ.
ಶಿವ ಅವರು ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ಕೇರಳದ ಚೋಟನಿಕೆರೆ ಭಗವತೀ ಕ್ಷೇತ್ರಕ್ಕೆ ಹರಕೆ ತೀರಿಸಲೆಂದು ತೆರಳಿದ್ದರು. ಇಂದು ಬೆಳಗ್ಗೆ ಕುಟುಂಬ ವಾಪಸ್ಸಾಗಿ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.








ಶಿವ ಅವರ ಕುಟುಂಬವನ್ನ ಹತ್ತಿರದಿಂದಲೇ ಬಲ್ಲವರು ಕಳ್ಳತನ ನಡೆಸಿರುವುದಾಗಿ ಶಂಕಿಸಲಾಗಿದೆ. ಶಿವ ಅವರ ಜರ್ಮನ್ ಶೇಫರ್ಡ್ ಸಾಕು ನಾಯಿ ಕಳೆದ ಕೆಲ ದಿನಗಳ ಹಿಂದಷ್ಟೆ ಕಾಯಿಲೆಯಿಂದ ಸತ್ತು ಹೋಗಿತ್ತು. ನಾಯಿ ಇರುವಿಕೆಯ ಬಗ್ಗೆ ತಿಳಿದಿದ್ದ ಕಳ್ಳರು ಅದನ್ನ ಯಾಮಾರಿಸಲು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಚಪಾತಿಯನ್ನು ತಂದಿದ್ದು ನಾಯಿ ಕಾಣಸಿಗದೆ ಅದನ್ನ ಕಂಪೌಡ್ ಹೊರಗಡೆ ಎಸೆದಿದ್ದಾರೆ. ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಟು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಜವಾಯ್ತು ಮನೆ ಮಗನ ಕನಸು !
ಶಿವ ಅವರ ಕಿರಿಯ ಮಗ ಅಶ್ವಿನ್ ಅವರಿಗೆ ನಿನ್ನೆ ಕೇರಳದಿಂದ ಹಿಂದಿರುಗುತ್ತಿದ್ದ ವೇಳೆ ಮನೆಗೆ ಕಳ್ಳರು ಕನ್ನ ಹಾಕುವ ಕನಸು ಬಿದ್ದಿತ್ತಂತೆ. ಕಾಕತಾಳೀಯವೋ ಎಂಬಂತೆ ಇಂದು ಮನೆ ತಲುಪುವಷ್ಟರಲ್ಲಿ ಆತನ ಕನಸು ನಿಜವಾಗಿದೆ.
ಕಳ್ಳತನ ನಡೆದ ಪಕ್ಕದ ಮನೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹೊರ ಜಿಲ್ಲೆಯ ಕಾರ್ಮಿಕರು ವಾಸವಿದ್ದು ಮನೆ ಮಾಲಕರು ತಾರಸಿಯಲ್ಲಿ ಇವರನ್ನ ಅಕ್ರಮವಾಗಿ ನೆಲೆಸಲು ಬಿಟ್ಟಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
Mangalore burglars enter the house of a businessman in Ullal, huge cash and gold robbed. The family had left home and had been to a temple in Kerala. Police assume that someone close to the family who knows the details of the family has committed theft. Ullal police are now in search of the accused.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am