ಬ್ರೇಕಿಂಗ್ ನ್ಯೂಸ್
26-07-22 08:22 pm Mangalore Correspondent ಕರಾವಳಿ
ಮಂಗಳೂರು, ಜುಲೈ 26 : ಬಜರಂಗದಳ ಕಾರ್ಯಕರ್ತರ ಪಬ್ ದಾಳಿ ಹಿಂದೆ ಹಫ್ತಾ ವಸೂಲಿ ಶಂಕೆ ಇದೆ. ದಾರಿ ತಪ್ಪಿದ ಯುವಕರು ನಡೆಸುತ್ತಿರುವ ಹಫ್ತಾ ವಸೂಲಿ ಮಾಡುವ ತಂತ್ರ ಇದಾಗಿದೆ ಎಂದು ವಿಪಕ್ಷ ಉಪ ನಾಯಕ ಯುಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮಾಜಘಾತುಕ ಶಕ್ತಿಗಳು ವ್ಯಾಪಾರಸ್ಥರನ್ನು ಹಫ್ತಾಕ್ಕಾಗಿ ಬೆದರಿಸುತ್ತವೆ. ಸಿಗಬೇಕಾದ ಮಾಮೂಲಿ ಸಿಗದಿದ್ದರೆ ಇಂಥದ್ದೆಲ್ಲ ಮಾಡುತ್ತಾರೆ. ಈ ಎಲ್ಲಾ ಘಟನೆಗಳಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಪ್ರೇರಣೆ. ಮುಖ್ಯಮಂತ್ರಿಗಳು ಈ ಹಿಂದೆ ಸಂಘಟನೆಗಳ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಂಡಾಗ, ಆಕ್ಷನ್ ಗೆ ರಿಯಾಕ್ಷನ್ ಎನ್ನುವ ರೀತಿ ಹೇಳಿಕೆ ಕೊಟ್ಟು ಇಂಥ ಘಟನೆಗಳಿಗೆ ಪರೋಕ್ಷ ಬೆಂಬಲ ನೀಡಿದ್ದರು. ಇಂಥಹ ಧೋರಣೆಗಳೇ ಸಮಾಜಘಾತುಕ ಶಕ್ತಿಗಳಿಗೆ ಪ್ರೇರಣೆಯಾಗುತ್ತದೆ ಎಂದರು.
ನಿನ್ನೆ ದಾಳಿ ಮಾಡಿದ ಸಂದರ್ಭದಲ್ಲೂ ಇದೇ ವಾಕ್ಯವನ್ನು ಯುವಕರು ಹೇಳಿದ್ದಾರೆ. ಪೊಲೀಸರು ಮಾಡದೇ ಇದ್ದರೆ ನಾವು ಬಂದ್ ಮಾಡುತ್ತೇವೆ ಎನ್ನುತ್ತಾರೆ. ಇವರದೇ ಸರಕಾರ ಇದೆ, ಇವರು ಪ್ರತಿಭಟನೆ ಮಾಡಲಿ. ಅಲ್ಲಿ ಅನಗತ್ಯ ಘಟನೆಗಳಾದಲ್ಲಿ ಪೊಲೀಸ್ ದೂರು ನೀಡಲಿ. ಯಾರದೋ ಮಕ್ಕಳು ಖಾಸಗಿ ಜಾಗದಲ್ಲಿ ಇದ್ದರೆ ಅದನ್ನು ಕೇಳೋಕೆ ಇವರು ಯಾರು ? ಮಕ್ಕಳು ತಪ್ಪು ಮಾಡಿದರೆ ಅದನ್ನು ಸರಿ ಮಾಡೋಕೆ ಪೋಷಕರು ಇದ್ದಾರೆ. ಖಾಸಗಿ ಜಾಗದಲ್ಲಿ ಅವರನ್ನು ಜೋರು ಮಾಡಲು ಈ ಯುವಕರು ಯಾರು? ಮಕ್ಕಳಿಗೆ ಜೋರು ಮಾಡಲು ಕಾನೂನಿನಲ್ಲಿ ಪೋಷಕರಿಗೇ ಅಧಿಕಾರ ಇಲ್ಲ. ಹಾಗಿದ್ದ ಮೇಲೆ ಇವರು ಪ್ರಶ್ನೆ ಮಾಡುವುದು, ಜೋರು ಮಾಡುವುದು ಹೇಗೆ. ಇವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು.
ಪಬ್ ಗೆ ನುಗ್ಗಿ ವಿದ್ಯಾರ್ಥಿಗಳಿಗೆ ಮಾನಸಿಕ ಹಲ್ಲೆ, ನಿಂದನೆ ಮಾಡಲು ಇವರಿಗೆ ಅವಕಾಶ ನೀಡಿದ್ದು ಯಾರು? ಇದನ್ನು ಸರ್ಕಾರ ಜನರ ಮುಂದೆ ಇಡಬೇಕಾಗಿದೆ. ಹೊಟೇಲ್ ವ್ಯಾಪಾರಿಗಳು ಕೊರೊನಾ ಕಾರಣದಿಂದ ನಷ್ಟಕ್ಕೀಡಾಗಿ ಈಗಷ್ಟೇ ಮತ್ತೆ ವ್ಯಾಪಾರ ಆರಂಭಿಸಿದ್ದಾರೆ. ಅವರಿಂದ ಹಫ್ತಾಕ್ಕಾಗಿ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಇವರಿಗೆ ಪಬ್, ಬಾರ್ ಗಳು ಬೇಡ ಅಂದ್ರೆ ಲೈಸೆನ್ಸ್ ಬಂದ್ ಮಾಡಲಿ. ಅವರಿಗೆ ಯಾಕೆ ಲೈಸನ್ಸ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ಬಂದ್ ಮಾಡಿದ್ದ ಕ್ಲಬ್ ಗಳನ್ನು ಇವರು ಓಪನ್ ಮಾಡಿದ್ದಾರೆ. ಈಗ ಪಬ್ ದಾಳಿ ಮಾಡಿದ ದಾರಿ ತಪ್ಪಿದ ಯುವಕರಿಗೆ ಇಲ್ಲಿನ ಬೇರೆ ಅಕ್ರಮಗಳು ಕಾಣೋದಿಲ್ವಾ? ಕಾಲೇಜುಗಳಿಗೆ ಬಂಕ್ ಹಾಕಿ ವಿಡಿಯೋ ಗೇಮ್ ಆಡುವ ಮಕ್ಕಳು ಕಾಣೋದಿಲ್ವಾ ಎಂದು ಪ್ರಶ್ನೆ ಮಾಡಿದರು. ಮಂಗಳೂರಿನಲ್ಲಿ ಅಕ್ರಮ ಮಸಾಜ್ ಪಾರ್ಲರ್ ಗಳು ಸಾಕಷ್ಟಿವೆ, ಅದರ ಬಗ್ಗೆ ತನಿಖೆ ಮಾಡಲಿ. ಪ್ರತಿಭಟನೆ ಮಾಡಲಿ. ಯಾಕೆ ಅಲ್ಲಿಂದ ನಿಮಗೆ ಹಫ್ತಾ ಬರುತ್ತಿದೆ ಅಂತಾ ಸುಮ್ಮನಿದ್ದೀರಾ ? ಈ ಬಗ್ಗೆ ಸ್ಥಳೀಯ ಶಾಸಕರು ಯಾಕೆ ಮೌನವಾಗಿದ್ದಾರೆ, ಇದಕ್ಕೆಲ್ಲ ಅವರ ಬೆಂಬಲ ಇದೆಯೇ ಎಂದು ಕೇಳಿದರು.
ಇಂತಹ ಘಟನೆಗಳು ಭವಿಷ್ಯದ ಮಂಗಳೂರಿಗೆ ಮಾರಕವಾಗಿ ಪರಿಣಮಿಸುತ್ತವೆ. ಮಂಗಳೂರಿಗೆ ಕಂಪೆನಿಗಳು ಬರುತ್ತಿಲ್ಲ. ಇದು ಮಂಗಳೂರಿನ ಬೆಳವಣಿಗೆಗೆ ಮಾರಕ ಆಗುತ್ತದೆ. ಸರ್ಕಾರ ಇಂತಹ ಕೃತ್ಯಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಬಾರಿ ಇಂಥ ಅಕ್ರಮಗಳಿಗೆ ಪ್ರತಿಪಕ್ಷಗಳು ಹೇಳುವಂತೆ ಆಗಬಾರದು ಎಂದು ಯುಟಿ ಖಾದರ್ ಹೇಳಿದರು.
Bajarang dal activists disrupt farewell party of college students in Balmatta Mangaluru pub is all for money and CM Basvaraj Bommai is the inspiration behind all this slams MLA UT Khader in Mangalore during a press meet held at congress office. Activists of a pro-Hindutva group in Mangaluru disrupted a farewell party organised by some college students at a pub on Monday night at about 10.30- 11 pm. The attackers numbering about 15 men, mostly in their twenties, claiming to be from the Bajrang Dal forcibly entered the Mangalore Pub `Amnesia- The Lounge,'. It's the same pub that was attacked in 2009 and in a shocking repeat of the 2009 incident.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm