ಬ್ರೇಕಿಂಗ್ ನ್ಯೂಸ್
04-08-22 08:42 pm Mangalore Correspondent ಕರಾವಳಿ
ಮಂಗಳೂರು, ಆ.4 : ಸ್ಪಾರ್ಕಲ್ ಪ್ರೊಡಕ್ಷನ್ ಹೆಸರಿನಲ್ಲಿ ಆರ್‌ಆರ್ ಫಿಲ್ಮ್ ಇಂಟರ್ನ್ಯಾಷನಲ್ ಮತ್ತು ಯುಯನ್ನ್ ಸಿನಿಮಾಸ್ ಸಂಸ್ಥೆಗಳ ಸಹಯೋಗದಲ್ಲಿ ಕೊಂಕಣಿ ಚಲನಚಿತ್ರವೊಂದು ತೆರೆಗೆ ಸಿದ್ಧವಾಗಿದೆ. ಆಲ್ಶಿ ರೆಡ್ಡೆ ಹೆಸರಿನ ಚಿತ್ರ ರೆಡಿಯಾಗಿದ್ದು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ, ನಟ ಗೋಡ್ವಿನ್ ಸ್ಪಾರ್ಕಲ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಡಪದವು, ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವು ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಹಾರರ್ ಕಾಮಿಡಿ ಮತ್ತು ಹಾಸ್ಯಭರಿತ ಚಿತ್ರ ಇದಾಗಿದ್ದು, ನಿರ್ದೇಶನವನ್ನು ಗೋಡ್ವಿನ್ ಸ್ಪಾರ್ಕಲ್ ಮತ್ತು ಹೆರಾ ಪಿಂಟೋ ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ಯತೀಶ್ ಪೂಜಾರಿ ಹಾಗೂ ರಾಯನ್ ಮ್ಯಾಗ್ನೆಟೊ ಸಹಕರಿಸಿದ್ದಾರೆ ಎಂದವರು ತಿಳಿಸಿದರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಗೋಡ್ವಿನ್ ಸ್ಪಾರ್ಕಲ್, ಹೆರಾ ಪಿಂಟೋ ನಟಿಸಿದ್ದು ದೀಪಕ್ ರೈ ಪಾಣಾಜೆ, ವಿಲಿಯಂ ಪಿಂಟೋ ಪದರೆಂಗಿ, ಮರ್ವಿನ್ ಶಿರ್ವಾ, ಸಂದೀಪ್ ಮಲಾನಿ, ರಿಚರ್ಡ್, ಹೆನ್ಲಿ ವಿಶಾಲ್, ಶರಣ್ ಶೆಟ್ಟಿ, ಸಂಪತ್ ಲೋಬೋ, ಸುಮನಾ, ರಾಯನ್ ಮ್ಯಾಗ್ನಿಟೋ, ಇಶಾಂತ್, ಮಹೇಶ್, ಪ್ರಣೀತಾ ಹಾಗು ಇತರ ಕಲಾವಿದರು ಚಿತ್ರದಲ್ಲಿ ವಿವಿಧ ಪಾತ್ರಗಳನ್ನು ಮಾಡಿದ್ದಾರೆ. ಪ್ಯಾಟ್ಸನ್ ಪಿರೇರಾ ಸಂಗೀತ ನಿರ್ದೇಶನ ಮಾಡಿದ್ದು, ವಿಲಿಯಂ ಪಿಂಟೋ ಪದರೆಂಗಿ ಅವರ ಸಂಭಾಷಣೆ ಇದೆ. ಸ್ಪಾರ್ಕಲ್ ಪ್ರೊಡಕ್ಷನ್ ತಂತ್ರಜ್ಞರು ಹಾಗೂ ಪ್ರಜ್ವಲ್ ಸುವರ್ಣ ಮತ್ತು ಇರ್ಶನ್ ಅಲಿ ಛಾಯಾಗ್ರಹಣ ಮಾಡಿದ್ದಾರೆ. ಮೆಲ್ವಿನ್ ಮತ್ತು ಕೃತಿಕ್ ರಾಜ್ ಭಟ್ ಸಹಾಯಕ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ. ಬಾಲಿವುಡ್ ಗಾಯಕರಾದ ಕುನಾಲ್ ಗಾಂಜಾವಾಲ, ಮೋಹಿತ್ ಚೌಹಾನ್ ಮತ್ತು ಲವೀಟ ಲೋಬೊ ಹಾಡಿದ್ದಾರೆ. ಸಾಹಿತ್ಯವನ್ನು ವಿಲ್ಸನ್ ಕಟೀಲ್ ಬರೆದಿದ್ದಾರೆ.
ಜೇಸನ್ ಡಿಸೋಜಾ, ಮರ್ವಿನ್ ಸ್ಪಾರ್ಕಲ್, ಶಾನ್ ಡಿಸೋಜಾ ಮತ್ತು ಸುಶನ್ ರೈ ಮಾವಿನಕಟ್ಟೆ ನಿರ್ಮಾಣ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಸಂಕಲನವನ್ನು ರಾಹುಲ್ ವಶಿಷ್ಠ ಮತ್ತು ಪ್ರತೀಶ್ ಕಾಪು ಮಾಡಿದ್ದಾರೆ. ಹಿನ್ನಲೆ ಸಂಗೀತ ಪ್ರಜೋತ್ ಡೇಸಾ ಮತ್ತು ಎಸ್‌ಎಫ್‌ಎಕ್ಸ್ ಲೊಯ್ ವ್ಯಾಲೆಂಟೈನ್ ನೀಡಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮರ್ವಿನ್ ಶಿರ್ವಾ, ಜೇಸನ್ ಡಿ ಸೋಜಾ, ಪ್ರತೀಶ್ ಕಾಪು ಉಪಸ್ಥಿತರಿದ್ದರು.
The poster of Konkani movie ‘Allshi Redde’, directed by Godwin Sparkle and Hera Pinto was released on Thursday August 4 at press club here. The poster of Konkani movie ‘Allshi Redde’, directed by Godwin Sparkle and Hera Pinto was released on Thursday August 4 at press club here. The movie is produced by Sparkle Productions. ‘Allshi Redde’ is a comedy horror Konkani movie which is expected to release in end of August. Yatish Poojary and Rayan Magneto are the assistant directors.
02-02-25 01:43 pm
HK News Desk
ಆಂಧ್ರ, ಬಿಹಾರಕ್ಕೆ ಒತ್ತು ಕೊಟ್ಟಿದ್ದಾರೆ, ಕರ್ನಾಟಕಕ...
01-02-25 05:12 pm
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
01-02-25 09:51 pm
HK News Desk
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
01-02-25 07:47 pm
Mangalore Correspondent
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
01-02-25 10:11 pm
Mangalore Correspondent
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm