ಬಂಟ್ವಾಳ ; ಜ್ವರ ಪೀಡಿತ ಕಾಲೇಜು ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು

07-09-22 07:21 pm       Mangalore Correspondent   ಕರಾವಳಿ

ತೀವ್ರ ಜ್ವರದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಲೋಕೇಶ್ ಅವರ ಪುತ್ರಿ ಕವಿತಾ (20) ಮೃತ ವಿದ್ಯಾರ್ಥಿನಿ.

ಬಂಟ್ವಾಳ, ಸೆ.7: ತೀವ್ರ ಜ್ವರದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಲೋಕೇಶ್ ಅವರ ಪುತ್ರಿ ಕವಿತಾ (20) ಮೃತ ವಿದ್ಯಾರ್ಥಿನಿ.

ಕವಿತಾ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಮಂಗಳವಾರ ಜ್ವರ ಹೆಚ್ಚಿದ್ದರಿಂದ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದ್ದರಿಂದ ದೇರಳಕಟ್ಟೆ ಆಸ್ಪತ್ರೆಗೆ ಒಯ್ದು ದಾಖಲು ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವಿತಾ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕವಿತಾ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಅಂತಿಮ ಪದವಿ ಓದುತ್ತಿದ್ದರು. ಕಲಿಕೆಯಲ್ಲಿ ಮುಂದಿದ್ದು ಸೆ.12ರಂದು ಪರೀಕ್ಷೆ ನಡೆಯಲಿದ್ದರಿಂದ ಓದಿಗೆ ಗಮನ ಕೊಟ್ಟಿದ್ದಳು. ಇದೇ ವೇಳೆ, ಜ್ವರ ಪೀಡಿತವಾಗಿ ಸಾವು ಕಂಡಿದ್ದಾಳೆ.

A girl student of a college suffering from severe cold and fever passed away in a private hospital after failing to respond to the treatment. Kavita (20), daughter of Amtadi resident Lokesh is the girl who passed away.