ಬ್ರೇಕಿಂಗ್ ನ್ಯೂಸ್
26-10-26 11:53 am HK News Staffer ಕರ್ನಾಟಕ
ಬೆಂಗಳೂರು, ಅ.26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ನಡೆದಿದೆಯೆನ್ನಲಾದ ಸ್ಟಿಂಗ್ ಆಪರೇಷನ್ ಕುರಿತು ಚರ್ಚಿಸಲು ನವೆಂಬರ್ 1- 2ರಂದು ದೆಹಲಿಗೆ ತೆರಳಲಿದ್ದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.
ನವೆಂಬರ್ 1ರಂದು ಎಐಸಿಸಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೋರಿ ಮನವಿ ಮಾಡಿದ್ದು, ನವೆಂಬರ್ 2ರಂದು ಭೇಟಿಯಾಗಲು ರಾಹುಲ್ ಸಮಯ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆಯೆನ್ನಲಾದ ಸ್ಟಿಂಗ್ ಕಾರ್ಯಾಚರಣೆ ಕರ್ನಾಟಕದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ನಕಲಿ ವಿಡಿಯೊ ಮೂಲಕ ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದಿಂದ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಈಗಾಗಲೇ ದೂರು ದಾಖಲಿಸಿದ್ದಾರೆ.
ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಿಡಿಯೊ ಪ್ರಸಾರ ಹಾಗೂ ಇದರ ಹಿಂದೆ ಕಾರ್ಯ ನಿರ್ವಹಿಸಿರುವುದಾಗಿ ಆರೋಪಿಸಲಾಗಿರುವ ಜಾಲದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
26-10-26 11:55 am
HK News Staffer
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
25-10-26 10:26 pm
HK News Desk
ಸ್ಟಿಂಗ್ ರಾಜಕೀಯ, ಸಿಎಂ ಬದಲಾವಣೆ ಕಾಂಗ್ರೆಸಿಗೆ ಹಿನ್...
25-10-26 08:25 pm
ಯುಪಿಐ ಮೇಲಿನ ತೆರಿಗೆ ಪ್ರಸ್ತಾಪಕ್ಕೆ ಅಣ್ಣಾಮಲೈ ವಿರೋ...
24-10-26 10:59 pm
ಕದ್ರಿಯ 'ಕುಡ್ಪೀಸ್ ಫುಡ್ಸ್' ಬೇಕರಿ ಮಳಿಗೆಗೆ ಆಹಾರ...
24-10-26 10:54 pm
ಸ್ಟಿಂಗ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆ...
24-10-26 08:06 pm
26-10-26 12:49 pm
HK News Staffer
ಬೀದರಿನಲ್ಲಿ ಮತ್ತೊಂದು ಎಟಿಎಂ ಕತ್ತರಿಸಿ 23 ಲಕ್ಷ ದರ...
25-10-26 04:33 pm
ಐಷಾರಾಮಿ ಜೀವನಕ್ಕಾಗಿ ಹದಿಹರೆಯದ ಯುವಕರ ದುಷ್ಕೃತ್ಯ ;...
25-10-26 02:49 pm
ಕುಂದಾಪುರ ; ಹಾಸಿಗೆ ಹಿಡಿದಿದ್ದ ಅಂಗವಿಕಲ ಮಗಳನ್ನು ಕ...
25-10-26 01:44 pm
ಸಂಪಾಜೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು- ಲಾರಿ...
25-10-26 01:31 pm