ಬ್ರೇಕಿಂಗ್ ನ್ಯೂಸ್
20-09-22 10:34 pm Mangalore Correspondent ಕರಾವಳಿ
ಮಂಗಳೂರು, ಸೆ.20: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮಾಝ್ ಮುನೀರ್ ಅಹ್ಮದ್ ಎಂಟೆಕ್ ಪದವೀಧರನಾಗಿದ್ದು, ಮಂಗಳೂರು ನಗರದಲ್ಲಿ ಬಲ್ಮಠದ ಅಪಾರ್ಟ್ಮೆಂಟ್ ಒಂದರಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ. ವಾರದ ಹಿಂದೆಯೇ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಂಜೆ ವೇಳೆಗೆ ಶಿವಮೊಗ್ಗ ಪೊಲೀಸರು ಮಂಗಳೂರಿನ ಅಪಾರ್ಟ್ಮೆಂಟ್ ಮನೆಗೆ ಆಗಮಿಸಿ ಮಹಜರು ನಡೆಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪ್ರಕರಣದಲ್ಲಿ ಕೆಲವರು ಬಂಧನಕ್ಕೊಳಗಾಗಿದ್ದರು. ಅದರಲ್ಲಿ ಪ್ರಮುಖ ಆರೋಪಿಗೆ ಭಯೋತ್ಪಾದಕರ ನಂಟು ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ವಿಚಾರಣೆ ವೇಳೆ ಮಂಗಳೂರು ಮತ್ತು ಶಿವಮೊಗ್ಗದ ನಡುವೆ ನಂಟಿದ್ದುದು ಮತ್ತು ಶಿವಮೊಗ್ಗದಲ್ಲಿ ಗಲಭೆಗೆ ಸಂಚು ಹೂಡಿದ್ದು ಕಂಡುಬಂದಿದ್ದರಿಂದ ಪೊಲೀಸರು ತನಿಖೆಯನ್ನು ವಿಸ್ತರಣೆ ಮಾಡಿದ್ದರು. ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಮಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ ಮೂಲತಃ ತೀರ್ಥಹಳ್ಳಿ ನಿವಾಸಿ ಮಾಝ್ ಮುನೀರ್ ಅಹ್ಮದ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗ ನಗರ ನಿವಾಸಿ ಸಯ್ಯದ್ ನಾಸಿರ್ ಎಂಬಾತನನ್ನೂ ಇದೇ ವೇಳೆ ಬಂಧಿಸಿದ್ದಾರೆ. ಮಾಝ್ ಮುನೀರ್ ಜೊತೆಗೇ ಮಂಗಳೂರಿನಲ್ಲಿ ನೆಲೆಸಿದ್ದ ಮಹಮ್ಮದ್ ಶಾರೀಕ್ ತಪ್ಪಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ, ಮಾಝ್ ಮುನೀರ್ ಅಹ್ಮದ್ ಜೊತೆಗಿದ್ದ ಇನ್ನೊಬ್ಬ ಸಹಚರ ಎನ್ನಲಾಗಿರುವ ಅನ್ವರ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದ ಖದೀಮರು
2020ರ ನವೆಂಬರ್ 27ರಂದು ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೈ ಬಟ್ಟಗುಡ್ಡೆ ಎಂಬಲ್ಲಿ ರಸ್ತೆಗೆ ಕಾಣುವಂತಿದ್ದ ಅಪಾರ್ಟ್ಮೆಂಟ್ ಆವರಣ ಗೋಡೆಯಲ್ಲಿ ರಾತ್ರೋರಾತ್ರಿ ಐಸಿಸ್ ಮತ್ತು ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆಯಲಾಗಿತ್ತು. ಬಿಳಿಯ ಗೋಡೆಯಲ್ಲಿ ದಪ್ಪ ಅಕ್ಷರದಲ್ಲಿ ಕಪ್ಪಗಿನ ಶಾಯಿಯಲ್ಲಿ ಸಂಘಿಗಳೇ ಬಾಲ ಎತ್ತಿದರೆ, ನಿಮ್ಮ ಬಾಲ ಕತ್ತರಿಸಲು ಲಷ್ಕರ್ ಬರಬೇಕಾದೀತು ಎನ್ನುವ ಅರ್ಥ ಬರುವಂತೆ ಇಂಗ್ಲಿಷ್ ನಲ್ಲಿ ಬರೆದಿದ್ದರು. ಕೃತ್ಯದ ಬಗ್ಗೆ ತನಿಖೆ ನಡೆಸಿದ್ದ ಕದ್ರಿ ಪೊಲೀಸರಿಗೆ ವಾರ ಕಳೆದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಯಾವುದೇ ಸುಳಿವು ಕೂಡ ಸಿಗದೇ ಇದ್ದುದರಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದರು. ವಾರದ ನಂತರ ಮಂಗಳೂರಿನ ಕೋರ್ಟ್ ರಸ್ತೆಯ ಹಳೆಯ ಕಟ್ಟಡದ ಗೋಡೆಯಲ್ಲೂ ಇದೇ ರೀತಿಯ ಬರಹ ಕಂಡುಬಂದಿತ್ತು.
ಆನಂತರ ಚುರುಕಾಗಿದ್ದ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಇಬ್ಬರನ್ನು ಸೆರೆಹಿಡಿದಿದ್ದರು. ಮಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಮಾಝ್ ಮಹಮ್ಮದ್ ಮತ್ತು ಆತನ ಸಹಚರ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಮಹಮ್ಮದ್ ಶಾರೀಕ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕೋರ್ಟ್ ಆವರಣದಲ್ಲೇ ಮೊದಲೇ ಬರೆದಿದ್ದರು ಮತ್ತು ಅಲ್ಲಿ ಸಾರ್ವಜನಿಕರ ಗಮನ ಸೆಳೆಯದೇ ಇದ್ದುದರಿಂದ ಬಿಜೈನಲ್ಲಿ ಗೋಡೆ ಬರಹ ಬರೆದಿದ್ದಾಗಿ ಹೇಳಿಕೊಂಡಿದ್ದರು. ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆಯಲು ವಿದೇಶದಲ್ಲಿರುವ ಅರಾಫತ್ ಅಲಿ ಎನ್ನುವಾತ ಪ್ರೇರಣೆ ನೀಡಿದ್ದು ಅನ್ನೋದನ್ನೂ ತಿಳಿಸಿದ್ದರು. ಮಂಗಳೂರಿನ ಜೈಲಿನಲ್ಲಿದ್ದ ಅವರನ್ನು ಎನ್ಐಎ ಅಧಿಕಾರಿಗಳು ಆಗಮಿಸಿ ವಿಚಾರಣೆಯನ್ನೂ ನಡೆಸಿದ್ದರು. ಆನಂತರ, 2021ರ ಸೆಪ್ಟಂಬರ್ ತಿಂಗಳಲ್ಲಿ ಅವರಿಬ್ಬರು ಕೂಡ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
ಉಗ್ರರ ಲಿಂಕ್ ಬಯಲಾಗಿದ್ದು ಹೇಗೆ ?
ಮೊನ್ನೆ ಶಿವಮೊಗ್ಗದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಪ್ರೇಮ್ ಸಿಂಗ್ ಎನ್ನುವ ಯುವಕನಿಗೆ ಚಾಕು ಇರಿದ ಪ್ರಕರಣದಲ್ಲಿ ಮತ್ತೆ ಗಲಭೆ ನಡೆಸುವ ಹುನ್ನಾರ ನಡೆಸಲಾಗಿತ್ತು ಅನ್ನೋದು ಆರೋಪಿಗಳ ವಿಚಾರಣೆ ವೇಳೆ ಬಯಲಾಗಿತ್ತು. ಅಲ್ಲದೆ, ಆರೋಪಿಗಳಿಗೆ ಉಗ್ರರ ಲಿಂಕ್ ಇದೆ ಅನ್ನೋದು ತಿಳಿಯುತ್ತಲೇ ಪೊಲೀಸರು, ಅವರು ಹೊಂದಿದ್ದ ನೆಟ್ವರ್ಕ್ ಜಾಲಾಡಿದ್ದರು. ಈ ವೇಳೆ, ತೀರ್ಥಹಳ್ಳಿ ಮೂಲದ ಮಾಝ್ ಮುನೀರ್ ಅಹ್ಮದ್ ಮತ್ತು ಶಿವಮೊಗ್ಗಕ್ಕೂ ಮಂಗಳೂರಿಗೂ ಕೊಂಡಿಯಂತೆ ಕಾರ್ಯಾಚರಿಸುತ್ತಿರೋದು ಕಂಡುಬಂದಿತ್ತು. ಇದು ತಿಳಿಯುತ್ತಲೇ ಪೊಲೀಸರು ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳನ್ನು ಮತ್ತೆ ಅರೆಸ್ಟ್ ಮಾಡಿದ್ದಾರೆ. ಲ್ಯಾಪ್ಟಾಪ್, ಮೊಬೈಲ್ ಇನ್ನಿತರ ತಾಂತ್ರಿಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ದೇಶದ್ರೋಹ ಕಾಯ್ದೆಯಡಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಮೇಲ್ನೋಟಕ್ಕೆ ಈ ಪ್ರಕರಣವನ್ನೂ ಎನ್ಐಐಗೆ ಒಪ್ಪಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕದ್ರಿ ಠಾಣೆಗೆ ಸ್ಪೀಡ್ ಪೋಸ್ಟಲ್ಲಿ ನಾಪತ್ತೆ ದೂರು
ವಾರದ ಹಿಂದೆ ಪೊಲೀಸರು ಮಾಝ್ ಮುನೀರನ್ನು ಪೊಲೀಸರು ಎತ್ತಾಕಿದ್ದ ಬೆನ್ನಲ್ಲೇ ಮಾಝ್ ಮನೆಯವರು ಮಂಗಳೂರಿನ ಕದ್ರಿ ಠಾಣೆಗೆ ಸ್ಪೀಡ್ ಪೋಸ್ಟ್ ಮೂಲಕ ಮಾಝ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ, ಸ್ಪೀಡ್ ಪೋಸ್ಟ್ ಆಗಿದ್ದರಿಂದ ಕದ್ರಿ ಪೊಲೀಸರು ಅದನ್ನು ಪರಿಗಣಿಸಿರಲಿಲ್ಲ. ಬದಲಿಗೆ, ಆತನ ಹೆತ್ತವರನ್ನು ಕದ್ರಿ ಠಾಣೆಗೆ ಬರುವಂತೆ ಸೂಚಿಸಿದ್ದರು. ಆದರೆ ಹೆತ್ತವರು ಕದ್ರಿ ಠಾಣೆಗೆ ಬಂದಿರಲಿಲ್ಲ. ಈ ನಡುವೆ, ಶಿವಮೊಗ್ಗ ಪೊಲೀಸರು ಮಾಝ್ ಮುನೀರನ್ನು ವಶಕ್ಕೆ ಪಡೆದಿದ್ದು ಕದ್ರಿ ಪೊಲೀಸರಿಗೂ ತಿಳಿದಿತ್ತು. ಹೀಗಾಗಿ ನಾಪತ್ತೆ ದೂರನ್ನೂ ಬದಿಗಿಟ್ಟಿದ್ದರು ಅನ್ನೋದು ತಿಳಿದುಬಂದಿದೆ.
ಐಸಿಸ್ ಉಗ್ರರ ಲಿಂಕ್ ; ಶಿವಮೊಗ್ಗ ಪೊಲೀಸರಿಂದ ಮೂವರ ಬಂಧನ, ಮಂಗಳೂರಿನ ಗೋಡೆ ಬರಹ ಪ್ರಕರಣಕ್ಕೆ ನಂಟು !
Two terrorists linked to ISIS arrested in Shivamogga, house raided in Mangalore. The arrested we're connected to Pro terror graffiti on Walls in Mangalore city and also were related in connection with Stabbing case in Shivamogga. The three have been booked under the Unlawful Activities (Prevention) Act (UAPA). Yasin, one of the arrested individuals, was an expert in making IEDs. police believe that more arrests are likely. Two others have been identified as one Shariq and one Maaz. The trio had links to the terror outfit and the police are probing if there were plans to carry out attacks in Karnataka.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
04-09-25 07:57 pm
Mangalore Correspondent
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm