ನೈತಿಕ ಪೊಲೀಸ್ ಗಿರಿ ; ಬಸ್ಸಿನಿಂದ ಹೊರಗೆಳೆದು ಯುವಕರಿಂದ ಹಲ್ಲೆ, ಕ್ರಮ ಕೈಗೊಳ್ತೀವಿ ಎಂದ ಎಡಿಜಿಪಿ 

25-11-22 10:57 pm       Mangalore Correspondent   ಕರಾವಳಿ

ಖಾಸಗಿ ಬಸ್ಸಿನಲ್ಲಿ ಹಿಂದು ಯುವತಿ ಜೊತೆ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಯುವಕನಿಗೆ ನಗರದ ನಂತೂರಿನಲ್ಲಿ ಹಿಂದು ಸಂಘಟನೆ ಯುವಕರು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ತೋರಿಸಿದ್ದರು.

ಮಂಗಳೂರು, ನ.25: ಖಾಸಗಿ ಬಸ್ಸಿನಲ್ಲಿ ಹಿಂದು ಯುವತಿ ಜೊತೆ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಯುವಕನಿಗೆ ನಗರದ ನಂತೂರಿನಲ್ಲಿ ಹಿಂದು ಸಂಘಟನೆ ಯುವಕರು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ತೋರಿಸಿದ್ದರು. ಈ ಬಗ್ಗೆ ಸಾರ್ವಜನಿಕರು ಮಾಡಿದ್ದ ಟ್ವೀಟ್ ದೂರಿಗೆ ಸ್ಪಂದಿಸಿದ ಎಡಿಜಿಪಿ ಅಲೋಕ್ ಕುಮಾರ್, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ಕಾರ್ಕಳ- ನಿಟ್ಟೆ ಮಾರ್ಗವಾಗಿ ಬಸ್ ನಂತೂರು ತಲುಪಿದಾಗ ಮುಸ್ಲಿಂ ಯುವಕನಿಗೆ ನಾಲ್ಕು ಜನ ಯುವಕರು ಬಸ್ಸಿಗೆ ನುಗ್ಗಿ ಹಲ್ಲೆ ನಡೆಸಿದ್ದರು. ಹಿಂದು ಯುವತಿಯ ಜೊತೆ ಬಸ್ಸಿನಲ್ಲಿ ಒಟ್ಟಿಗೆ ಕುಳಿತು ಬರುತ್ತಿದ್ದುದನ್ನು ಗಮನಿಸಿ ಹಿಂದು ಸಂಘಟನೆ ಯುವಕರಿಗೆ ಮಾಹಿತಿ ನೀಡಲಾಗಿತ್ತು. ಮುಸ್ಲಿಂ ಯುವಕನನ್ನು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. 

ಆದರೆ ಪೊಲೀಸ್ ದೂರು ದಾಖಲಾದರೂ ಯುವಕರ ವಿರುದ್ಧ ಕ್ರಮ ಆಗಿಲ್ಲವೆಂದು ಇಮ್ರಾನ್ ಎಂಬವರು ಎಡಿಜಿಪಿಗೆ ಟ್ವೀಟ್ ಮಾಡಿದ್ದರು. ಕ್ರಮ ಜರುಗಿಸಲಾಗುವುದು ಎಂದು ಎಡಿಜಿಪಿ ಮರು ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ. ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು.

Moral policing in Mangaluru, ADGP condemns the act of Bajarang dal members, orders for strict action. A Inter faith youth was assaulted inside a moving bus for being with Hindu Girl.