ಕೃಷ್ಣಾಪುರದಲ್ಲಿ ಫ್ಯಾನ್ಸಿ ಮಾಲಕನ ಹತ್ಯೆ ; ನಾಲ್ಕು ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ, ಕ್ರಿಸ್ಮಸ್ ಆಚರಣೆಗೆ ರಿಯಾಯಿತಿ, ಮದ್ಯದಂಗಡಿ ನಿಷೇಧ 

25-12-22 08:32 am       Mangalore Correspondent   ಕರಾವಳಿ

ಸುರತ್ಕಲ್ ಬಳಿಯ ಕೃಷ್ಣಾಪುರದಲ್ಲಿ ಫ್ಯಾನ್ಸಿ ಸ್ಟೋರ್ ಮಾಲಕನ ಹತ್ಯೆ ಹಿನ್ನೆಲೆ ಮತ್ತೆ ಕೋಮು ದ್ವೇಷದ ವಾತಾವರಣ ನೆಲೆಯಾಗಿದೆ. ಹೀಗಾಗಿ ಸುರತ್ಕಲ್, ಕಾವೂರು, ಪಣಂಬೂರು, ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಮಾಡಿದ್ದಾರೆ. 

ಮಂಗಳೂರು, ಡಿ.25 : ಸುರತ್ಕಲ್ ಬಳಿಯ ಕೃಷ್ಣಾಪುರದಲ್ಲಿ ಫ್ಯಾನ್ಸಿ ಸ್ಟೋರ್ ಮಾಲಕನ ಹತ್ಯೆ ಹಿನ್ನೆಲೆ ಮತ್ತೆ ಕೋಮು ದ್ವೇಷದ ವಾತಾವರಣ ನೆಲೆಯಾಗಿದೆ. ಹೀಗಾಗಿ ಸುರತ್ಕಲ್, ಕಾವೂರು, ಪಣಂಬೂರು, ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಮಾಡಿದ್ದಾರೆ. 

ಇದರಂತೆ ಜನ ಗುಂಪು ಕೂಡುವುದು, ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ಕ್ರಿಸ್ಮಸ್ ಇರುವುದರಿಂದ ಧಾರ್ಮಿಕ ಕಾರ್ಯಕ್ರಮಕ್ಕೆ ಸೆಕ್ಷನ್ ಅಡಿ ರಿಯಾಯಿತಿ ನೀಡಲಾಗಿದೆ. ಚರ್ಚ್ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಇರುವುದಿಲ್ಲ. ‌ಡಿ.25ರ ಬೆಳಗ್ಗೆ 6ರಿಂದ 27ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಇರಲಿದೆ.‌

ಅಲ್ಲದೆ, ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವ ಸಲುವಾಗಿ ಎರಡು ದಿನಗಳ ಕಾಲ ಸೆಕ್ಷನ್ ಹೇರಲಾಗಿರುವ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನೂ ಬಂದ್ ಮಾಡಲಾಗಿದೆ. ರಾತ್ರಿ ವೇಳೆ ಜನಸಂಚಾರ ನಿರ್ಬಂಧಿಸುವ ಉದ್ದೇಶದಿಂದ ಕೈಗಾರಿಕೆ, ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ಪಾಳಿಯನ್ನು ಕಡಿತಕ್ಕೆ ಸೂಚನೆ ನೀಡಲಾಗಿದೆ. ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ವ್ಯಾಪ್ತಿಯ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ವೇಳೆ ಕರ್ತವ್ಯ ನಡೆಸದೆ, ಸಂಜೆ ಆರು ಗಂಟೆ ವೇಳೆಗೆ ಕರ್ತವ್ಯ ಮುಗಿಸಿ ಮನೆ ಸೇರುವಂತೆ ಅವಕಾಶ ನೀಡಬೇಕು. ಕರ್ತವ್ಯದ ಅವಧಿ ಬೆಳಗ್ಗಿನಿಂದ ಸಂಜೆ 6 ಗಂಟೆಗೆ ಕೊನೆಗೊಳಿಸುವಂತೆ ಪೊಲೀಸ್ ಕಮಿಷನರ್ ಆದೇಶ ಮಾಡಿದ್ದಾರೆ.‌

ANI on Twitter: "FIR registered against a Facebook page 'Mangalore Muslim'  for posting derogatory content: N Shashi Kumar, Police Commissioner,  Mangaluru City #Karnataka https://t.co/f2QoZD1Ydg" / Twitter

ಹತ್ಯೆ ಹಿನ್ನೆಲೆಯಲ್ಲಿ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸುರಕ್ಷೆಗಾಗಿ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.‌ ನಿನ್ನೆ ರಾತ್ರಿ 8.30 ರ ಸುಮಾರಿಗೆ ಜಲೀಲ್ ಎಂಬ ವ್ಯಕ್ತಿಯನ್ನು ಕೃಷ್ಣಾಪುರದಲ್ಲಿ ಇರಿದು ಕೊಲ್ಲಲಾಗಿತ್ತು.‌ ಕುಳೂರು ನಿವಾಸಿ ಜಲೀಲ್, ಕೃಷ್ಣಾಪುರದಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದರು.‌ ಯಾವ ಉದ್ದೇಶದಿಂದ ಕೊಲೆ ನಡೆಸಲಾಗಿದೆ. ಏನಾದ್ರೂ ದ್ವೇಷ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾತ್ರಿ ವೇಳೆ ಇಬ್ಬರು ಆಗಂತುಕರು ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದು ಹೋಗಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಒಯ್ಯಲಾಗಿತ್ತು.‌ ಅಲ್ಲಿ ತಲುಪುವಷ್ಟರಲ್ಲಿ ಜಲೀಲ್ ಸಾವನ್ನಪ್ಪಿದ್ದಾರೆ.

ಕೃಷ್ಣಾಪುರದಲ್ಲಿ ವ್ಯಾಪಾರಿಯ ಇರಿದು ಹತ್ಯೆ ; ಅಂಗಡಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳ ಕೃತ್ಯ

Mangalore Section 144 imposed, wine stores closed in Surathkal after Murder of Jaleel Bajpe. A youth was stabbed to death with a knife by miscreants before fleeing the scene in Surathkal on Saturday, December 24 in the evening at Netangady, Katipalla.