ಬ್ರೇಕಿಂಗ್ ನ್ಯೂಸ್
27-12-22 10:29 pm ದಿನೇಶ್ ನಾಯಕ್, ಮಂಗಳೂರು (Correspondent) ಕರಾವಳಿ
ಉಳ್ಳಾಲ, ಡಿ.27: ತುಳುನಾಡಿನಾದ್ಯಂತ ಆರಾಧನೆಗೊಳ್ಳುವ ಕೊರಗಜ್ಜನ ಆದಿ ಸ್ಥಳ ಇರುವುದು ಉಳ್ಳಾಲದ ಮಣ್ಣಿನಲ್ಲಿ. ಮಂಗಳೂರಿನಿಂದ ದಕ್ಷಿಣಕ್ಕೆ ಸಾಗುವ ತೊಕ್ಕೊಟ್ಟು ಜಂಕ್ಷನ್ ಆಸುಪಾಸಿನಲ್ಲಿ ಏಳು ಕಡೆಗಳಲ್ಲಿ ಕೊರಗಜ್ಜನ ಆದಿ ಸ್ಥಳ ಇದೆಯೆಂದು ಜನಪದರು ನಂಬುತ್ತಾರೆ. ಅದರಲ್ಲಿ ಪ್ರಮುಖವಾದ್ದು ಕಲ್ಲಾಪು ಬಳಿಯ ಬುರ್ದುಗೋಳಿ ಕ್ಷೇತ್ರ. ಇದರ ಹಿನ್ನೆಲೆ, ಐತಿಹ್ಯದ ಬಗ್ಗೆ ಕೊರಗಜ್ಜನ ಕೋಲದಲ್ಲಿ ಬಳಕೆಯಾಗುವ ಪಾಡ್ದನದಲ್ಲಿ ವಿಶೇಷ ಮಾಹಿತಿಗಳಿವೆ.
ಇಲ್ಲಿನ ವಿಶೇಷ ಏನಂದ್ರೆ, ಕೊರಗಜ್ಜನ ಜೊತೆಗೆ ಗುಳಿಗಜ್ಜನೂ ಉದ್ಭವ ಶಿಲೆಯ ರೂಪದಲ್ಲಿ ನೆಲೆಗೊಂಡಿದ್ದಾನೆ. ಐತಿಹ್ಯದ ಪ್ರಕಾರ, ದೀವು ದ್ವೀಪದಿಂದ ಬಂದಿದ್ದ ಮಂತ್ರವಾದಿಗಳು ತಮ್ಮ ತಂತ್ರಗಾರಿಕೆಯಿಂದ ವಶಪಡಿಸಿಕೊಂಡು ಕೊರಗಜ್ಜನನ್ನು ತಮ್ಮೂರಿಗೆ ಕರೆದೊಯ್ಯುತ್ತಿದ್ದಾಗಲೇ ಗುಳಿಗಜ್ಜ ಮಂತ್ರವಾದಿಗಳ ಕಣ್ಣು ತಪ್ಪಿಸಿ, ಬುರ್ದುಗೋಳಿಯಲ್ಲೇ ನೆಲೆಸುವಂತೆ ಮಾಡಿದ್ದನಂತೆ.
ಪಾಡ್ದನದ ಉಲ್ಲೇಖದ ಪ್ರಕಾರ, ಕೊರಗ ತನಿಯ ಮಾಯಗೊಂಡ ಬಳಿಕ ದೈವೀ ಶಕ್ತಿಯಾಗಿ ನೆಲೆ ನಿಲ್ಲಲು ನೇತ್ರಾವತಿ ನದಿ ತಟದ ಕಲ್ಲಾಪುವಿನ ಬುರ್ದುಗೋಳಿಗೆ ಬರುತ್ತಾನೆ. ಈ ವೇಳೆ, ಬುರ್ದುಗೋಳಿ ಕ್ಷೇತ್ರದಲ್ಲಿದ್ದ ಕುತ್ತಾರು ಸೀಮೆಯ ರಾಜನ್ ದೈವಗಳಾದ ಪಂಜಂದಾಯ ಮತ್ತು ಬಂಟ ದೈವಗಳು ಚಿಂತೆಯಲ್ಲಿದ್ದವಂತೆ. ಕೊರಗ ತನಿಯ, ರಾಜನ್ ದೈವಗಳಲ್ಲಿ ಚಿಂತೆಗೇನು ಕಾರಣ ಎಂದು ಕೇಳಿದಾಗ, ಉದ್ಯಾವರದ ಅರಸು ದೈವಗಳು ಕುತ್ತಾರು ಪ್ರದೇಶವನ್ನು ಆಕ್ರಮಿಸಿಕೊಂಡಿರುವ ವಿಚಾರ ತಿಳಿಸುತ್ತಾರೆ.
ಉದ್ಯಾವರದ ಅರಸು ದೈವಗಳನ್ನು ಓಡಿಸಿ ಕುತ್ತಾರು ಪ್ರದೇಶವನ್ನು ಮರಳಿಸಿದಲ್ಲಿ ತನಗೇನು ಕೊಡುವಿರಿ ಎಂದು ಕೊರಗ ತನಿಯ ರಾಜನ್ ದೈವಗಳಲ್ಲಿ ಕೇಳುತ್ತಾನೆ. ಆಗ ಅವರು, ಬುರ್ದುಗೋಳಿ ಕ್ಷೇತ್ರವಲ್ಲದೆ ಕುತ್ತಾರಿನಲ್ಲಿ ಏಳು ಕ್ಷೇತ್ರಗಳನ್ನು ನಿನಗೆ ಕೊಡುತ್ತೇವೆ ಎಂದು ವಾಗ್ದಾನ ಮಾಡುತ್ತಾರಂತೆ. ಅದರಂತೆ ಕೊರಗಜ್ಜ ತನ್ನ ಮಾಯಕದ ಶಕ್ತಿಯಿಂದ ಉದ್ಯಾವರದ ಅರಸು ದೈವಗಳನ್ನು ಅಲ್ಲಿಂದ ಪುನಃ ಉದ್ಯಾವರಕ್ಕೆ ಅಟ್ಟುತ್ತಾನೆ. ಕುತ್ತಾರಿನ ರಾಜನ್ ದೈವಗಳು ಕೊಟ್ಟ ಮಾತಿನಂತೆ, ಕುತ್ತಾರಲ್ಲಿ ಏಳು ಕೊಪ್ಪ(ಕ್ಷೇತ್ರ)ಗಳನ್ನು (ಈಗಿನ 7 ಆದಿ ಕ್ಷೇತ್ರಗಳು) ಕೊರಗ ತನಿಯನಿಗೆ ಉಡುಗೊರೆಯಾಗಿ ನೀಡುತ್ತಾರೆ.
ಹೀಗಾಗಿ ಕೊರಗ ತನಿಯ ಏಳು ಕ್ಷೇತ್ರಗಳಲ್ಲಿ ನೆಲೆಗೊಳ್ಳುವ ಮೊದಲೇ ಬುರ್ದುಗೋಳಿಯಲ್ಲಿ ಗುಳಿಗ ದೈವದ ಜೊತೆ ಉದ್ಭವ ಶಿಲೆಯ ರೂಪದಲ್ಲಿ ನೆಲೆ ನಿಂತಿದ್ದ ಎಂದು ಪಾಡ್ದನದಲ್ಲಿ ಉಲ್ಲೇಖಗೊಂಡಿದ್ದನ್ನು ಕೋಲದ ಪಾತ್ರಧಾರಿಗಳು ಹೇಳುತ್ತಾರೆ. ಇದಲ್ಲದೆ, ಈ ನಡುವೆ ಪ್ರದೇಶಕ್ಕೆ ಆಗಮಿಸಿದ್ದ ದೀವು ದ್ವೀಪ ರಾಷ್ಟ್ರದ ಮಂತ್ರವಾದಿಗಳು ಇಲ್ಲಿನ ಉದ್ಭವ ಶಿಲೆಯಲ್ಲಿ ಅಡಗಿರುವ ಕೊರಗಜ್ಜನನ್ನು ವಶೀಕರಿಸಿ ತಮ್ಮ ಊರಿಗೆ ಕೊಂಡೊಯ್ಯಲು ಏಳು ರಾತ್ರಿ, ಏಳು ಹಗಲು ಉಪವಾಸ ವೃತ ಕೈಗೊಂಡು ಹವನಗಳನ್ನ ಮಾಡುತ್ತಾರೆ. ತನಗೋಸ್ಕರ ಮಂತ್ರವಾದಿಗಳು ಉಪವಾಸ ಮಾಡುವುದನ್ನು ತಾಳಲಾರದ ಕೊರಗ ತನಿಯ ಅವರಿಗೆ ಒಲಿಯುತ್ತಾನೆ. ಮಂತ್ರವಾದಿಗಳು ಹಿತ್ತಾಳೆಯ ಪಾತ್ರೆಯಲ್ಲಿ ಅಜ್ಜನನ್ನು ಆವಾಹನೆ ಮಾಡಿ ನೌಕೆಯಲ್ಲಿ ಕೊಂಡೊಯ್ಯುತ್ತಾರೆ. ಆಗ ಅಲ್ಲಿಯೇ ನೆಲೆ ನಿಂತಿದ್ದ ಗುಳಿಗಜ್ಜ ಬುರ್ದುಗೋಳಿ ಕ್ಷೇತ್ರದಲ್ಲಿ ಕೊರಗಜ್ಜ ಇಲ್ಲದಿರುವುದನ್ನು ಕಂಡು ದೃಷ್ಟಿ ಹಾಯಿಸಿದಾಗ ಮಂತ್ರವಾದಿಗಳು ಅಜ್ಜನ ಬಂಧಿಸಿ ನಾವೆಯಲ್ಲಿ ಕೊಂಡೊಯ್ಯುವುದನ್ನು ತಿಳಿಯುತ್ತಾನೆ. ತಕ್ಷಣ ಮಂತ್ರವಾದಿಗಳ ದೃಷ್ಟಿ ಕುರುಡಾಗಿಸಿ ಕೊರಗಜ್ಜನನ್ನ ವಾಪಸ್ ಬುರ್ದುಗೋಳಿ ಕ್ಷೇತ್ರಕ್ಕೆ ಕರೆತಂದು ಜತೆಯಾಗಿ ನೆಲೆಯಾಗುತ್ತಾರೆ.
ಗುಳಿಗ ಮತ್ತು ಕೊರಗಜ್ಜ ದೈವಗಳು ಉದ್ಭವ ಶಿಲೆ ರೂಪದಲ್ಲಿ ಜತೆಯಾಗಿ ನೆಲೆ ನಿಂತಿರುವ ಬುರ್ದುಗೋಳಿ ಪ್ರದೇಶವು ಈಗ ಕಾರಣಿಕ ಕ್ಷೇತ್ರವಾಗಿ ಬೆಳಗುತ್ತಿದೆ. ಇಲ್ಲಿನ ಕ್ಷೇತ್ರಕ್ಕೆ ಇತ್ತೀಚೆಗೆ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಾರೆಯರು ಕೂಡ ಭೇಟಿ ನೀಡುತ್ತಿದ್ದಾರೆ.
Mangalore Ullal Special information about historical Koragajja kola at Kallapu.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm