ಲವ್ ಜಿಹಾದ್ ಪತ್ತೆಗೆ ಸಹಾಯವಾಣಿ ; ವಿಶ್ವ ಹಿಂದು ಪರಿಷತ್ತಿನಿಂದ ಹೊಸ ಪ್ರಯತ್ನ 

30-12-22 03:03 pm       Mangalore Correspondent   ಕರಾವಳಿ

ಕರಾವಳಿ ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವ ಹಿಂದು ಪರಿಷತ್ ಸಹಾಯವಾಣಿ ಆರಂಭಿಸಿದೆ. 

ಮಂಗಳೂರು, ಡಿ.30 : ಕರಾವಳಿ ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವ ಹಿಂದು ಪರಿಷತ್ ಸಹಾಯವಾಣಿ ಆರಂಭಿಸಿದೆ. 

ಹಿಂದು ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಿ ಲವ್ ಜಿಹಾದ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ನೂರಾರು ಹೆಣ್ಣು ಮಕ್ಕಳು ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾಗಿ ಜೀವನವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಹೋದರಿಯರ ರಕ್ಷಣೆಗೆ ವಿಶ್ವ ಹಿಂದು ಪರಿಷತ್ ಮಂಗಳೂರು ಘಟಕದ ವತಿಯಿಂದ ಹೆಲ್ಪ್ ಲೈನ್ (ಸಹಾಯವಾಣಿ) ಪ್ರಾರಂಭಿಸಲಾಗಿದೆ. ಕರೆ ಮಾಡಬೇಕಾದ ಸಂಖ್ಯೆ - 9148658108, ವಾಟ್ಸಪ್ ಸಂಖ್ಯೆ - 9591658108  ವಿಳಾಸ - ಸಂಸ್ಕೃತಿ ಸೇವಾ ಪ್ರತಿಷ್ಠಾನ, ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ದೇವಸ್ಥಾನ ಹತ್ತಿರ ಕದ್ರಿ ಮಂಗಳೂರು. Email - antilovejihadmlr@gmail.com ಆಗಿರುತ್ತದೆ. 

ನಮ್ಮ ಮನೆ, ನೆರೆಹೊರೆ, ಊರುಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ. ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ ಗೆ ಸಂಪರ್ಕಿಸಿ. ಹೆತ್ತವರು / ಪೋಷಕರು ಲವ್ ಜಿಹಾದ್ ಬಗ್ಗೆ ಜಾಗ್ರತೆ ವಹಿಸಿ, ಲವ್ ಜಿಹಾದ್  ಸಂಶಯವಿದ್ದಲ್ಲಿ ನಿಸಂಕೋಚವಾಗಿ ಸಂಪರ್ಕಿಸಿ.. ಲವ್ ಜಿಹಾದ್ ಪ್ರಕರಣಗಳ ವಿವರ / ಫೋಟೋ ಇತ್ಯಾದಿ ವಾಟ್ಸಪ್ ಮೂಲಕ ಕಳುಹಿಸಬಹುದು. ಲವ್ ಜಿಹಾದ್ ಮೂಲಕ ಫೋಟೋ/ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವುದು ಕಂಡುಬಂದಲ್ಲಿ ಈ ಹೆಲ್ಪ್ ಲೈನ್ ನಂಬರ್ ಗೆ ಸಂಪರ್ಕಿಸಿ. ನಿಮ್ಮೆಲ್ಲ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು.‌ ಲವ್ ಜಿಹಾದ್ ಗೆ ಸಂಬಂಧಪಟ್ಟ ಯಾವುದೇ ಸಲಹೆ, ದೂರುಗಳನ್ನು Email ಮೂಲಕ ಕೂಡ ಕಳುಹಿಸಬಹುದು. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುವುದು ಎಂದು ವಿಶ್ವ ಹಿಂದು ಪರಿಷತ್, ಬಜರಂಗದಳ ಪ್ರಕಟಣೆಯಲ್ಲಿ ತಿಳಿಸಿದೆ.‌ ಈ ಕುರಿತ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದ್ದು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Love Jihad help line Number launched by Bajarang dal Vishva Hindu Parishad Mangalore for those who need help.