ಬ್ರೇಕಿಂಗ್ ನ್ಯೂಸ್
30-12-22 08:51 pm Mangalore Correspondent ಕರಾವಳಿ
ಮಂಗಳೂರು, ಡಿ.30: ಕರಾವಳಿಯ ಜನಪದ ಕ್ರೀಡೆ ಕುರಿತಾಗಿ ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ‘ಬಿರ್ದ್ ದ ಕಂಬುಲ’ ಎಂಬ ಹೆಸರಲ್ಲಿ ಸಿನಿಮಾ ಮಾಡುತ್ತಿದ್ದು, ಚಿತ್ರೀಕರಣ ಮುಕ್ತಾಯ ಕಂಡಿದೆ. ತುಳುವಿನಲ್ಲಿ ಚಿತ್ರವನ್ನು ತಯಾರಿಸುತ್ತಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಿಗೆ ಡಬ್ ಮಾಡಿ, ಏಕಕಾಲದಲ್ಲಿ ಎಪ್ರಿಲ್ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರಲಾಗುವುದು ಎಂದು ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ವೀರ ಕಂಬಳ ಎಂದು ಹೆಸರಿದ್ದರೆ, ಆಯಾ ಭಾಷೆಯಲ್ಲಿ ಕಂಬಳದ ಹೆಸರನ್ನು ಆಧರಿಸಿ ಚಿತ್ರದ ಹೆಸರೂ ಬದಲಾಗಲಿದೆ. ಪ್ರಕಾಶ್ ರೈ, ರವಿಶಂಕರ್, ಆದಿತ್ಯ, ರಾಧಿಕಾ ಶೆಟ್ಟಿ ಸೇರಿ ಕನ್ನಡದ ಪ್ರಸಿದ್ಧ ನಟರು ಚಿತ್ರದಲ್ಲಿದ್ದಾರೆ. ಅಲ್ಲದೆ, ತುಳು ಚಿತ್ರರಂಗದ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಕಾಂತಾರ ಚಿತ್ರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಸೇರಿ ಹಲವರು ಬಣ್ಣ ಹಚ್ಚಿದ್ದಾರೆ. ಸಂಪೂರ್ಣ ತುಳುವರ ಜನಪದ ಕ್ರೀಡೆ ಕಂಬಳದ ಕುರಿತಾಗಿಯೇ ಚಿತ್ರ ಕತೆಯಿದ್ದು, ತುಂಬ ವಿಭಿನ್ನವಾಗಿ ಮೂಡಿಬಂದಿದೆ. ಚಿತ್ರದ ಮೂಲಕ ಕರಾವಳಿಯ ಕಂಬಳ ದೇಶ- ವಿದೇಶದಲ್ಲಿ ಹೆಸರಲ್ಲಿ ತುಳುನಾಡಿನ ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಲಿದೆ ಎಂದು ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಕಂಬಳ ಅಪ್ಪಟ ಜನಪದ ಕ್ರೀಡೆಯಾಗಿದ್ದು, ಇದಕ್ಕೂ ಮೊದಲೇ ಪ್ರವಾಸೋದ್ಯಮ ಆಕರ್ಷಿಸಲು ಬಳಕೆ ಮಾಡಬೇಕಿತ್ತು. ದುರಾದೃಷ್ಟ ಎಂದರೆ, ಕಂಬಳವನ್ನು ದೇಶ- ವಿದೇಶಕ್ಕೆ ತಲುಪಿಸುವ ರೀತಿ ಮಾಡಿಲ್ಲ. ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಬಹುತೇಕ ಕಡೆ ಗೋವು, ಕೋಣಗಳನ್ನು ಸಾಕುತ್ತಾರೆ. ಹೀಗಾಗಿ ಕಂಬಳದ ಸ್ಪರ್ಧೆಯನ್ನು ಇಡೀ ದೇಶದಲ್ಲಿ ಜನರ ಬಳಿಗೆ ಒಯ್ದಲ್ಲಿ ಇನ್ನಷ್ಟು ಎತ್ತರಕ್ಕೆ ಒಯ್ಯಬಹುದು. ಆ ನಿಟ್ಟಿನಲ್ಲಿ ಕಂಬಳವನ್ನು ಒಂದು ಹಂತಕ್ಕೆ ಒಯ್ಯಬೇಕು ಎನ್ನುವ ದೃಷ್ಟಿಯಿಂದ ಈ ಸಿನಿಮಾ ಮಾಡಿದ್ದೇನೆ ಎಂದರು ಬಾಬು.
ಚಿತ್ರದಲ್ಲಿ ಸಂಭಾಷಣೆ ಬರೆದಿರುವ ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಈ ಚಿತ್ರವು ತುಳು ಚಿತ್ರರಂಗಕ್ಕೆ ಹೊಸ ಆಯಾಮವನ್ನು ತಂದುಕೊಡಲಿದೆ. ತುಂಬ ವಿಭಿನ್ನವಾಗಿ ಚಿತ್ರ ಮೂಡಿಬಂದಿದ್ದು, ಇದಕ್ಕೆ ರಾಜೇಂದ್ರ ಸಿಂಗ್ ಬಾಬು ಕಾರಣ. ಅಪರೂಪದ ಚಿತ್ರಕ್ಕೆ ಜನರ ಪ್ರೋತ್ಸಾಹ ಬೇಕಾಗಿದೆ ಎಂದು ಹೇಳಿದರು,. ಚಿತ್ರದಲ್ಲಿ ಸ್ವರಾಜ್ ಶೆಟ್ಟಿ ಹೀರೋ ಪಾತ್ರದಲ್ಲಿದ್ದು, ಕಂಬಳದ ಓಟಗಾರನ ಪಾತ್ರ ಮಾಡಿದ್ದಾರೆ. ಕಂಬಳ ಓಟದಲ್ಲಿ ಖ್ಯಾತಿ ಎತ್ತಿರುವ ಶ್ರೀನಿವಾಸ ಗೌಡ ಅವರೂ ಕಂಬಳ ಓಟಗಾರನ ಪಾತ್ರ ಮಾಡಿದ್ದಾರೆ. ನವೀನ್ ಪಡೀಲ್ ಕಂಬಳ ಓಟಗಾರನಾಗಿ ಕಾಲು ಮುರಿದುಕೊಳ್ಳುವ ಪಾತ್ರದಲ್ಲಿದ್ದು, ತನ್ನ ಶಿಷ್ಯ ಸ್ವರಾಜ್ ಶೆಟ್ಟಿಯನ್ನು ಓಟಗಾರನಾಗಿ ಪಳಗಿಸುವ ಕತೆಯಿದೆ.
ಕೊನೆಯ ದಿನದ ಚಿತ್ರೀಕರಣದ ಅಂಗವಾಗಿ ಚಿತ್ರತಂಡದ ಸದಸ್ಯರು ಮಂಗಳೂರಿನ ಉರ್ವಾ ಮೈದಾನದಲ್ಲೇ ಸುದ್ದಿಗೋಷ್ಠಿ ಕರೆದು ಒಂದೂವರೆ ವರ್ಷದ ಶ್ರಮವನ್ನು ಹೇಳಿಕೊಂಡರು. ತುಂಬ ಶ್ರಮ ಪಟ್ಟು ಕೆಲಸ ಮಾಡಿದ್ದು, ಒಂದೆರಡು ಸೀನ್ ಗಳನ್ನು ಡಿಜಿಟಲ್ ಮೂಲಕ ತೆರೆಗೆ ತರಲಾಗಿದೆ. ಆದರೆ ಅದು ಕ್ರಿಯೇಟೆಡ್ ಸೀನ್ ಅನ್ನುವುದು ತಿಳಿಯದಂತೆ ಜಾಗ್ರತೆ ವಹಿಸಲಾಗಿದೆ. ಮಂಗಳೂರು, ಉಡುಪಿ, ಮೂಡುಬಿದ್ರೆ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು ರಾಜೇಂದ್ರ ಸಿಂಗ್. ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್, ರಾಜೇಶ್ ಕುಡ್ಲ, ಸ್ವರಾಜ್ ಶೆಟ್ಟಿ, ಶ್ರೀನಿವಾಸ ಗೌಡ, ನವೀನ್ ಪಡೀಲ್ ಮತ್ತಿತರರು ಸುದ್ದಿಗೋಷ್ಟಿಯಲ್ಲಿದ್ದರು.
Burduda Kambala to hit screens on the april end, Rajendra singh babu.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm